2.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪ್ರಯಾಣಿಕರಿಗೆ ತಲುಪಿಸಿದ ಕೆಎಸ್ಆರ್‌ಟಿಸಿ ನಿರ್ವಾಹಕ

ಬೆಂಗಳೂರು: ಕೆಎಸ್ಆರ್‌ಟಿಸಿ ನಿರ್ವಾಹಕರೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಸುಮಾರು 2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಾರಸುದಾರರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಕೆಎಸ್ಆರ್‌ಟಿಸಿಯ ಚಾಮರಾಜನಗರ ವಿಭಾಗ, ಕೊಳ್ಳೇಗಾಲ ಘಟಕದ ಜಯದೇವು ಅವರು ಪ್ರಾಮಾಣಿಕತೆ ಮೆರೆದ ಚಾಲಕ ಕಂ ನಿರ್ವಾಹಕರಾಗಿದ್ದಾರೆ. ಬಸ್ಸನ್ನು ಸ್ವಚ್ಛಗೊಳಿಸುವಾಗ ಪ್ರಯಾಣಿಕರು ಬಿಟ್ಟು ಹೋಗಿದ್ದ ಸುಮಾರು 2.5 ಲಕ್ಷ ಮೌಲ್ಯದ 2 ಚಿನ್ನದ ಸರ, 2 ಕಿವಿ ಓಲೆ ಜುಮುಕಿ ಹಾಗೂ 1 ಮೂಗುತಿಯನ್ನು ಖುದ್ದು ಟಿಕೆಟ್ ಸಹಾಯದ ಮೂಲಕ ಪತ್ತೆ ಹಚ್ಚಿ ಹಿಂದಿರುಗಿಸಿದ್ದಾರೆ.

ಶನಿವಾರ ಕೊಳ್ಳೇಗಾಲದಿಂದ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ ಬಸ್ಸಿನಲ್ಲಿ, ಮಳವಳ್ಳಿಯಿಂದ 4 ಮಂದಿ ಪ್ರಯಾಣಿಕರು ಚನ್ನಪಟ್ಟಣಕ್ಕೆ ಪ್ರಯಾಣಿಸಿದ್ದರು. ಈ ವೇಳೆ ಪ್ರಯಾಣಿಕರು ಇಳಿಯುವ ಬರದಲ್ಲಿ ಚಿನ್ನದ ಕೈ-ಚೀಲವನ್ನು ಬಸ್ಸಿನಲ್ಲೇ ಬಿಳಿಸಿಕೊಂಡಿದ್ದಾರೆ. ಬಸ್ಸು ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದಿದ್ದು, ಜಯದೇವು ಎಂದಿನಂತೆ ಬಸ್ಸನ್ನು ಸ್ವಚ್ಛಮಾಡುವಾಗ ಚಿನ್ನಾಭರಣಗಳಿದ್ದ ಚೀಲ ಸಿಕ್ಕಿದೆ. ಕೂಡಲೇ ಜಯದೇವುರವರು ನಿಲ್ದಾಣದ ಮೇಲ್ವಿಚಾರಕರು ಮತ್ತು ಘಟಕ ವ್ಯವಸ್ಥಾಪಕರಿಗೆ ವಿಷಯ ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *