ರಾಮನಗರ ರಾಮ ರಾಜ್ಯವಾಗೇ ಇರ್ಬೇಕು, ರಾವಣ ರಾಜ್ಯ ಮಾಡೋಕೆ ಬಿಡಲ್ಲ: RSS ಪಥಸಂಚಲನಕ್ಕೆ ಎಚ್‍ಡಿಕೆ ಗರಂ

ಬೆಂಗಳೂರು: ರಾಮನಗರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ವಿಚಾರವಾಗಿ ಪ್ರತಿಕ್ರಿಯಿಸಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತಮಾಡಿದ ಎಚ್‍ಡಿಕೆ, ಅದೇನೋ ಪ್ಯಾಂಟ್, ದೊಣ್ಣೆ ಹಿಡ್ಕೊಂಡು ಪಥಸಂಚಲನ ಮಾಡಿದ್ದಾರಲ್ಲ. ರಾಮನಗರದ ಮುಸ್ಲಿಂ ಬೀದಿಯಲ್ಲಿ ದೊಣ್ಣೆ ಹಿಡಿದುಕೊಂಡು ಪಥಸಂಚಲನ ಮಾಡಲು ಇವರಿಗೆ ಅವಕಾಶ ಕೊಟ್ಟವರು ಯಾರು? ಕಾನೂನಿನಲ್ಲಿ ದೊಣ್ಣೆ ಹಿಡಿದುಕೊಂಡು ಓಡಾಡಲು ಅವಕಾಶವಿದ್ಯಾ? ದೊಣ್ಣೆ ಮಾರಕಾಸ್ತ್ರವಲ್ಲವೇ? ರಾಮನಗರ ರಾಮ ರಾಜ್ಯವಾಗೇ ಇರಬೇಕು. ರಾವಣ ರಾಜ್ಯವಾಗೋಕೆ ಬಿಡೋದಿಲ್ಲ ಎಂದು ಆರ್‌ಎಸ್‌ಎಸ್ ಪಥಸಂಚಲನ ಮಾಡಿದಕ್ಕೆ ಹರಿಹಾಯ್ದರು. ಇದನ್ನೂ ಓದಿ: ರಾಮನಗರದ ದುರ್ದೈವ ರಾಮನ ಪರಂಪರೆ ಇಲ್ಲಿ ಬೆಳೆದಿಲ್ಲ- ಕಲ್ಲಡ್ಕ ಪ್ರಭಾಕರ್ ಭಟ್

ಬೇರೆಯವರು ಹೀಗೆ ದೊಣ್ಣೆ ಹಿಡ್ಕೊಂಡು ಪ್ರತಿಭಟನೆಗೆ ಮಾಡೋಕೆ ಬಿಡ್ತೀರಾ? ಕಲ್ಲಡ್ಕ ಪ್ರಭಾಕರ್ ಭಟ್ ಕೊಡುಗೆ ಏನು ರಾಮನಗರಕ್ಕೆ? ಕಪಾಲಿ ಬೆಟ್ಟ ಹಿಡ್ಕೊಂಡು ರಾಮನಗರದಲ್ಲಿ ಬೇಳೆ ಬೇಯಿಸೊ ಪ್ರಯತ್ನ ಮಾಡ್ತಿದ್ದಾರೆ. ಅದೇಗೆ ರಾಮನಗರದಲ್ಲಿ ಬಲ ತುಂಬುತ್ತಾರೆ ಎಂದು ನಾನು ನೋಡ್ತೀನಿ ಎಂದು ಎಚ್‍ಡಿಕೆ ಸವಾಲ್ ಹಾಕಿದರು.

Comments

Leave a Reply

Your email address will not be published. Required fields are marked *