ರಾಯಚೂರು: ಕೆಎಸ್‌ಆರ್‌ಟಿಸಿ ಬಸ್ ಅಡ್ಡಗಟ್ಟಿ ಡ್ರೈವರ್, ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಲಿಂಗಸೂಗುರು ತಾಲೂಕಿನ ಗುರುಗುಂಟಾದ ಬಳಿ ನಡೆದಿದೆ.

ಮಹಿಬೂಬ್, ಶರ್ಮೊದ್ದೀನ್ ಹಲ್ಲೆ ನಡೆಸಿದ ಆರೋಪಿಗಳು. ಯಾದಗಿರಿ ಡಿಪೋಗೆ ಸೇರಿದ ಬಸ್ ನಂ. ಎ033ಎ 0254 ಮೇಲೆ ದಾಳಿ ಮಾಡಿದ್ದಾರೆ. ಬಸ್ ತಮ್ಮ ವಾಹನವನ್ನು ಓವರ್‌ಟೇಕ್ ಮಾಡಿದಕ್ಕೆ ಕೋಪಗೊಂಡು ಬಸ್ಸನ್ನು ಅಡ್ಡಗಟ್ಟಿ, ನಿರ್ವಾಹಕ ಲಿಂಗರಾಜ್ ಮತ್ತು ಚಾಲಕ ಸಂಗಮೇಶ್ ಅವರನ್ನು ಮನಬಂದಂತೆ ಥಳಿಸಿದ್ದಾರೆ. ಇದನ್ನೂ ಓದಿ: ಲುಧಿಯಾನ ಕೋರ್ಟ್ ಸ್ಫೋಟ – ಡ್ರಗ್ ಕೇಸ್‌ನಲ್ಲಿ ವಜಾಗೊಂಡಿದ್ದ ಪೊಲೀಸ್ ಅಧಿಕಾರಿಯೇ ಬಾಂಬರ್
ಪ್ರಯಾಣಿಕರು ಎಷ್ಟೇ ಬೇಡಿಕೊಂಡರು ಯುವಕರು ಹಲ್ಲೆ ನಡೆಸುವುದನ್ನು ನಿಲ್ಲಿಸಿಲ್ಲ. ಕೊನೆಗೆ ಪ್ರಯಾಣಿಕರೊಬ್ಬರು ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಟ್ಟೆ ಮಾಸ್ಕ್ ಬೇಡ.. ಎನ್95, ಕೆ95 ಮಾಸ್ಕ್‌ಗಳನ್ನೇ ಬಳಸಿ – ತಜ್ಞರ ಸಲಹೆ


Leave a Reply