ರಮೇಶ್ ಜಾರಕಿಹೊಳಿಯನ್ನು ರಾಕ್ಷಸನಿಗೆ ಹೋಲಿಸಿದ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಾಕ್ಷಸನಿಗೆ ಹೋಲಿಸಿದ್ದಾರೆ.

ಬೆಳಗಾವಿ ತಾಲೂಕಿನ ಮಾವಿನಕಟ್ಟಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಭಾಷಣ ಮಾಡಿದ ಅವರು, 2 ವರ್ಷದ ಹಿಂದೆಯೇ ನಾಲ್ಕೂವರೆ ಕೋಟಿ ರೂಪಾಯಿ ಟೆಂಡರ್ ಆಗಿ ವರ್ಕ್ ಆರ್ಡರ್ ಆಗಿದ್ದು, ದುರ್ದೈವದಿಂದ ಆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಬಿತ್ತು. ಇದಾದ ಬಳಿಕ ರಮೇಶ್ ಜಾರಕಿಹೊಳಿಯವರು ನೀರಾವರಿ ಮಂತ್ರಿ ಆದರು. ಅವರು ನೀರಾವರಿ ಮಂತ್ರಿ ಆದ ತಕ್ಷಣ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಮಂಜೂರಾದ ಎಲ್ಲ ಅನುದಾನ ನಿಲ್ಲಿಸಿದರು ಎಂದು ಆರೋಪಿಸಿದರು.

ಈ ಎಲ್ಲ ಕಾರ್ಯಗಳಿಗೆ ಸಾಕ್ಷಿ ಎಂಜಿನಿಯರ್. ಆದರೆ ಅವರು ಸರ್ಕಾರದ ಪ್ರತಿನಿಧಿ ಆಗಿದ್ದರಿಂದ ಅವರು ಏನೂ ಹೇಳುವುದಕ್ಕೆ ಆಗಲ್ಲ. 15 ದಿನಗಳ ಹಿಂದೆ ನಾನು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಮಾಡಿದೆ. ಅವರು ನಮಗೆ ಅನುಕೂಲ ಮಾಡಿಕೊಟ್ಟರು. ಅದಕ್ಕಾಗಿ ಈ ರಸ್ತೆ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ

ಮಾವಿನಕಟ್ಟಿ ಮಗಳಾಗಿ ನಾನು ಹೇಳಿದ ಕೆಲಸ ಮಾಡಿದ್ದೇನೆ. ಒಮ್ಮೊಮ್ಮೆ ಸೂರ್ಯನಿಗೂ ಗ್ರಹಣ ಹಿಡಿಯುತ್ತೆ, ಚಂದ್ರನಿಗೂ ಗ್ರಹಣ ಹಿಡಿಯುತ್ತೆ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಯಾವ ಗಿಡದ ತಪ್ಪಲ? ರಾಕ್ಷಸರು ಜೀವನದಲ್ಲಿ ಬಂದು ಹೋಗುತ್ತಿರುತ್ತಾರೆ. ಆದರೆ ಸೂರ್ಯ ಸೂರ್ಯನೇ, ಚಂದ್ರ ಚಂದ್ರನೇ ನಿಮ್ಮ ಆಶೀರ್ವಾದ ಇರುವ ತನಕ ನಾನು ಕೆಲಸ ಮಾಡುತ್ತೇನೆ ಎಂದರು. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಚನ್ನಿ ಅಪ್ರಾಮಾಣಿಕ ವ್ಯಕ್ತಿ: ಅರವಿಂದ್ ಕೇಜ್ರಿವಾಲ್

Comments

Leave a Reply

Your email address will not be published. Required fields are marked *