ಪವನ್ ಒಡೆಯರ್ ಮುಂದೆ ಗೂಗ್ಲಿ ಬೆಡಗಿಯ ಬೇಡಿಕೆ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಗೂಗ್ಲಿ ಸಿನಿಮಾ ಮೂಲಕ ಹೆಚ್ಚು ಪರಿಚಿತರಾದ ನಟಿ ಕೃತಿ ಕರಬಂಧ, ಇದೀಗ ಬಾಲಿವುಡ್‍ನಲ್ಲಿ ಮಿಂಚುತ್ತಿದ್ದು, ಸಾಲು ಸಾಲು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇಷ್ಟೆಲ್ಲ ಆಫರ್‍ಗಳು ಬರುತ್ತಿದ್ದರೂ ಇನ್ನೊಂದು ಆಸೆಯನ್ನು ಪವನ್ ಒಡೆಯರ್ ಬಳಿ ಹೇಳಿಕೊಂಡಿದ್ದಾರೆ.

ಕೃತಿ ಕರಬಂಧ ಗೂಗ್ಲಿ ಸಿನಿಮಾ ಮೂಲಕ ಯುವಕರ ಕನಸಿನ ರಾಣಿಯಾಗಿದ್ದಾರೆ. ಇವರಿಗಾಗಿಯೇ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಅಲ್ಲದೆ ಅದಕ್ಕೆ ತಕ್ಕಂತೆ ಹಿಂದಿ ಹಾಗೂ ತಮಿಳು ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಹೀಗೆ ಸಾಲು ಸಾಲು ಆಫರ್ ಗಳನ್ನು ಪಡೆಯುತ್ತಿದ್ದರೂ ಕೃತಿ ಅವರು ಇದೀಗ ಕನ್ನಡದ ನಿರ್ದೇಶಕ ಪವನ್ ಒಡೆಯರ್ ಅವರ ಮುಂದೆ ಒಂದು ಆಸೆಯನ್ನು ಬಿಚ್ಚಿಟ್ಟಿದ್ದಾರೆ.

ನಿರ್ದೇಶಕ ಪವನ್ ಒಡೆಯರ್ ಅವರು ಗೂಗ್ಲಿ ಸಿನಿಮಾದ ಮೇಕಿಂಗ್ ಹಾಡನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ, ಓ ಮೈ ಗಾಡ್, ಈ ವಿಡಿಯೋ ಸಿಕ್ಕಿತು. ಗೂಗ್ಲಿ ಮೂವಿ ಮೇಕಿಂಗ್ ಸಾಂಗ್, ಈ ವಿಡಿಯೋವನ್ನು ಹಿಂದೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರಲಿಲ್ಲ. ವಂಡರ್‍ಫುಲ್ ಮೆಮೋರೀಸ್ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಯಶ್ ಹಾಗೂ ಕೃತಿ ಕರಬಂಧ ಅವರಿಗೆ ಇದನ್ನು ಟ್ಯಾಗ್ ಮಾಡಿದ್ದಾರೆ.

ಈ ಟ್ವೀಟ್‍ಗೆ ಪ್ರತಿಯಾಗಿ ಕೃತಿ ಕರಬಂಧ ಇದನ್ನು ರೀಟ್ವೀಟ್ ಮಾಡುವ ಮೂಲಕ ಉತ್ತರಿಸಿದ್ದು, ನನ್ನನ್ನು ಮತ್ತೆ ಹಿಂದಕ್ಕೆ ಕರೆದೊಯ್ದಿರಿ. ಈ ರೀತಿಯ ಸಿನಿಮಾ ಮತ್ತೆ ಮಾಡುವ ಎಂದು ಲವ್ ಸಿಂಬಲ್‍ನ ಎಮೋಜಿಗಳನ್ನು ಹಾಕಿದ್ದಾರೆ.

