ಕೂಡ್ಲು ನದಿ ತಟದಲ್ಲಿ ನಟೋರಿಯಸ್ ನಕ್ಸಲ್ ವಿಕ್ರಂ ಗೌಡ ಅಂತ್ಯಸಂಸ್ಕಾರ

– ಸಹೋದರ, ಸಹೋದರಿ, ಕುಟುಂಬ, ಗ್ರಾಮಸ್ಥರು ಭಾಗಿ

ಉಡುಪಿ: ಪೀತಬೈಲ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಾವಿಗೀಡಾದ ನಕ್ಸಲ್ ನಾಯಕ ವಿಕ್ರಂ ಗೌಡ (Vikram Gowda) ಅಂತ್ಯಸಂಸ್ಕಾರವನ್ನು ಹುಟ್ಟೂರಾದ ಕೂಡ್ಲು ನದಿ ತಟದಲ್ಲಿ ಬುಧವಾರ ನೆರವೇರಿಸಲಾಯಿತು.

ಕುಟುಂಬಸ್ಥರು, ಗ್ರಾಮಸ್ಥರು, ಆಪ್ತರು ಅಂತಿಮ ವಿಧಿವಿಧಾನದಲ್ಲಿ ಭಾಗಿಯಾದರು. ಈ ವೇಳೆ ಪೊಲೀಸರು ಉಪಸ್ಥಿತರಿದ್ದರು. ಕೂಡ್ಲು ನದಿಯ ತಟದಲ್ಲಿ ವಿಕ್ರಮ್ ಗೌಡ ಪಂಚಭೂತದಲ್ಲಿ ಲೀನವಾಗಿದ್ದಾನೆ. ಈ ಮೂಲಕ ಎರಡು ದಶಕದ ಹೋರಾಟದ ಅಧ್ಯಾಯ ಮುಗಿದಿದೆ. ಇದನ್ನೂ ಓದಿ: ವಿಕ್ರಂಗೌಡ ಎನ್‍ಕೌಂಟರ್ ಯಾವುದೇ ಪ್ಲ್ಯಾನ್ ಮಾಡಿ ಮಾಡಿಲ್ಲ, ಇದು ಪರ್ಫೆಕ್ಟ್‌: ಪ್ರಣಬ್ ಮೊಹಂತಿ

ಸೋಮವಾರ ನಕ್ಸಲರು ಮತ್ತು ನಕ್ಸಲ್ ನಿಗ್ರಹ ಪಡೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂ ಗೌಡ ಹತ್ಯೆಯಾಗಿದ್ದ. ಹೆಬ್ರಿ ತಾಲೂಕಿನ ಸೋಮೇಶ್ವರ ನಾಡ್ಪಾಲು ಗ್ರಾಮದ ಕೂಡ್ಲು ನಿವಾಸಿ ವಿಕ್ರಂ ಹಲವು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ.

ನಕ್ಸಲ್ ನಾಯಕ ವಿಕ್ರಂ ಗೌಡ 61 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಪೀತಬೈಲ್‌ನಲ್ಲಿ ಆಹಾರ ಪದಾರ್ಥ ತೆಗೆದುಕೊಳ್ಳಲು ಬಂದಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಇದನ್ನೂ ಓದಿ: ವಿಕ್ರಂ ಗೌಡ ಮೃತದೇಹ ಸಾಗಿಸುತ್ತಿದ್ದ ಅಂಬುಲೆನ್ಸ್‌ ಪಲ್ಟಿ