ಹಾಸನ: ಚಲಿಸುತ್ತಿದ್ದ ವೇಳೆ ಸ್ಟೇರಿಂಗ್ ತುಂಡಾಗಿ ಕೆಎಸ್‌ಆರ್‌ಟಿಸಿ ಬಸ್ಸೊಂದು ರಸ್ತೆಯಿಂದ ಕೆಳಗಿಳಿದ ಘಟನೆ ಅರಸೀಕೆರೆ ತಾಲೂಕಿನ ಶಂಕರನಹಳ್ಳಿ ಬಳಿ ನಡೆದಿದೆ.
ಬುಧವಾರ ಅರಸಿಕೆರೆಯಿಂದ ಶಂಕರನಹಳ್ಳಿಗೆ ಕೆಎಸ್‌ಆರ್‌ಟಿಸಿ ಬಸ್ ಹೊರಟಿತ್ತು. 25 ಪ್ರಯಾಣಿಕರಿದ್ದ ಬಸ್ಸಿನ ಸ್ಟೇರಿಂಗ್ ಇದ್ದಕ್ಕಿದ್ದಂತೆ ತುಂಡಾಗಿದೆ. ಈ ಸಂದರ್ಭದಲ್ಲಿ ಚಾಲಕನಿಗೆ ನಿಯಂತ್ರಣ ಮಾಡಲು ಸಾಧ್ಯವಾಗದೇ ಬಸ್ಸು ಕೆಳಕ್ಕೆ ಇಳಿದಿದೆ.
ಅಪಘಾತದಿಂದ ಕೆಲವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೆಕ್ಯಾನಿಕಲ್ ವಿಭಾಗದವರು ಬಸ್ ನಿರ್ವಾಹಣೆ ಮಾಡುವಲ್ಲಿ ನಿರ್ಲಕ್ಷ್ಯ ಮಾಡಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಬಸ್ ಚಾಲಕ ದೂರಿದ್ದಾನೆ. ಮೊದಲು ಘಟನೆ ಕುರಿತು ಮಾಹಿತಿ ನೀಡದೇ ಸಿಬ್ಬಂದಿ ಮರೆಮಾಚಲು ಯತ್ನಿಸಿದರು. ಬಳಿಕ ಅಪಘಾತ ಯಾವ ಕಾರಣಕ್ಕೆ ಸಂಭವಿಸಿತು ಎಂದು ಅವರೇ ವಿವರಿಸಿದರು. ಸದ್ಯ ಘಟನೆ ಕುರಿತು ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply