ಬೀದಿ ನಾಯಿ, ದನಗಳಿಗೆ ವಿಶೇಷ ಆರೈಕೆ ಮಾಡ್ತಾರೆ ತುಮಕೂರಿನ ವಕೀಲ ನಟರಾಜು

ತುಮಕೂರು: ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿರೋ ನಟರಾಜು ಅವರಿಗೆ ಮೂಕಪ್ರಾಣಿಗಳೆಂದರೆ ಅಚ್ಚುಮೆಚ್ಚು. ಇವರು ಅನಾರೋಗ್ಯಕ್ಕೀಡಾಗೋ ಹತ್ತಾರು ಹಸುಗಳು, ನೂರಾರು ಬೀದಿ ನಾಯಿಗಳ ರಕ್ಷಕರಾಗಿದ್ದಾರೆ.


ವೃತ್ತಿಯಲ್ಲಿ ವಕೀಲರಾಗಿದ್ದರೂ ಇವರ ಪ್ರವೃತ್ತಿ ಮಾತ್ರ ಮೂಕ ಪ್ರಾಣಿಗಳ ರಕ್ಷಣೆ ಮಾಡುವುದು. ಹಸುಗಳು, ನಾಯಿಗಳು ಅಂದರೆ ಎಲ್ಲಿಲ್ಲದ ಅಕ್ಕರೆ. 8 ವರ್ಷಗಳಿಂದ ಸಾಕು ನಾಯಿ, ಬೀದಿ ನಾಯಿ ಎಂಬ ಬೇಧವಿಲ್ಲದೆ ಆರೈಕೆ ಮಾಡ್ತಿದ್ದಾರೆ. ಬೀದಿ ನಾಯಿಮರಿಗಳನ್ನ ಬೇರೆಯವರಿಗೆ ನೀಡಿ, ಅವುಗಳಿಗೆ ವಾರಕ್ಕೊಮೆ ವಿಶೇಷ ಆಹಾರ ಕೊಟ್ಟು ಬರ್ತಾರೆ. ನಟರಾಜು ಅವರು ಬಂದರೆ ಸಾಕು ನಾಯಿಗಳು ಓಡೋಡಿ ಬರ್ತವೆ.

ಬಿಡಾಡಿ ದನಗಳು ಕಂಡರೂ ಮೈ ಸವರಿ ಮುದ್ದು ಮಾಡ್ತಾರೆ. ಹಸುಗಳು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅವುಗಳಿಗೆ ವಿಶೇಷ ಆರೈಕೆ ಮಾಡ್ತಾರೆ. ಪಶು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸ್ತಾರೆ. ಮನುಷ್ಯರಿಗೆ ಮನುಷ್ಯರೇ ಶತ್ರುಗಳು ಅನ್ನೋ ಈ ಕಾಲದಲ್ಲಿ ಮೂಕ ಪ್ರಾಣಿಗಳಿಗಾಗಿ ಮಿಡಿಯುವ ಲಾಯರ್ ನಟರಾಜು ಕಾರ್ಯ ಶ್ಲಾಘನಾರ್ಹವಾಗಿದೆ.

https://www.youtube.com/watch?v=8mygngfrIyw

Comments

Leave a Reply

Your email address will not be published. Required fields are marked *