ಪವನ್ ಹಾಗೂ ಕೃತಿ ಕರಬಂಧ ಟ್ವೀಟ್‍ಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಗೂಗ್ಲಿ-2 ಬರಲಿ ಎಂದು ಒತ್ತಾಯಿಸುತ್ತಿದ್ದಾರೆ. ಸ್ವಾತಿ ಹಾಗೂ ಶರತ್ ಮತ್ತೆ ತೆರೆ ಮೇಲೆ ನೋಡಬೇಕು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಒಬ್ಬ ಅಭಿಮಾನಿ ಕಮೆಂಟ್ ಮಾಡಿ ನಾನು ಬೆಂಗಳೂರಿಗೆ ಬಂದಾಗ ನೋಡಿದ ಮೊದಲ ಸಿನಿಮಾ, ಯಾರೇ ಬರಲಿ, ಯಾರೇ ಹೋಗಲಿ ನಮ್ಮ ಬಾಸ್ ಯಶ್ ಹಾಗೂ ಕೃತಿ ರೀತಿಯ ಜೋಡಿ ಇರಲು ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ವೀಕೆಂಡಿನಲ್ಲಿ ನನ್ನ ಹೋಮ್ ಟೌನಿಗೆ ಹೋಗುವಾಗ ನನ್ನ ತಲೆಗೆ ಬಂದಿತ್ತು ಒಂದು ಲವ್ ಸ್ಟೋರಿ. ಕನಸಲ್ಲಿ ಕಾಡಿದ ಕಥೆಯನ್ನು ನಾನು ಹೇಗೆ ಪಿಕ್ಚರ್ ಮಾಡಿದೆಯಂಥ ಹೇಳ್ತಿನ್ರಿ ಎಂಬ ಸಾಲುಗಳು ಈ ಮೇಕಿಂಗ್ ವೀಡಿಯೋದಲ್ಲಿವೆ. ಸ್ಕ್ರೀನ್ ಪ್ಲೇನೂ ಮಾಡಿಕೊಂಡೆ, ಡೈಲಾಗ್ಸ್ ಬರೆದುಕೊಂಡೆ, ಹೀರೋ ಯಾರೆಂದು ಗೊತ್ತಿರಲಿಲ್ಲ. ರಾಕಿಂಗ್ ಸ್ಟಾರ್ ಕೇಳಿಬಿಟ್ಟರು. ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಖುಷಿಯಾಗಿ ಮಾಡಿ ಎಂದೇ ಬಿಟ್ಟರು ಎಂಬ ಸಾಲುಗಳು ಮೇಕಿಂಗ್ ವೀಡಿಯೋದಲ್ಲಿವೆ.

ವಿಡಿಯೋ ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೂಗ್ಲಿ-2 ಸಿನಿಮಾ ಆಗಬೇಕು. ಮತ್ತೆ ಈ ಜೋಡಿಯೇ ನಟಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅದರಂತೆ ಕೃತಿ ಕರಬಂಧ ಸಹ ಇದೇ ರೀತಿ ಬರೆದುಕೊಂಡಿದ್ದಾರೆ. ಟೇಕ್ ಮಿ ಬ್ಯಾಕ್ ಎಂದು ಹೇಳಿದ್ದಾರೆ.

ಇತ್ತೀಚೆಗೆ ಹೌಸ್‍ಫುಲ್-4 ಸಿನಿಮಾದಲ್ಲಿ ಕೃತಿ ಕರಬಂಧ ನಟಿಸಿದ್ದು, ಹಲವು ತಮಿಳು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದೀಗ ಕೊರೊನಾ ವೈರಸ್ ಭೀತಿಯಿಂದಾಗಿ ಶೂಟಿಂಗ್ ಸ್ಥಗಿತಗೊಂಡಿದ್ದು, ಮನೆಯಲ್ಲೇ ತಮ್ಮ ಭಾವಿ ಪತಿಯೊಂದಿಗೆ ಕಾಲ ಕಳೆಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *