ಬಾಂಬ್ ನಾಗನ ಕೊಠಡಿಯ ಮಂಚದ ಕಳಗೆ ಸಾವಿರ ಕೋಟಿ ಮೌಲ್ಯದ ಭೂ ದಾಖಲೆ ಪತ್ತೆ – ನಾಗನ ಹೈಫೈ ಮನೆ ಹೇಗಿದೆ ಗೊತ್ತಾ?

ಬೆಂಗಳೂರು: ಶ್ರೀರಾಂಪುರದ ಮಾಜಿ ಕಾರ್ಪೋರೇಟರ್ ಕಮ್ ಮಾಜಿ ರೌಡಿಶೀಟರ್ ಬಾಂಬ್ ನಾಗನ ಬಗ್ಗೆ ಬಗೆದಷ್ಟು ಕಥನ ಹೊರಬೀಳ್ತಿವೆ. ಬಾಂಬ್ ನಾಗನ ಮನೆ ಹಾಗೂ ಟ್ರಸ್ಟ್ ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರಿಗೆ 1,000 ಕೋಟಿಗೂ ಹೆಚ್ಚು ಮೌಲ್ಯದ ಭೂದಾಖಲೆ ಹಾಗೂ 14.8 ಕೋಟಿ ರೂ. ಮೊತ್ತದ ರದ್ದಾದ ನೋಟುಗಳು ಸಿಕ್ಕಿವೆ. ಇಷ್ಟೆಲ್ಲಾ ರದ್ದಾದ ನೋಟುಗಳು ಸಿಕ್ಕಿದ್ದು ಭಗವದ್ಗೀತೆ ಮಧ್ಯೆ.

7 ಭಗವದ್ಗೀತೆ ಮತ್ತು 14.8 ಕೋಟಿ: ಬಾಂಬ್ ನಾಗನ ಕಚೇರಿಯ 4ನೇ ಮಹಡಿಯಲ್ಲಿ ಹೋಂ ಥಿಯೇಟರ್ ಇದೆ. ಈ ಹೋಂ ಥಿಯೇಟರ್‍ನಲ್ಲಿ ಮರದ ಹಲಗೆ ಮೇಲೆ ನೋಟಿನ ಕಂತೆ ಜೋಡಿಸಲಾಗಿತ್ತು. ಯಾರಿಗೂ ಕಾಣಬಾರದು ಎಂದು ಸುತ್ತಲೂ ಹಾಲೋಬ್ರಿಕ್ಸ್ ಜೋಡಿಸಿಟ್ಟಿದ್ದ ಬಾಂಬ್ ನಾಗ. ನೋಟಿನ ಕಂತೆಗಳ ಮೇಲೆ 7 ಭಗವದ್ಗೀತೆಯ ಪುಸ್ತಕಗಳನ್ನು ಜೋಡಿಸಿ ಹೊದಿಕೆಗಳಿಂದ ಮುಚ್ಚಿಟ್ಟಿದ್ದ. ಪೊಲೀಸರು ಅನುಮಾನದ ಮೇಲೆ ಹೊದಿಕೆ ಹಾಗೂ ಭಗವದ್ಗೀತೆಯನ್ನು ತೆಗೆದಾಗ ಹಣ ಪತ್ತೆಯಾಗಿದೆ.

ಬಾಂಬ್ ನಾಗನ ಕೊಠಡಿಯ ಮಂಚದ ಕೆಳಗೆ 1,000 ಕೋಟಿ ರೂ. ಮೌಲ್ಯದ ಭೂ ದಾಖಲೆ ಪತ್ತೆಯಾಗಿದೆ. ಭೂ ದಾಖಲೆಗಳು ಬೇರೆ ಬೇರೆಯವರ ಹೆಸರಿನಲ್ಲಿದ್ದು, ಪೊಲೀಸರಿಂದ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ.

ಹೈ ಫೈ ಮನೆ: ಹೊರಗಿನಿಂದ ನೋಡುವುದಕ್ಕೆ ಸಾಧಾರಣ ಕಟ್ಟಡದಂತೆ ಕಾಣುವ ಬಾಂಬ್ ನಾಗನ ಮನೆಯ ಒಳಾಂಗಣ ಸಂಪೂರ್ಣ ಹೈಫೈ. ನಡುಮನೆ, ಅಡುಗೆ ಕೋಣೆ, ಶೌಚಗೃಹ, ವಿಶ್ರಾಂತಿ ಕೊಠಡಿ ಮತ್ತು ದೊಡ್ಡ ಗಾತ್ರದ ಆರು ಬೆಡ್‍ರೂಮ್‍ಗಳಿವೆ. ಬಾಂಬ್ ನಾಗನ ಮನೆ ಹಾಗೂ ಕಚೇರಿ ಹೊರಭಾಗದಲ್ಲಿ 28 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 4ನೇ ಮಹಡಿಯಲ್ಲಿರುವ ಹೋಂ ಥಿಯೇಟರ್‍ನಲ್ಲೇ ಕುಳಿತು ಹೊರಗಿನ ದೃಶ್ಯ ವೀಕ್ಷಿಸ್ತಿದ್ದ ಬಾಂಬ್ ನಾಗ. ಪೊಲೀಸರು ತನ್ನ ಮನೆ ಅಥವಾ ಕಚೇರಿಗೆ ಎಂಟ್ರಿ ಕೊಡ್ತಿದ್ದಂತೆ ಬೇರೊಂದು ಬಾಗಿಲಿನ ಮೂಲಕ ಎಸ್ಕೇಪ್ ಆಗ್ತಿದ್ದ.

ನಾಗನ ವಿರುದ್ಧ ಕೋಕಾಸ್ತ್ರ: ಸದ್ಯ ಪರಾರಿಯಾಗಿರೋ ಬಾಂಬ್ ನಾಗನ ಪತ್ತೆಗಾಗಿ ಪೊಲೀಸ್ ಇಲಾಖೆ ನಾಲ್ಕು ವಿಶೇಷ ತಂಡ ರಚಿಸಿದೆ. ಒಂದು ತಂಡ ತಮಿಳುನಾಡಿನ ಧರ್ಮಪುರಿಗೆ ಹೋಗಿದ್ರೆ ಉಳಿದ ತಂಡಗಳು ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿವೆ. ಡಾಬಸ್‍ಪೇಟೆಯಲ್ಲಿ ನಾಗನಿಗೆ ಸೇರಿದ ರೆಸಾರ್ಟ್ ಇದ್ದು, ಅಲ್ಲಿಯೂ ಕೂಡ ಬಾಂಬ್ ನಾಗ ಸಿಕ್ಕಿಲ್ಲ. ಇನ್ನು ಬಾಂಬ್ ನಾಗನ ವಿರುದ್ಧ ಬ್ಲ್ಯಾಕ್ ಅಂಡ್ ವೈಟ್ ದಂಧೆಯ ಗುರುತರ ಆರೋಪ ಇರುವ ಹಿನ್ನೆಲೆಯಲ್ಲಿ ಅವನ ವಿರುದ್ಧ ಕೋಕಾ ಕಾಯ್ದೆಯಡಿ ಕೇಸ್ ದಾಖಲಿಸಲು ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ.

https://www.youtube.com/watch?v=2LttmL04w_w

 

https://www.youtube.com/watch?v=y6I5dIeMjrU

 

Comments

Leave a Reply

Your email address will not be published. Required fields are marked *