ಸ್ಪ್ರಿಂಗ್‍ನಂತೆ ಕುಪ್ಪಳಿಸುತ್ತೆ, ನೀರಿನ ಮೇಲೆ ತೇಲ್ತಿರುವಂತಿದೆ ಮೇಲ್ಪದರ- ಮೂಡಬಿದಿರೆಯಲ್ಲಿ ಸ್ಪ್ರಿಂಗ್ ಭೂಮಿ ವಿಸ್ಮಯ- ವಿಡಿಯೋ

ಮಂಗಳೂರು: ಭೂಮಿ ಯಾವತ್ತಾದ್ರೂ ಕುಣಿದಿದ್ದನ್ನಾ ನೋಡಿದ್ದೀರಾ? ಅರೇ ಭೂಮಿ ಕುಣಿದ್ರೆ ನಾವೀರುತ್ತೀವಾ? ನಮ್ಮನ್ನೇ ಕುಣಿಸಿ ಬಿಡುತ್ತಪ್ಪಾ ಅಂತಾ ಹೇಳುತ್ತೀರಿ. ಹೌದು ಭೂಮಿ ಒಂದು ಕಡೆ ಗಟ್ಟಿಯಾಗಿ ನಿಲ್ಲುತ್ತೆ ಹೊರತು ಕುಣಿಯುತ್ತೆ ಅಂತ ಹೇಳಿದ್ರೆ ಅದು ನಿಜಕ್ಕೂ ಅಚ್ಚರಿಯೆನಿಸಿ ಬಿಡುತ್ತದೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಭೂಮಿ ಮೇಲೆ ನಾವು ಕುಣಿದ್ರೆ ಭೂಮಿ ಸ್ಪ್ರಿಂಗ್‍ನಂತೆ ಜಿಗಿಯುತ್ತೆ.


ಹೌದು. ಜಿಲ್ಲೆಯ ಮೂಡಬಿದಿರೆಯ ಕಡಂದಲೆಯಲ್ಲಿ ಭೂಮಿಯ ಮೇಲ್ಪದರದ ಅಡಿಯಲ್ಲಿ ಏನೋ ದ್ರವಾಂಶ ಇರುವಂತೆ ಭಾಸವಾಗುತ್ತದೆ. ಕೆಲ ದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಈ ಕುತೂಹಲದ ಬೆನ್ನತ್ತಿ ಹೋದಾಗ ಬೆಳಕಿಗೆ ಬಂದಿದ್ದು ಬೇರೆಯದ್ದೇ ಕಥೆ.

ಸುಮಾರು 10 ವರ್ಷದ ಹಿಂದೆ ಈ 5 ಎಕರೆ ವ್ಯಾಪ್ತಿಯಲ್ಲಿ ಕಪ್ಪು ಕಲ್ಲಿನ ಕೋರೆ ನಡೀತಿತ್ತು. ಆದ್ರೆ ಕಲ್ಲು ಖಾಲಿಯಾದಾಗ ಹೊಂಡ ಬಿದ್ದ ಜಾಗವನ್ನು ಕಾನೂನಿನ ಪ್ರಕಾರ, ಕಲ್ಲಿನ ಪುಡಿಯನ್ನು ತುಂಬಿಸಿ ಕೋರೆ ನಡೆಸುತ್ತಿದ್ದ ಕೇರಳ ಮೂಲದ ಪೋಬ್ಸ್ ರಾಕ್ಸ್ ಮೈನ್ಸ್ ಕಂಪನಿ ಜಾಗ ಖಾಲಿ ಮಾಡಿತ್ತು. ಇದೇ ಜಾಗದಲ್ಲಿ ಈಗ ಸ್ಪ್ರಿಂಗ್ ಆ್ಯಕ್ಷನ್ ಶುರುವಾಗಿದೆ.

ಸ್ಥಳೀಯರ ಪ್ರಕಾರ, ಪ್ರತಿ ವರ್ಷವೂ ಮಳೆಗಾಲದಲ್ಲಿ ಈ ಕೋರೆಯಲ್ಲಿ ನೀರು ತುಂಬಿ, ಅಲ್ಲಿನ ಮೇಲ್ಪದರ ಸ್ಪಾಂಜ್ ಥರ ಆಗುತ್ತೆ. ಅಡಿ ಭಾಗದಲ್ಲಿ ನೀರಿನ ಒರತೆ ಇರೋದ್ರಿಂದ ಮಳೆಗಾಲ ಆದ್ಮೇಲೆ ಸ್ವಲ್ಪ ಸಮಯ ಮೇಲ್ಪದರ ಹೀಗೆ ಆಗುತ್ತೆ. ಬೇಸಿಗೆಯಲ್ಲಿ ಯಥಾಪ್ರಕಾರ ಭೂಮಿ ಗಟ್ಟಿಯಾಗಿ ಈ ಸ್ಪಂಜ್ ಮಾಯವಾಗುತ್ತೆ ಅಂತಾ ಸ್ಥಳೀಯ ಸಂತೋಷ್ ಶೆಟ್ಟಿ ತಿಳಿಸಿದ್ದಾರೆ.

ಆದ್ರೆ ಸ್ಪ್ರಿಂಗ್ ಥರಾ ಜಂಪ್ ಆಗುತ್ತೆ ಅಂತಾ ಕುಣಿಯಲು ಹೋದ್ರೆ 30 ಅಡಿ ಆಳದ ಹೊಂಡಕ್ಕೆ ಬೀಳೋ ಸಾಧ್ಯತೆ ಇದೆ ಅಂತಾ ಸ್ಥಳೀಯರೇ ಎಚ್ಚರಿಕೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *