ದೆಹಲಿ ಜೆಎನ್‍ಯುನಲ್ಲಿ ಮತ್ತೆ ರಣಾಂಗಣ – ಮಾಂಸಾಹಾರ ವಿಚಾರಕ್ಕೆ ವಿದ್ಯಾರ್ಥಿಗಳ ಮಾರಾಮಾರಿ

ನವದೆಹಲಿ: ರಾಮನವಮಿ ದಿನದಂದು ಹಾಸ್ಟಲ್‍ನಲ್ಲಿ ಜೆಎನ್‍ಯು ಮತ್ತು ಎಡಪಂಥೀಯರ ನಡುವೆ ಸಂಘರ್ಷ ಉಂಟಾಗಿದ್ದು, ಹಲವು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ(ಜೆಎನ್‍ಯುಎಸ್‍ಯು) ಅಧ್ಯಕ್ಷೆ ಐಶೆ ಘೋಷ್ ಭಾನುವಾರ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಸದಸ್ಯರು ವಿದ್ಯಾರ್ಥಿಗಳನ್ನು ಕ್ಯಾಂಪಸ್‍ನಲ್ಲಿ ಮಾಂಸಾಹಾರ ತಿನ್ನುವುದನ್ನು ತಡೆದು ಹಿಂಸಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆ ಎಬಿವಿಪಿ ಸದಸ್ಯರು ಸಂಜೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದ ಕೆಲವೆಡೆ ಗುಡುಗು ಸಹಿತ ಭಾರೀ ಮಳೆ, ಹಾನಿ

ಮೆಸ್ ಕಾರ್ಯದರ್ಶಿ ಮೇಲೂ ಎಬಿವಿಪಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಲಾಟೆ ವೇಳೆ ಎರಡು ಗುಂಪಿನ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಉಪ ಪೊಲೀಸ್ ಆಯುಕ್ತ ಮನೋಜ್.ಸಿ ತಿಳಿಸಿದ್ದಾರೆ.

ಎಐಎಸ್‍ಎ ಸದಸ್ಯರು ಈ ಘಟನೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ನರಳಡುತ್ತಿರುವ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ, ವಿದ್ಯಾರ್ಥಿಗಳಿಗೆ ತೀವ್ರ ರಕ್ತಸ್ರಾವವಾಗಿದ್ದು, ಅವರು ನರಳಾಡುತ್ತಿರುವ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಎಬಿವಿಪಿ ಸದಸ್ಯರು ಗಾಯಗೊಂಡ ವಿದ್ಯಾರ್ಥಿಯ ವೀಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

ಈ ಕುರಿತು ಫೋಷ್ ಟ್ಟಿಟ್ಟರ್‌ನಲ್ಲಿ, ಸ್ನೇಹಿತರೇ, ಎಬಿವಿಪಿ ಮತ್ತೆ ದಾಳಿ ಮಾಡಿದೆ. ಮೊದಲು ಅವರು ಕಾವೇರಿ ಹಾಸ್ಟೆಲ್‍ನಲ್ಲಿ ಎಲ್ಲರಿಗೂ ಮಾಂಸಾಹಾರಿ ನಿಷೇಧ ಹೇರಲು ಪ್ರಯತ್ನಿಸಿದರು. ಅದಕ್ಕೆ ಕೆಲವು ವಿದ್ಯಾರ್ಥಿಗಳು ಫುಡ್‍ಫ್ಯಾಸಿಸಂ ವಿರುದ್ಧ ನಿಂತಾಗ, ಈ ಸಂಘ ಹಿಂಸಾಚಾರಕ್ಕೆ ಇಳಿದಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳು ಗಂಭೀರ ಗಾಯಗಳನ್ನು ಎದುರಿಸುತ್ತಿದ್ದಾರೆ ಎಮಧು ಬರೆದು ವೀಡಿಯೋ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ನಿಷೇಧದ ನಡುವೆಯೂ ಶೋಭಾಯಾತ್ರೆ- ಎಸ್‍ಪಿ ವಾರ್ನಿಂಗ್‍ನಿಂದ ಜಾಗ ಖಾಲಿ ಮಾಡಿದ ಮುತಾಲಿಕ್

ಎಬಿವಿಪಿ ಸದಸ್ಯರು ಸಹ ಗಾಯಗೊಂಡ ವಿದ್ಯಾರ್ಥಿಯ ವೀಡಿಯೋ ಟ್ವೀಟ್ ಮಾಡಿದ್ದು ಎಡ ವಿದ್ಯಾರ್ಥಿಗಳು ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *