ಮಗುವಿನ ಮುಖ ರಿವೀಲ್ ಮಾಡಿದ ‘ಲಕ್ಷ್ಮಿ ಬಾರಮ್ಮ’ ನಟಿ ಕವಿತಾ

‘ಲಕ್ಷ್ಮಿ ಬಾರಮ್ಮ’, ‘ಬಿಗ್ ಬಾಸ್’ ಖ್ಯಾತಿಯ ಕವಿತಾ ಗೌಡ (Kavitha Gowda) ಅವರು ಇಂದು (ಅ.11) ಆಯುಧ ಪೂಜೆಯ ದಿನದಂದು ಮಗನ ಮುಖವನ್ನು ರಿವೀಲ್ ಮಾಡಿದ್ದಾರೆ. ಮಗಳ ಜೊತೆಗಿನ ಮುದ್ದಾದ ಫೋಟೋವನ್ನು ಇದೀಗ ಕವಿತಾ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಮಿಸ್ ಯು ಹೆಂಡ್ತಿ.. ಈ ಮೆಸೇಜ್ ದರ್ಶನ್ ಕಳಿಸಿದ್ದಾ or ಹೇಮಂತ್ ಮಾಡಿದ್ದಾ: ಎಸ್‌ಪಿಪಿ ಪ್ರಶ್ನೆ

ಕಳೆದ ತಿಂಗಳು ಸೆಪ್ಟೆಂಬರ್‌ನಲ್ಲಿ ನಟಿ ಕವಿತಾ ಗೌಡ ಗಂಡು ಮಗುವಿಗೆ ಜನ್ಮ ನೀಡಿದರು. ಈ ಗುಡ್ ನ್ಯೂಸ್ ಅನ್ನು ಪತಿ ಚಂದನ್ (Chandan Kumar) ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಂಭ್ರಮ ಹಂಚಿಕೊಂಡಿದ್ದರು. ಇದೀಗ ಪುಟ್ಟು ಮಗುವನ್ನು ಹಿಡಿದು ಕವಿತಾ ದಂಪತಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಮಗುವಿನ ಜೊತೆಗಿನ ಸುಂದರ ಫೋಟೋವನ್ನು ನಟಿ ರಿವೀಲ್ ಮಾಡಿದ್ದಾರೆ. ನಮ್ಮ ಲಿಟಲ್ ಸನ್‌ಶೈನ್ ಎಂದಿದ್ದಾರೆ.

 

View this post on Instagram

 

A post shared by K A V I T H A (@iam.kavitha_official)

ಅಂದಹಾಗೆ, 2021ರಲ್ಲಿ ಮೇ 14ರಂದು ಕವಿತಾ ಮತ್ತು ಚಂದನ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಲಾಕ್‌ಡೌನ್ ವೇಳೆ, ಮದುವೆ ಆದ ಹಿನ್ನೆಲೆ ಸರಳವಾಗಿ ನಡೆದಿತ್ತು.