40 ವರ್ಷದ ಹಳೆಯ ಥಿಯೇಟರ್ ಗೋಡೆ ಕುಸಿತ – 24 ಬೈಕ್‍ಗಳು ಜಖಂ

ಬೆಂಗಳೂರು: ತಡರಾತ್ರಿ ನಗರದಲ್ಲಿ ಸುರಿದ ಭಾರೀ ಮಳೆಗೆ ಕೆ.ಆರ್ ಪುರಂನ ಕೃಷ್ಣ ಥಿಯೇಟರ್ ಗೋಡೆ ಕುಸಿದು 24 ಬೈಕ್‍ಗಳು ಜಖಂ ಗೊಂಡಿದೆ.

ಇತ್ತೀಚೆಗಷ್ಟೇ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅಭಿನಯಿಸಿದ `777 ಚಾರ್ಲಿ’ ಸಿನಿಮಾ ಸೆಕೆಂಡ್ ಶೋ ನೋಡಲು ಜನರು ಬಂದಿದ್ದರು. ಈ ವೇಳೆ ತಮ್ಮ ಬೈಕ್‍ಗಳನ್ನು ಕಾಂಪೌಂಡ್ ಬಳಿ ಪಾರ್ಕ್ ಮಾಡಿದ್ದರು. 11 ಗಂಟೆ ಸುಮಾರಿಗೆ ಬೈಕ್‍ಗಳ ಮೇಲೆ ಗೋಡೆ ಕುಸಿದು ಬಿದ್ದಿದೆ. ಇದನ್ನೂ ಓದಿ:  ಮೆಟ್ರೋ ಮೇಲ್ಸೇತುವೆ ಮೇಲೆ ಪ್ರೇಮ ಬರಹ – ಫೋಟೋ ವೈರಲ್

ನಂತರ ಮಾಲೀಕರು ಥಿಯೇಟರ್ ಸರಿಯಾಗಿ ನಿರ್ವಹಣೆ ಮಾಡದೇ ಇದ್ದಿದ್ದರಿಂದ ಘಟನೆ ಜರುಗಿದೆ ಎಂದು ಗಾಡಿ ಕಳೆದುಕೊಂಡ ಮಾಲೀಕರು, ಥಿಯೇಟರ್‌ನವರ ಜೊತೆ ಗಲಾಟೆ ಮಾಡಿದ್ದಾರೆ. ಈ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದರು. ಇದನ್ನೂ ಓದಿ: 2023ರ ಚುನಾವಣೆಗೆ ಬಿಜೆಪಿ ಸಜ್ಜು- ಕೋಟೆನಾಡಿಗೆ ಇಂದು ಜೆ.ಪಿ. ನಡ್ಡಾ ಭೇಟಿ

ಕೆ.ಆರ್ ಪುರಂನ ದೇವಸಂದ್ರದಲ್ಲಿರುವ ಕೃಷ್ಣ ಥಿಯೇಟರ್ 40 ವರ್ಷದ ಹಳೆಯ ಥಿಯೇಟರ್ ಆಗಿದ್ದು, 40 ವರ್ಷದ ಹಿಂದೆ ಥಿಯೇಟರ್ ಕಾಂಪೌಂಡ್ ಕಟ್ಟಲಾಗಿದೆ. ಆದರೆ ತಡರಾತ್ರಿ ಸುರಿದ ಮಳೆಗೆ ಕಾಂಪೌಂಡ್ ಕುಸಿದು ಬೈಕ್‍ಗಳು ಜಖಂ ಆಗಿವೆ.

Live Tv

Comments

Leave a Reply

Your email address will not be published. Required fields are marked *