Thug Life: ಕಮಲ್ ಹಾಸನ್ ಜೊತೆ ಚಿತ್ರೀಕರಣದಲ್ಲಿ ನಟ ಸಿಂಬು ಭಾಗಿ- ಲೀಕ್ ಆಯ್ತು ಫೋಟೋ

ಕಾಲಿವುಡ್ ಸ್ಟಾರ್ ನಟ ಕಮಲ್ ಹಾಸನ್ (Kamal Hasaan) ಸದ್ಯ ಮಣಿರತ್ನಂ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ‘ಥಗ್ ಲೈಫ್’ (Thug Life) ಸಿನಿಮಾದ ಶೂಟಿಂಗ್ ದೆಹಲಿಯಲ್ಲಿ ಭರದಿಂದ ಸಾಗುತ್ತಿದೆ. ಚಿತ್ರೀಕರಣ ಫೋಟೋವೊಂದು ಲೀಕ್ ಆಗಿದೆ. ಕಮಲ್ ಹಾಸನ್ ಜೊತೆ ಭಾಗಿಯಾಗಿರುವ ಸಿಂಬು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಕಮಲ್ ಹಾಸನ್ ನಟನೆಯ 234ನೇ ಚಿತ್ರ ಇದಾಗಿದ್ದು, 36 ವರ್ಷಗಳ ನಂತರ ಮಣಿರತ್ನಂ ಜೊತೆ ಕೈಜೋಡಿಸಿದ್ದಾರೆ. ಇನ್ನೂ ‘ಥಗ್ ಲೈಫ್’ ಚಿತ್ರವು ಏಪ್ರಿಲ್ ಕೊನೆಯ ವಾರದಿಂದ ದೆಹಲಿಯಲ್ಲಿ ಶೂಟಿಂಗ್‌ಗಾಗಿ ಚಿತ್ರತಂಡ ಬೀಡು ಬಿಟ್ಟಿದೆ. ಮೇ 12ರವರೆಗೂ ಚೆನ್ನೈ ಮತ್ತು ದೆಹಲಿಯಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಇದನ್ನೂ ಓದಿ:ಥೈಲ್ಯಾಂಡ್ ಬೀಚ್: ಬಿಕಿನಿಯಲ್ಲಿ ಕಾಣಿಸಿಕೊಂಡ ದಿಶಾ

ಕಮಲ್ ಹಾಸನ್ ನಟನೆಯ ಸಿನಿಮಾದಲ್ಲಿ ತಮಿಳು ನಟ ಸಿಂಬು (Simbu) ಎಂಟ್ರಿ ಕೊಟ್ಟಿದ್ದಾರೆ. ಕಮಲ್ ಜೊತೆ ಸಿಂಬು ಚಿತ್ರೀಕರಣಕ್ಕೆ ಭಾಗಿಯಾಗಿರುವ ಫೋಟೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ ಕಮಲ್, ಅಭಿರಾಮಿ, ಸಿಂಬು ಇದ್ದಾರೆ. ಕಮಲ್ ಸಖತ್ ಯಂಗ್ ಆಗಿ ಕಾಣಿಸಿಕೊಂಡ್ರೆ, ಸಿಂಬು ಕಪ್ಪು ಕನ್ನಡಕ ಧರಿಸಿರೋದು ನೋಡುಗರ ಗಮನ ಸೆಳೆದಿದೆ.

‘ಥಗ್ ಲೈಫ್’ ಸಿನಿಮಾದಲ್ಲಿ ಕಮಲ್ ಹಾಸನ್, ಸಿಂಬು, ಅಭಿರಾಮಿ, ನಾಸರ್, ಜಯಂ ರವಿ, ತ್ರಿಶಾ, ಗೌತಮ್ ಕಾರ್ತಿಕ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್‌ನಲ್ಲಿದೆ ಚಿತ್ರತಂಡ.