– ಅಭಿವೃದ್ದಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು
ಬೆಳಗಾವಿ: ಅಭಿವೃದ್ದಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು. ಬೆಳಗಾವಿ ವಿಭಜನೆಯಾಗಿ ಮೂರು ಜಿಲ್ಲೆ ಆಗಬೇಕು ಇದಕ್ಕೆ ನಮ್ಮ ಪಕ್ಷಾತೀತ ಬೆಂಬಲ ಇದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ವಿಭಜನೆ ವಿಚಾರವಾಗಿ ಮಾತನಾಡಿ, ಅಭಿವೃದ್ದಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು. ಎಷ್ಟು ದೂರದಿಂದ ಬಂದು ತಮ್ಮ ಕೆಲಸ ಮಾಡಿಕೊಳ್ಳಬೇಕು. ಸಚಿವ ಉಮೇಶ್ ಕತ್ತಿ ನೇತೃತ್ವದ ನಿಯೋಗ ಸಿಎಂ ಬಳಿ ಹೋದರೆ ನಮ್ಮ ಬೆಂಬಲವಿದೆ. ಬೆಳಗಾವಿ ವಿಭಜನೆಯಾಗಿ ಮೂರು ಜಿಲ್ಲೆ ಆಗಬೇಕು ಇದಕ್ಕೆ ನಮ್ಮ ಪಕ್ಷಾತೀತ ಬೆಂಬಲ ಇದೆ ಎಂದಿದ್ದಾರೆ.

ಈಗಾಗಲೇ ಬೆಳಗಾವಿ ತಾಲೂಕು ವಿಭಜನೆಗೆ ಮನವಿ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪ್ರತ್ಯೇಕ ತಾಲೂಕು ಮಾಡುತ್ತೇನೆ. ಅವಧಿ ಪೂರ್ವ ವಿಧಾನಸಭೆ ಚುನಾವಣೆ ಬಂದರೇ ಎದುರಿಸಲು ಸಿದ್ದ. ಕೆ.ಎಸ್ ಈಶ್ವರಪ್ಪ ವಿರುದ್ಧ ಶೇ.40 ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್, ಇದೊಂದು ವಿಚಿತ್ರವಾದ ಘಟನೆ ಎಂದು ಹೇಳಿದರು. ಇದನ್ನೂ ಓದಿ: ಮಸೀದಿ, ದೇವಸ್ಥಾನ, ಚರ್ಚ್‍ಗಳಲ್ಲಿ ಜೋರಾಗಿ ಮೈಕ್ ಹಾಕಿದ್ರೆ ಧರ್ಮಗಳ ನಡುವೆ ಸಂಘರ್ಷ ಆಗುತ್ತೆ: ಈಶ್ವರಪ್ಪ
ಹಿಂಡಲಗಾ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. ನಾನು ಶಾಸಕಿಯಾದ ಮೇಲೆ ಅನುದಾನಕ್ಕೆ ಎಲ್ಲರ ಬಳಿ ಕೇಳಿದೆ. ಕ್ಷೇತ್ರಕ್ಕೆ ಯಾವುದೇ ಅನುದಾನ ಬಂದರು ಶಾಸಕರು ಪೂಜೆ ಮಾಡಬೇಕು. ಟೆಂಡರ್ ಆದ ಬಳಿಕ ಕಾಮಗಾರಿ ಆರಂಭಿಸಬೇಕು. ಜಿಲ್ಲಾ ಪಂಚಾಯತ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೇಳಿದೆ. ಯಾವುದೇ ಅನುದಾನ ಬಿಡುಗಡೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಮನೊಬ್ಬ ಪ್ರಧಾನಿಯಾದರೆ ಶೇ.50ರಷ್ಟು ಹಿಂದೂಗಳು ಮತಾಂತರಗೊಳ್ಳುತ್ತಾರೆ: ಯತಿ ನರಸಿಂಹಾನಂದ್
ಗ್ರಾಮದಲ್ಲಿ ಕಾಮಗಾರಿ ನಡೆದ ಬಗ್ಗೆ ಪರಿಶೀಲನೆ ನಡೆಸಬೇಕು. 108 ಕಾಮಗಾರಿ ಹುಡುಕಿ ಕೊಟ್ಟರೇ ನಾನು ಅವಾರ್ಡ್ ಕೊಡುತ್ತೇನೆ. ಕಳಪೆ ಕಾಮಗಾರಿ ಆಗಿದ್ದು, ಈಗ ಮಣ್ಣು ಸಹ ಸಿಗಲ್ಲ. ನನ್ನ ಗಮನಕ್ಕೆ ಯಾವುದೇ ಕಾಮಗಾರಿ ಬಗ್ಗೆ ತಂದಿಲ್ಲ. ಬಿಜೆಪಿ ಆಡಳಿತದ ಗ್ರಾಪಂ, ಗುತ್ತಿಗೆದಾರ ಸಹ ಬಿಜೆಪಿಯವನೇ, ಬಿಜೆಪಿಯವರೇ ಆರೋಪ ಮಾಡಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು. ನಮ್ಮ ಸರ್ಕಾರ ಬಂದರೆ ನಾನು ತನಿಖೆ ಮಾಡುತ್ತೇನೆ ಎಂದು ಹೇಳಿದರು.

Leave a Reply