ಸಂಗೀತ ಲೋಕವನ್ನು ದಶಕಗಳ ಕಾಲ ಆಳಿದ ರಾಣಿ ಲತಾ ಮಂಗೇಶ್ಕರ್‌: ಪಾಕ್‌ ಸಚಿವ

ನವದೆಹಲಿ: ಖ್ಯಾತ ಹಿನ್ನೆಲೆ ಗಾಯಕಿ, ಭಾರತ ರತ್ನ ಪುರಸ್ಕೃತೆ ಲತಾ ಮಂಗೇಶ್ಕರ್‌ ಅವರ ನಿಧನಕ್ಕೆ ಪಾಕಿಸ್ತಾನದ ಮಾಹಿತಿ ಸಚಿವ ಫವಾದ್‌ ಚೌದರಿ ಸಂತಾಪ ಸೂಚಿಸಿದ್ದಾರೆ.

ಸಂಗೀತ ಲೋಕದ ದಂತಕಥೆ ಇನ್ನಿಲ್ಲ. ಸಂಗೀತ ಜಗತ್ತನ್ನು ದಶಕಗಳ ಕಾಲ ಆಳಿದ ಸುಮಧುರ ಕಂಠದ ರಾಣಿ ಲತಾ ಮಂಗೇಶ್ಕರ್‌. ಅವರು ಸಂಗೀತ ಕಿರೀಟವಿಲ್ಲದ ರಾಣಿಯಾಗಿದ್ದರು. ಅವರ ಧ್ವನಿಯು ಎಲ್ಲಾ ಕಾಲಕ್ಕೂ ಜನರ ಹೃದಯವನ್ನು ಆಳುತ್ತಿರುತ್ತದೆ ಎಂದು ಟ್ವೀಟ್‌ ಮಾಡಿ ಸ್ಮರಿಸಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಎರಡು ದಿನ ಶೋಕಾಚರಣೆ

ಫವಾದ್‌ ಚೌದರಿ ಅವರು ಉರ್ದು ಹಾಗೂ ಇಂಗ್ಲಿಷ್‌ನಲ್ಲಿ ಟ್ವೀಟ್‌ ಮಾಡಿ ಲತಾ ಮಂಗೇಶ್ಕರ್‌ ಅವರಿಗೆ ಸಂತಾಪ ಸೂಚಿಸಿದ್ದಾರೆ.

ಲತಾ ಮಂಗೇಶ್ಕರ್‌ ಅವರು ಭಾರತದ ಗಡಿಯಾಚೆಗೂ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಪಾಕಿಸ್ತಾನ ಸರ್ಕಾರಿ ಟೆಲಿವಿಷನ್‌ ಕೂಡ ಲತಾ ಅವರ ಜೀವನ, ಸಾಧನೆ ಸುದ್ದಿಯನ್ನು ಪ್ರಸಾರ ಮಾಡಿದೆ. ಇದನ್ನೂ ಓದಿ: ಲತಾ ಮಂಗೇಶ್ಕರ್‌ಗೆ ಕಲಾವಿದ ಬಾದಲ್ ನಂಜುಂಡಸ್ವಾಮಿ ವಿಶೇಷ ನಮನ

ಕೊರೊನಾ ಸೋಂಕು ಹಾಗೂ ಅಂಗಾಂಗ ವೈಫಲ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು ಕೊನೆಯುಸಿರೆಳೆದರು. ಮುಂಬೈನ ಕ್ಯಾಂಡಿ ಆಸ್ಪತ್ರೆಯ ತ್ರೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

Comments

Leave a Reply

Your email address will not be published. Required fields are marked *