ಒಂದು ವಾರದಲ್ಲಿ KRS ಡ್ಯಾಂ 17 ಅಡಿ ಭರ್ತಿ – ನೀರಿನ ಮಟ್ಟ 108 ಅಡಿಗೆ ಹೆಚ್ಚಳ

ಮಂಡ್ಯ: ಕೊಡಗು (Kodagu) ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕಾವೇರಿ ನದಿ (Cauvery River) ಉಕ್ಕಿ ಹರಿಯುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಹಿನ್ನೆಲೆ ಒಂದು ವಾರದಲ್ಲಿ ಕೆಆರ್‌ಎಸ್‌ ಡ್ಯಾಂ (KRS Dam) 17 ಅಡಿ ಭರ್ತಿಯಾಗಿದೆ.

ಒಂದು ವಾರದಲ್ಲಿ ಡ್ಯಾಂಗೆ 13 ಟಿಎಂಸಿಗೂ ಅಧಿಕ ಪ್ರಮಾಣದ ನೀರು ಹರಿದುಬಂದಿದೆ. ಕಳೆದ ವಾರ ಕೆಆರ್‌ಎಸ್ ನೀರಿನ ಮಟ್ಟ 91.20 ಅಡಿಗಳಷ್ಟಿತ್ತು. ಈಗ 108.18 ಅಡಿಗಳು ಭರ್ತಿಯಾಗಿದೆ. ಕಳೆದ ವಾರ ಕೆಆರ್‌ಎಸ್ ಡ್ಯಾಂ‌ನಲ್ಲಿ 16.690 ಟಿಎಂಸಿಯಷ್ಟು ನೀರು ಶೇಖರಣೆಯಾಗಿತ್ತು. ಇಂದು ಡ್ಯಾಂನಲ್ಲಿ 29.452 ಟಿಎಂಸಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್‌ – ಒಂದು ವಾರದಲ್ಲಿ 70 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿ

ಸದ್ಯ ಕೆಆರ್‌ಎಸ್ ಡ್ಯಾಂ ಒಳಹರಿವು 40,341 ಕ್ಯೂಸೆಕ್‌ ಇದೆ. ಡ್ಯಾಂನ ಹೊರಹರಿವು 4,106 ಕ್ಯೂಸೆಕ್ ನಷ್ಟಿದೆ. ಇದೇ ರೀತಿಯ ಒಳಹರಿವು ಇದ್ದರೆ ಬಹುಬೇಗನೆ ಡ್ಯಾಂ ಭರ್ತಿಯಾಗುವ ಸಾಧ್ಯತೆ ಹೆಚ್ಚಿದೆ.

ಕೆಆರ್‌ಎಸ್‌ ಡ್ಯಾಂ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 108.18 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 29.931 ಟಿಎಂಸಿ
ಒಳಹರಿವು – 40,341 ಕ್ಯೂಸೆಕ್
ಹೊರಹರಿವು – 4,106 ಕ್ಯೂಸೆಕ್

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]