ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಇಂದು ಫೈನಲ್ ಕಸರತ್ತು- ದೆಹಲಿಯಲ್ಲಿ ನೂತನ ಕೈ ಸಾರಥಿ ನೇಮಕ

ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಪಟ್ಟದ ಫೈನಲ್ ಮ್ಯಾಚ್ ಇಂದು ದೆಹಲಿಯಲ್ಲಿ ನಡೆಯಲಿದೆ. ಹೈಕಮಾಂಡ್ ಬುಲಾವ್ ಹಿನ್ನಲೆಯಲ್ಲಿ ಭಾನುವಾರವೇ ದೆಹಲಿಗೆ ಸಿಎಂ ತೆರಳಿದ್ದಾರೆ. ರಾಜ್ಯ ನಾಯಕರ ಅಭಿಪ್ರಾಯವನ್ನ ಸಂಗ್ರಹಿಸಲಿರುವ ಕಾಂಗ್ರೆಸ್ ಹೈಕಮಾಂಡ್ `ಕೈ’ ನೂತನ ಕ್ಯಾಪ್ಟನ್ ನೇಮಕ ಮಾಡಲಿದೆ.

ಕುತೂಹಲಕ್ಕೆ ಕಾರಣವಾಗಿರೋ ಕೆಪಿಸಿಸಿ ಅಧ್ಯಕ್ಷ ಗಾದಿಯ ಆಯ್ಕೆ ಕಸರತ್ತು ಇಂದು ಬಹುತೇಕ ಮುಕ್ತಾಯಗೊಳ್ಳಲಿದೆ. ಅಧ್ಯಕ್ಷ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹಣೆಗೆ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷಗಾದಿಗೆ ರಾಜ್ಯದ ಪ್ರಮುಖ ನಾಯಕರನ್ನ ಕರೆಸಿಕೊಂಡಿರೋ ಕಾಂಗ್ರೆಸ್ ಹೈಕಮಾಂಡ್ ಇಂದು ನಾಯಕರ ಅಭಿಪ್ರಾಯ ಸಂಗ್ರಹ ಮಾಡಲಿದೆ. ಆ ಬಳಿಕ ಅಳೆದು ತೂಗಿ ಕೆಪಿಸಿಸಿಗೆ ಹೊಸ ನಾಯಕನನ್ನ ಘೋಷಿಸಲಿದೆ.

ಫೈನಲ್‍ನಲ್ಲಿ ಮೂರು ಹೆಸರುಗಳು: ದಲಿತ ಸಮುದಾಯದ ಬೆಂಬಲದೊಂದಿಗೆ ಮತ್ತೊಂದು ಅವಧಿಗೆ ಅಧ್ಯಕ್ಷರಾಗಲು ಪರಮೇಶ್ವರ್ ಕಸರತ್ತು ಮಾಡ್ತಿದ್ರೆ, ಒಕ್ಕಲಿಗರ ಜೊತೆ ಉಪಚುನಾವಣೆಗಳಲ್ಲಿ ಕೆಲಸ ಮಾಡಿ ಜಯದ ಹುಮ್ಮಸ್ಸಿನಲ್ಲಿರೋ ಇಂಧನ ಸಚಿವ ಡಿಕೆ ಶಿವಕುಮಾರ್ ತಮ್ಮ ಪ್ರಭಾವ ಬೀರಿ ಮತ್ತೊಂದು ಕಡೆ ಲಾಬಿ ಮಾಡ್ತಿದ್ದಾರೆ. ಇನ್ನೊಂದು ಕಡೆ ಹೆಂಗಾದ್ರು ಮಾಡಿ ತನ್ನ ಅಭ್ಯರ್ಥಿಯನ್ನ ಕೂರಿಸಿ ಅಧಿಕಾರ ನಡೆಸಲು ಪ್ಲಾನ್ ಮಾಡಿರುವ ಸಿಎಂ ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಆಪ್ತ ಸಚಿವ ಎಂ.ಬಿ. ಪಾಟೀಲ್ ಪರ ಬ್ಯಾಟಿಂಗ್ ಮಾಡಲು ಮುಂದಾಗಿದ್ದಾರೆ.

ರವಿವಾರ ಸಚಿವ ಡಿ.ಕೆ.ಶಿವಕುಮಾರ್ ಅವರು ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರನ್ನು ಭೇಟಿಯಾಗಿದ್ದು ಕೂತುಹಲ ಮೂಡಿಸಿದೆ. ಆಶ್ಚರ್ಯ ಎಂಬಂತೆ ರವಿವಾರ ಸಿಎಂ ದೆಹಲಿಗೆ ತೆರಳುವ ವೇಳೆ ಅಧ್ಯಕ್ಷ ಆಕಾಂಕ್ಷಿಗಳಾದ ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ಕೂಡ ಜೊತೆಯಲ್ಲೇ ಪ್ರಯಾಣ ಬೆಳೆಸಿದ್ದು, ತೀವ್ರ ಕೂತುಹಲ ಮೂಡಿಸಿದೆ.

Comments

Leave a Reply

Your email address will not be published. Required fields are marked *