ಮುಂಗಾರು ಮಳೆ ಈ ಬಾರಿ ಕೈಕೊಡುವ ಆತಂಕ

– ಇನ್ನೂ ಬರಿದಾಗಿಯೇ ಇವೆ ಜಲಾಶಯಗಳ ಒಡಲು

ಬೆಂಗಳೂರು: ರಾಜ್ಯಕ್ಕೆ ಮುಂಗಾರು ಕಾಲಿಟ್ಟು 9 ದಿನ ಕಳೆದರೂ ಭಾರೀ ಎನ್ನಬಹುದಾದ ಮಳೆ ಬಂದಿಲ್ಲ. ಕರಾವಳಿ ಭಾಗದಲ್ಲಿ, ಉತ್ತರ ಕರ್ನಾಟಕದ ಹಲವೆಡೆ ಮಳೆ ಬಂದಿದ್ದು ಬಿಟ್ಟರೆ ಎಲ್ಲಾ ಕಡೆಗೂ ಉತ್ತಮ ಮಳೆಯಾಗಿಲ್ಲ. ಜಲಾಶಯಗಳ ನೀರಿನ ಮಟ್ಟದಲ್ಲಿಯೂ ಬದಲಾವಣೆ ಆಗಿಲ್ಲ. ಪರಿಣಾಮ ಕುಡಿಯುವ ನೀರಿಗೆ ರಾಜ್ಯದಲ್ಲಿ ತೊಂದರೆಯಾಗುವ ಆತಂಕ ಎದುರಾಗಿದೆ.

ಮುಂದೆ ಉತ್ತಮ ಮಳೆ ಆದಲ್ಲಿ, ಆಗಸ್ಟ್ ತಿಂಗಳಲ್ಲಿಯೋ, ಸೆಪ್ಟೆಂಬರ್ ತಿಂಗಳಲ್ಲಿಯೋ ಡ್ಯಾಂಗಳು ಭರ್ತಿಯಾಗುವ ಸಾಧ್ಯತೆ ಇದೆ. ಮುಂದಿನ 10 ದಿನದಲ್ಲಿ ಉತ್ತಮ ಮಳೆ ಆಗದಿದ್ದರೆ, ಬಿತ್ತನೆ ಕಾರ್ಯವನ್ನು ರೈತರು ಕೈಬಿಡಬೇಕಾದ ಅನಿವಾರ್ಯತೆ ಎದುರಾಗಲಿದೆ.

ರಾಜ್ಯದಲ್ಲಿ ಇದುವರೆಗೆ ಶೇ.10ರಷ್ಟು ಬಿತ್ತನೆ ಕಾರ್ಯವಾಗಿಲ್ಲ. ಮಹಾರಾಷ್ಟ್ರ 1 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ನೀರು ಬಿಟ್ಟ ಬೆನ್ನಲ್ಲೇ ಸಚಿವ ಡಿ.ಕೆ.ಶಿವಕುಮಾರ್ ಅವರು ಕೃಷ್ಣಾ ನದಿ ಬ್ಯಾರೇಜ್‍ಗಳಿಗೆ ಭೇಟಿ ಕೊಟ್ಟರು. ಬರದಲ್ಲಿ ಬಾರದ ಸಚಿವರು ಈಗ್ಯಾಕೆ ಬಂದರು ಅಂತ ಕಾಗವಾಡದ ಜನ ಸಿಟ್ಟಿಗೆದ್ದು ಕಾರಿಗೆ ಮುತ್ತಿಗೆ ಹಾಕಿದರು. ಇತ್ತ ಟಿಬಿ ಡ್ಯಾಂ ತುಂಬಲೆಂದು ಪ್ರಾರ್ಥಿಸಿ ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಉಪವಾಸ ವ್ರತ ಕೈಗೊಂಡಿದ್ದಾರೆ.

