4 ವರ್ಷಗಳ ಬಳಿಕ ಬೇಗನೆ 100 ಅಡಿಗೆ ಕುಸಿದ KRS ಡ್ಯಾಂ ನೀರಿನ ಮಟ್ಟ

krs dam

ಮಂಡ್ಯ: ಹಳೇ ಮೈಸೂರು (Mysuru) ಭಾಗದ ಜೀವನಾಡಿಯಾಗಿರುವ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ KRS ಡ್ಯಾಂನ ನೀರಿನ ಮಟ್ಟ 100 ಅಡಿಗೆ ಕುಸಿತ ಕಂಡಿದೆ.

ಕಳೆದ ವರ್ಷ ಉತ್ತಮ ಮಳೆಯಾದ ಪರಿಣಾಮ ಕೆಆರ್‌ಎಸ್ ಜಲಾಶಯ ಎರಡು ಬಾರಿ ಸಂಪೂರ್ಣ ಭರ್ತಿಯಾಗಿತ್ತು. ಹೀಗಿದ್ದರೂ ಸಹ ಮಾರ್ಚ್ ಮೂರನೇ ವಾರಕ್ಕೆ ಕೆಆರ್‌ಎಸ್‌ನ ನೀರಿನ ಮಟ್ಟ 100 ಅಡಿಗೆ ತಲುಪಿದೆ. 4 ವರ್ಷದ ಬಳಿಕ ಬೇಗನೆ ಡ್ಯಾಂ ನೀರಿನ ಮಟ್ಟ 100 ಅಡಿಗೆ ಕುಸಿತ ಕಂಡಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಸದ್ಯ 100 ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಇದನ್ನೂ ಓದಿ: ಇಬ್ಬರು ಹೆಂಡಿರನ್ನು ಮ್ಯಾನೇಜ್ ಮಾಡಲು ಹೋದ ಪೇದೆ – ಪತ್ನಿಯಿಂದಲೇ ಬರ್ಬರ ಹತ್ಯೆ

ಡ್ಯಾಂನಲ್ಲಿ ನೀರು 100 ಅಡಿಗೆ ಕಡಿಮೆಯಾದರೂ ಸಹ ಜೂನ್‌ವರೆಗೂ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಒಂದು ವೇಳೆ ಮುಂಗಾರು ಮಳೆ ತಡವಾದ್ರೆ ಕಾವೇರಿ ನೀರಿಗೆ ಅವಲಂಬಿತವಾಗಿರುವ ಜನರಿಗೆ ನೀರಿನ ಹಾಹಾಕಾರ ಎದುರಾಗಬಹುದು.

ಮೇ ತಿಂಗಳ ಅಂತ್ಯಕ್ಕೆ ಕೃಷಿಗೆ ನೀರು ಕೊಡುವುದು ಕಷ್ಟವಾಗಿದ್ದು, ನೀರಿನ ಸಮಸ್ಯೆಯಿಂದಾಗಿ ಡ್ಯಾಂನ ಅಚ್ಚುಕಟ್ಟು ರೈತರಲ್ಲಿ ಸ್ವಲ್ಪ ಆತಂಕ ಎದುರಾಗಬಹುದು. ಭತ್ತ ಕಾಳುಕಟ್ಟುವ ವೇಳೆಗೆ ನೀರಿನ ಅಭಾವ ಸೃಷ್ಟಿ ಸಾಧ್ಯತೆ ಇದ್ದು, ಮುಂಗಾರು ನಿಗದಿತ ಸಮಯಕ್ಕೆ ಮಳೆ ಸುರಿದರೆ ಕಾವೇರಿ ಕೊಳ್ಳದ ರೈತರಿಗೆ ಹಾಗೂ ಜನರಿಗೆ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. ಇದನ್ನೂ ಓದಿ: ಬೆಂಗಳೂರಲ್ಲಿ ಸಿಗರೇಟ್‌ ವಿಚಾರಕ್ಕೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ

Comments

Leave a Reply

Your email address will not be published. Required fields are marked *