ಹಿಂದೂ ಯಜ್ಞ-ಯಾಗಾದಿಗಳ ಬಗ್ಗೆ ಕೆ.ಎಸ್ ಭಗವಾನ್ ವ್ಯಂಗ್ಯ

ಮೈಸೂರು: ವಿಚಾರವಾದಿ ಕೆ.ಎಸ್. ಭಗವಾನ್ ಮತ್ತೆ ಹಿಂದೂ ಆಚಾರ ಪದ್ಧತಿಗಳ ವಿರುದ್ಧ ಕಿಡಿಕಾರಿದ್ದಾರೆ.

ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಗವಾನ್, ಹಿಂದೂ ಯಜ್ಞ ಯಾಗದಿಗಳ ಬಗ್ಗೆ ವ್ಯಂಗ್ಯ ವಾಡಿದರು. ಜನರೂ ಅದರಲ್ಲೂ ರಾಜಕಾರಣಿಗಳು ಕೈಗೆ ದಾರ ಕಟ್ಟಿಕೊಳ್ಳುತ್ತಾರೆ. ನಿಜವಾಗಿಯೂ ಆ ದಾರಕ್ಕೆ ಶಕ್ತಿ ಇದೆಯಾ ಎಂದು ಪ್ರಶ್ನಿಸಿದ್ರು.

ದಾರಕ್ಕೆ ಶಕ್ತಿ ಇದೆ ಅಂತಾದ್ರೆ ಪಾಕಿಸ್ತಾನ ಹಾಗೂ ಚೈನಾದ ಬಾರ್ಡರ್‍ಗೆ ಹೋಗಿ. ಅಲ್ಲಿ ನಿಮ್ಮ ದಾರ ಪ್ರದರ್ಶನ ಮಾಡಿ. ಶತ್ರುಗಳು ಓಡಿ ಹೋಗ್ತಾರಾ? ಓಡಿ ಹೋಗುವುದಾದರೆ ಬಾರ್ಡರ್‍ನಲ್ಲೇ ಹೋಮ ಮಾಡಿ. ಅಲ್ಲಿಯೇ ಕುಳಿತು ಯಜ್ಞ ಯಾಗಾದಿಗಳನ್ನು ಮಾಡಿ ಎಂದು ವ್ಯಂಗ್ಯವಾಡಿದರು.

ಇದೆಲ್ಲವೂ ಕೂಡ ಕೇವಲ ಮೂಢನಂಬಿಕೆ. ನಮ್ಮ ದೇಶವನ್ನು ಇಂದು ಪಂಚಾಂಗ ಆಳುತ್ತಿದೆ. ಮೊದಲು ಇದನ್ನ ತಡೆಯಯವ ಕೆಲಸ ಆಗಬೇಕಿದೆ. ದಾರ, ಹೋಮದಿಂದ ಎಲ್ಲವೂ ಸಾಧ್ಯವಾದರೆ ನಾನೇ ಮೊದಲು ಯಾಗ ಆರಂಭಿಸುತ್ತೇನೆ. ಹೋಮ ಹವನದಿಂದ ಶತ್ರುಗಳು ಓಡಿ ಹೋದರೆ ನಾನೇ ಯಾಗ ಮಾಡುತ್ತೇನೆ. ಮಿಲಿಟರಿಗೆ ಕೊಡುವ ಹಣವೆಲ್ಲ ಯಾಗಕ್ಕೆ ಖರ್ಚು ಮಾಡಲಿ. ಯೋಧರೆಲ್ಲ ವಾಪಾಸ್ ಬರಲಿ. ಯಜ್ಞದ ಮೂಲಕವೇ ಶತ್ರುಗಳನ್ನ ಸದೆ ಬಡೆಯೋಣ ಎಂದು ಹಿಂದೂ ಸಂಪ್ರದಾಯದ ಬಗ್ಗೆ ಭಗವಾನ್ ಕುಟುಕಿದರು.

Comments

Leave a Reply

Your email address will not be published. Required fields are marked *