KSRTC ಬಸ್ ಹರಿದು ರಕ್ತದ ಮಡುವಿನಲ್ಲಿ ಬಿದ್ದಿದ್ದ ವೃದ್ಧನ ಫೋಟೋ ತೆಗೆಯೋದ್ರಲ್ಲೇ ಬ್ಯುಸಿಯಾದ ಜನ!

ಬೀದರ್: ಕೆಸ್‍ಆರ್ ಟಿಸಿ ಬಸ್ ಹರಿದು ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ವೃದ್ಧನ ಸಹಾಯಕ್ಕೆ ಬಾರದೇ ಮಾನವೀಯತೆ ಮರೆತ ಆಘಾತಕಾರಿ ಘಟನೆಯೊಂದು ಬೀದರ್ ನ ಕೆಇಬಿ ರಸ್ತೆಯಲ್ಲಿ ನಡೆದಿದೆ.

ನರಸಪ್ಪ ಎಂಬ ವೃದ್ಧ ನಿನ್ನೆ ರಾತ್ರಿ ರಸ್ತೆ ದಾಟುವಾಗ ಕೆಎಸ್‍ಆರ್‍ಟಿಸಿ ಬಸ್ಸೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಗಾಯಗೊಂಡ ವೃದ್ಧ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಅವರ ಸಹಾಯಕ್ಕಾಗಿ ಅಗಲಾಚುತ್ತಿದ್ದರು. ಆದ್ರೆ ಯಾರೊಬ್ಬರು ಅವರಿಗೆ ಸಹಾಯ ಮಾಡಲಿಲ್ಲ. ಬದಲಾಗಿ ನರೆರೆದವರೆಲ್ಲರೂ ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುವುದರಲ್ಲೇ ಬ್ಯುಸಿಯಾಗಿದ್ದರು. ಬಳಿಕ 20 ನಿಮಿಷಗಳ ನಂತರ ಆಂಬುಲೆನ್ಸ್ ಗೆ ಕೆಲವರು ಫೋನ್ ಮಾಡಿದ್ರು.

ಒಟ್ಟಿನಲ್ಲಿ ಅಪಘಾತವಾದಾಗ ಗಾಯಗೊಂಡವರಿಗೆ ಸಹಾಯ ಮಾಡುವುದನ್ನು ಮರೆತು ಮೊಬೈಲ್ ನಲ್ಲಿ ಚಿತ್ರೀಕರಿಸುವ ಘಟನೆಗಳು ಸಮಾಜದಲ್ಲಿ ನಡೆಯುತ್ತಿರುವುದು ವಿಪರ್ಯಾಸವೇ ಸರಿ.

Comments

Leave a Reply

Your email address will not be published. Required fields are marked *