ಸರ್ಕಾರ 1 ವಾರ ಅಥವಾ 15 ದಿನದ ಒಳಗಡೆ ಬೀಳುತ್ತೆ: ಉಮೇಶ್ ಕತ್ತಿ ಭವಿಷ್ಯ

ಚಿಕ್ಕೋಡಿ: ಒಂದು ವಾರ ಅಥವಾ 15 ದಿನಗಳ ಒಳಗೆ ಸಿಎಂ ಕುಮಾರಸ್ವಾಮಿ ಸರ್ಕಾರ ಬೀಳುತ್ತದೆ ಎಂದು ಹೇಳುವ ಮೂಲಕ ಹುಕ್ಕೇರಿಯ ಬಿಜೆಪಿ ಶಾಸಕ ಉಮೇಶ್ ಕತ್ತಿ ಹೊಸ ಬಾಂಬ್ ಸಿಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನೇ ಸಿಎಂ ಎನ್ನುವ ಹೇಳಿಕೆ ಬಳಿಕ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಅಳಿವು ಉಳಿವಿನ ಚರ್ಚೆಗಳು ಜೋರಾಗಿದೆ. ಸಮ್ಮಿಶ್ರ ಸರಕಾರ ರಿಜಿಸ್ಟರ್ ಮದುವೆ ಆಗಿದೆ. ಆದರೆ ಈ ಸರ್ಕಾರ ಮದುವೆಯಾಗಿಲ್ಲ. ಇದೊಂದು ಅನೈತಿಕ ಸಂಬಂಧದಿಂದ ಕೂಡಿದ ಸರ್ಕಾರವಾಗಿದೆ. ಅನೈತಿಕ ಸಂಬಂಧದ ಕಿತ್ತಾಟದಿಂದ ಸರ್ಕಾರ ಬೀಳುವುದು ಖಚಿತ. ಮಾಜಿ ಸಿಎಂ ಸಿದ್ದರಾಮಯ್ಯ ನಾನೇ ಸಿಎಂ ಎನ್ನುತ್ತಾರೆ. ಕುಮಾರಸ್ವಾಮಿ ಕುರ್ಚಿಗೆ ಅಂಟಿ ಕೂತಿಲ್ಲ ಎಂದು ಹೇಳಿದ್ದಾರೆ. ಇದರ ಮಧ್ಯೆ ರಾಜಕೀಯ ಗಂಧ ಗೊತ್ತಿಲ್ಲದ ರಾಹುಲ್‍ಗಾಂಧಿ ಸೆಪ್ಟೆಂಬರ್ ತಿಂಗಳಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.

ಹೊಂದಾಣಿಕೆ ಇಲ್ಲದ ಕಾರಣ ಸಂಪುಟ ವಿಸ್ತರಣೆ ಸಾಧ್ಯವಿಲ್ಲ. ಅನೈತಿಕ ಸಂಬಂಧದಿಂದ ನೊಂದು ಬಹಳಷ್ಟು ಶಾಸಕರು ಬಿಜೆಪಿಗೆ ಬರುತ್ತಾರೆ. ಹೀಗಾಗಿ ಸರ್ಕಾರ ಬಿದ್ದು ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ. ಅನೈತಿಕ ಸಂಬಂಧದಿಂದ ಸ್ಥಳೀಯ ಸಂಸ್ಥೆಗಳಿಗೆ ಬಿಜೆಪಿಗೆ ಲಾಭವಾಗಲಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಮ್ಮಿಶ್ರ ಸರಕಾರಕ್ಕೆ ಮುಖಭಂಗವಾಗಲಿದೆ ಎಂದು ಕತ್ತಿ ಭವಿಷ್ಯ ನುಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *