ಅಮೆರಿಕದಲ್ಲಿ ದುಷ್ಕರ್ಮಿಯ ಗುಂಡಿಗೆ 20 ಬಲಿ, 100 ಮಂದಿಗೆ ಗಾಯ: ವಿಡಿಯೋ ನೋಡಿ

ಲಾಸ್ ವೆಗಾಸ್: ಅಮೆರಿಕದ ಲಾಸ್ ವೆಗಾಸ್‍ನಲ್ಲಿ ಸಂಗೀತೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಏಕಾಏಕಿ ಗುಂಡಿನ ದಾಳಿಯನ್ನು ನಡೆಸಿದ್ದಾನೆ. ಇದರ ಪರಿಣಾಮ ಸುಮಾರು 20 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದಾಳಿಕೋರನನ್ನು ಸ್ಥಳಿಯ ಲಾಸ್ ವೆಗಾಸ್‍ನ ವ್ಯಕ್ತಿಯೆಂದು ಗುರುತಿಸಲಾಗಿದ್ದು, ಪೊಲೀಸರ ಗುಂಡಿಗೆ ದಾಳಿಕೋರ ಬಲಿಯಾಗಿದ್ದಾನೆ. ಆದರೆ ಅವನು ಯಾವ ಉಗ್ರಗಾಮಿಗಳೊಂದಿಗೆ ಜೊತೆ ಸಂಪರ್ಕ ಹೊಂದಿದ್ದಾನೆ ಈ ದಾಳಿಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ ಎಂಬುದಾಗಿ ವರದಿಯಾಗಿದೆ.

ಲಾಸ್ ವೆಗಾಸ್ ಇಂದು ಪ್ರಮುಖವಾದ ರೆಸಾರ್ಟ್ ನಗರವಾಗಿದೆ. ಇದು ಜೂಜಾಟ, ಶಾಂಪಿಂಗ್ ಮತ್ತು ರಾತ್ರಿಗಳ ಪಾರ್ಟಿ ಜೀವನಕ್ಕೆ ಹೆಸರುವಾಸಿಯಾಗಿದೆ. ಸುಮಾರು ರಾತ್ರಿ 10 ಗಂಟೆಯಲ್ಲಿ ಗುಂಡಿನ ದಾಳಿ ಆರಂಭವಾಗಿದೆ.

ಮ್ಯಾಂಡೆಲೇ ಬೇ ರೆಸಾರ್ಟ್ ಮತ್ತು ಕ್ಯಾಸಿನೋ ಸಮೀಪ ಕಳೆದ ಮೂರು ದಿನಗಳಿಂದ ರೂಟ್ 91 ಹಾರ್ವೆಸ್ಟ್ ಉತ್ಸವ ನಡೆಯುತ್ತಿದ್ದು, ಭಾನುವಾರ ಕೊನೆಯ ದಿನದ ಅದ್ಧೂರಿ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಂದೂಕು ಹಿಡಿದಿದ್ದ ಅಪರಿಚಿತ ವ್ಯಕ್ತಿ ಮಂಡೇಯ್ ಕೊಲ್ಲಿಯ 32 ನೇ ಮಹಡಿಯಿಂದ ಏಕಾಏಕಿ ಮನ ಬಂದಂತೆ ಗುಂಡಿನ ದಾಳಿಯನ್ನು ನಡೆಸಿದ್ದಾನೆ. ಗುಂಡಿನ ದಾಳಿ ಆರಂಭವಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದು ಅವರು ಪ್ರತಿ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಿಂದ ಜನರು ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡಲು ಪ್ರಾರಂಭಿಸಿದ್ದಾರೆ.

ಮ್ಯಾಂಡಲೆ ಬೇ ಹೋಟೆಲ್ ಮ್ಯಾಕ್ಕ್ರಾನ್ ಇಂಟರ್‍ನ್ಯಾಷನಲ್ ವಿಮಾನ ನಿಲ್ದಾಣದ ಸಮೀಪದಲ್ಲಿದೆ. ಆದ್ದರಿಂದ ಈ ದಾಳಿ ಆರಂಭವಾದ ತಕ್ಷಣ ಟ್ವಿಟ್ಟರ್‍ನಲ್ಲಿ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಸದ್ಯಕ್ಕೆ ದಾಳಿಯಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. 100 ಕ್ಕಿಂತ ಹೆಚ್ಚಿನ ಜನರು ಗಾಯಳಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ 14 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.

https://twitter.com/victorialomba_1/status/914817446883811328

https://twitter.com/Breaking911/status/914815962066669570

https://twitter.com/supazeez/status/914813540103524352

Comments

Leave a Reply

Your email address will not be published. Required fields are marked *