ಮುಂದಿನ ನಾಲ್ಕೈದು ದಿನ ರಾಜ್ಯದಲ್ಲಿ ಉತ್ತಮ ಮಳೆ ಆಗಲಿದ್ದು, ನಂತರ ದುರ್ಬಲವಾಗಲಿದೆ. ಪರಿಣಾಮ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ಆದಷ್ಟು ಬೇಗ ಮೋಡ ಬಿತ್ತನೆ ಮಾಡಲಾಗುವುದು ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಇಂದು ಉಡುಪಿ, ದಕ್ಷಿಣ ಕನ್ನಡ, ಬೀದರ್ ಜಿಲ್ಲೆಯಲ್ಲಿ ಮಳೆಯಾಗಿದೆ. ಬೀದರ್‍ನಲ್ಲಿ ಪಟಾಕಿ ಸಿಡಿಸಿ ಮಳೆಯನ್ನು ಸ್ವಾಗತಿಸಿದ್ದಾರೆ.

ಜಲಾಶಯಗಳಲ್ಲಿ ನೀರಿನ ಮಟ್ಟ ಏನಿದೆ?:
ಲಿಂಗನಮಕ್ಕಿ ಡ್ಯಾಂ – ಸಂಗ್ರಹ ಸಾಮಥ್ರ್ಯ – 151.75 ಟಿಎಂಸಿ, ಇಂದಿನ ಸಾಮಥ್ರ್ಯ – 14.07 ಟಿಎಂಸಿ, ವರ್ಷದ ಹಿಂದೆ -34.08 ಟಿಎಂಸಿ
ಕೆಆರ್‍ಎಸ್ ಡ್ಯಾಂ – ಸಂಗ್ರಹ ಸಾಮಥ್ರ್ಯ – 45.05 ಟಿಎಂಸಿ, ಇಂದಿನ ಸಾಮಥ್ರ್ಯ – 6.34 ಟಿಎಂಸಿ, ವರ್ಷದ ಹಿಂದೆ – 21.58 ಟಿಎಂಸಿ
ತುಂಗಭದ್ರಾ ಡ್ಯಾಂ – ಸಂಗ್ರಹ ಸಾಮಥ್ರ್ಯ – 100.86 ಟಿಎಂಸಿ, ಇಂದಿನ ಸಾಮಥ್ರ್ಯ – 2.10 ಟಿಎಂಸಿ, ವರ್ಷದ ಹಿಂದೆ – 25.07 ಟಿಎಂಸಿ


ಆಲಮಟ್ಟಿ ಡ್ಯಾಂ – ಸಂಗ್ರಹ ಸಾಮಥ್ರ್ಯ – 119.26 ಟಿಎಂಸಿ, ಇಂದಿನ ಸಾಮಥ್ರ್ಯ – 17.67 ಟಿಎಂಸಿ, ವರ್ಷದ ಹಿಂದೆ -17.93 ಟಿಎಂಸಿ
ಕಬಿನಿ ಡ್ಯಾಂ – ಸಂಗ್ರಹ ಸಾಮಥ್ರ್ಯ – 15.67 ಟಿಎಂಸಿ, ಇಂದಿನ ಸಾಮಥ್ರ್ಯ – 2.23 ಟಿಎಂಸಿ, ವರ್ಷದ ಹಿಂದೆ -14.58 ಟಿಎಂಸಿ
ಹಾರಂಗಿ ಡ್ಯಾಂ – ಸಂಗ್ರಹ ಸಾಮಥ್ರ್ಯ – 8.07 ಟಿಎಂಸಿ, ಇಂದಿನ ಸಾಮಥ್ರ್ಯ -1.17 ಟಿಎಂಸಿ, ವರ್ಷದ ಹಿಂದೆ -3.09 ಟಿಎಂಸಿ
ಹೇಮಾವತಿ ಡ್ಯಾಂ – ಸಂಗ್ರಹ ಸಾಮಥ್ರ್ಯ -35.76 ಟಿಎಂಸಿ, ಇಂದಿನ ಸಾಮಥ್ರ್ಯ -3.47 ಟಿಎಂಸಿ, ವರ್ಷದ ಹಿಂದೆ -18.89 ಟಿಎಂಸಿ
ಘಟಪ್ರಭ ಡ್ಯಾಂ – ಸಂಗ್ರಹ ಸಾಮಥ್ರ್ಯ -100.86 ಟಿಎಂಸಿ, ಇಂದಿನ ಸಾಮಥ್ರ್ಯ -2.10 ಟಿಎಂಸಿ, ವರ್ಷದ ಹಿಂದೆ -25.07 ಟಿಎಂಸಿ

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Comments

Leave a Reply

Your email address will not be published. Required fields are marked *