ಅಜ್ಜಿ, ಮೊಮ್ಮಗಳಿಗೆ ಫ್ರೀ ಟಿಕೆಟ್‌ – 4 ಲವ್‌ ಬರ್ಡ್ಸ್‌ಗಳಿಗೆ 444 ರೂ. ಟಿಕೆಟ್‌!

ಬೆಂಗಳೂರು: ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಅಜ್ಜಿ ಮತ್ತು ಮೊಮ್ಮಗಳಿಗೆ ‘ಶಕ್ತಿ ಯೋಜನೆ’ಯಡಿ (Shakti Scheme) ಫ್ರೀ ಬಸ್‌ ಪ್ರಯಾಣ ಟಿಕೆಟ್‌ ಸಿಕ್ಕಿತು. ಆದರೆ ಅವರು ಜೊತೆಯಲ್ಲಿ ತಂದಿದ್ದ ಲವ್‌ ಬರ್ಡ್ಸ್‌ಗಳಿಗೆ ಪ್ರಯಾಣ ಶುಲ್ಕ ಬರೋಬ್ಬರಿ 444 ರೂ. ಬಿದ್ದಿದೆ.

ಅಜ್ಜಿ ಮತ್ತು ಮೊಮ್ಮಗಳು ಮೈಸೂರು ಕಡೆಗೆ ಬಸ್‌ನಲ್ಲಿ ಉಚಿತ ಪ್ರಯಾಣ ಬೆಳೆಸಿದ್ದರು. ತಮ್ಮ ಜೊತೆ ಪಂಜರದಲ್ಲಿ ಲವ್‌ ಬರ್ಡ್ಸ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಅಜ್ಜಿ-ಮೊಮ್ಮಗಳಿಗೆ ಕಂಡಕ್ಟರ್‌ ಫ್ರೀ ಟಿಕೆಟ್‌ ಕೊಟ್ಟರು. ಆದರೆ ಲವ್‌ ಬರ್ಡ್ಸ್‌ಗಳಿಗೆ ಪ್ರಯಾಣ ಶುಲ್ಕ ಹಾಕಿದ್ದಾರೆ. ಇದನ್ನೂ ಓದಿ: ಸುಮಲತಾ ಅಂಬರೀಶ್‌ ಜೊತೆ ಮಾತುಕತೆಗೆ ನಾವು ಸಿದ್ಧ – ನಿಖಿಲ್

ಮೊಮ್ಮಗಳ ಜೊತೆ ನಾಲ್ಕು ಲವ್ ಬರ್ಡ್ಸ್ ಹಕ್ಕಿಗಳನ್ನು ಅಜ್ಜಿಯೊಬ್ಬರು ತೆಗೆದುಕೊಂಡು ಮೈಸೂರಿಗೆ ಹೊರಟಿದ್ದರು. ಕೆಎಸ್‌ಆರ್‌ಟಿಸಿ ಕಂಡಕ್ಟರ್‌, ಅಜ್ಜಿ-ಮೊಮ್ಮಗಳಿಗೆ ಫ್ರೀ ಟಿಕೆಟ್‌ ಕೊಟ್ಟಿದ್ದಾರೆ. ಆದರೆ ಲವ್‌ ಬರ್ಡ್ಸ್‌ಗಳಿಗೆ ಟಿಕೆಟ್‌ ನೀಡಿದ್ದಾರೆ. ನಾಲ್ಕು ಮಕ್ಕಳು ಎಂದು ಟಿಕೆಟ್‌ನಲ್ಲಿ ನಮೂದು ಮಾಡಿದ್ದಾರೆ.

ಒಂದು ಬರ್ಡ್‌ ಪ್ರಯಾಣ ವೆಚ್ಚವಾಗಿ 111 ರೂ. ಬಿದ್ದಿದೆ. ಒಟ್ಟು ನಾಲ್ಕು ಹಕ್ಕಿಗಳಿಗೆ 444 ರೂಪಾಯಿ ಟಿಕೆಟ್ ನೀಡಲಾಗಿದೆ. ಇಂದು ಬೆಳಗ್ಗೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮಂತ್ರಿಯೇ ಆಗಲಿಲ್ಲ ರಾಜ – ಒಡೆಯರ್ ಕನಸು ಅವರ ಜೊತೆಯೆ ಮಣ್ಣಾಯಿತು