ಕಾಂಗ್ರೆಸ್ ಸಮಾವೇಶಕ್ಕೆ KSRTC ಬಸ್ ನಿಯೋಜನೆ – ಪರೀಕ್ಷೆಗೆ ತೆರಳಲು ಪಿಯು ವಿದ್ಯಾರ್ಥಿಗಳ ಪರದಾಟ

ರಾಮನಗರ: ಇಂದಿನಿಂದ ದ್ವಿತೀಯ ಪಿಯುಸಿ (Second PUC Exam) ಪರೀಕ್ಷೆ ಆರಂಭ ಹಿನ್ನೆಲೆ ಗ್ರಾಮೀಣ ಭಾಗಗಳಲ್ಲಿ ಬಸ್‌ಗಳಿಲ್ಲದೇ ವಿದ್ಯಾರ್ಥಿಗಳ ಪರದಾಟ ನಡೆಸಿದ್ದಾರೆ.

ಕಾಂಗ್ರೆಸ್ ಸಮಾವೇಶಕ್ಕೆ ಕೆಎಸ್ಆರ್‌ಟಿಸಿ ಬಸ್‌ಗಳ ನಿಯೋಜನೆ ಮಾಡಲಾಗಿದ್ದು, ಬಸ್ ಇಲ್ಲದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ. ಗ್ರಾಮೀಣ ಪ್ರದೇಶಕ್ಕೆ ತೆರಳಿದ್ದ ಬಸ್‌ಗಳನ್ನು ರಾತ್ರೋರಾತ್ರಿ ಘಟಕಕ್ಕೆ ವಾಪಸ್ ಕರೆಸಿಕೊಂಡಿರೋ ಸಾರಿಗೆ ಅಧಿಕಾರಿಗಳು ಕುಣಿಗಲ್‌ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶಕ್ಕೆ ರಾಮನಗರ (Ramanagara) ಡಿಪೋನಿಂದ ಬಸ್ ನಿಯೋಜನೆ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ

ಇಂದು (ಶುಕ್ರವಾರ) ಕುಣಿಗಲ್ ಸಮಾವೇಶಕ್ಕೆ ಮಂಡ್ಯ, ರಾಮನಗರ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಯಿಂದ 300ಕ್ಕೂ ಅಧಿಕ ಬಸ್‌ಗಳನ್ನ ಒಪ್ಪಂದದ ಮೇರೆಗೆ ನೀಡಲಾಗಿದೆ. ಇತ್ತ ಸೂಕ್ತ ಬಸ್‌ಗಳಿಲ್ಲದೇ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತೆರಳಲು ಹರಸಾಹಸ ಪಡುವಂತಾಯಿತು.

ಆಟೋ ಹಾಗೂ ಖಾಸಗಿ ಬಸ್‌ಗಳಿಗೆ ನೇತು ಹಾಕಿಕೊಂಡು ಪರೀಕ್ಷಾ ಕೇಂದ್ರಕ್ಕೆ ತೆರಳಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಅಧಿಕಾರಿಗಳ ಚೆಲ್ಲಾಟವಾಡುತ್ತಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಜನರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ರಂಗದ ಕುರಿತು ಡಾಲಿ ಧನಂಜಯ್ ಬೇಡಿಕೆ: ಅಸ್ತು ಅಂದ್ರು ಸಿಎಂ ಸಿದ್ದರಾಮಯ್ಯ