ನೆಚ್ಚಿನ ಶಿಷ್ಯ ನಲಪಾಡ್‌ಗೆ ಡಿಕೆಶಿಯಿಂದ ಸ್ಪೆಷಲ್‌ ಗಿಫ್ಟ್‌

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಯಥಾ ಗುರು ತಥಾ ಶಿಷ್ಯ ಎಂಬ ಹುಕುಂ ಜಾರಿಯಾಯ್ತಾ? ನನ್ನಂತೆ ನನ್ನ ಶಿಷ್ಯನು ಗ್ರಾಂಡ್ ಎಂಟ್ರಿ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಬಯಸಿದ್ರಾ ಎಂಬ ಪ್ರಶ್ನೆ ಎದ್ದಿದೆ.

ವಿಶೇಷ ಸ್ಥಳದಲ್ಲಿ ಭರ್ಜರಿಯಾಗಿ ನಲಪಾಡ್‌ ಪದಗ್ರಹಣ ಮಾಡಲು ಡಿಕೆಶಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಈ ಪ್ರಶ್ನೆ ಈಗ ಎದ್ದಿದೆ.

ನೂತನ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ನಲಪಾಡ್ ಫೆಬ್ರವರಿ 10 ರಂದು ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮ ಆಯೋಜಿಸುವುದು ದೊಡ್ಡ ವಿಚಾರ ಅಲ್ಲ. ಆದರೆ ಪ್ರಮುಖ ನಾಯಕರನ್ನು ಆಹ್ವಾನಿಸಿ ಭರ್ಜರಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಈ ಮೇಲಿನ ಪ್ರಶ್ನೆ ಎದ್ದಿದೆ.

ಡಿ.ಕೆ.ಶಿವಕುಮಾರ್ 2020 ಜುಲೈ 2 ರಂದು ನೂತನ ಕೆಪಿಸಿಸಿ ಕಚೇರಿ ಆವರಣದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದರು. ಈಗ ನಲಪಾಡ್‌ಗೂ ಅದೇ ಜಾಗದಲ್ಲಿ ಪದಗ್ರಹಣ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳ ಜೊತೆ ಪ್ರವಾಸಕ್ಕೆ ಬಂದ ನಟ ಶಿವಣ್ಣ

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಹಿಂಭಾಗದಲ್ಲಿ ನೂತನ ಕಚೇರಿ ನಿರ್ಮಾಣ ಕಾರ್ಯ ಕಳೆದ 6 ವರ್ಷದಿಂದ ನಡೆಯುತ್ತಲೇ ಇದೆ. ನೂತನ ಕಚೇರಿಯ ಕೆಲಸ ಮುಗಿದಿಲ್ಲ ಮತ್ತು ಕಚೇರಿಯ ಉದ್ಘಾಟನೆಯೂ ನಡೆದಿಲ್ಲ. ಆದರೆ ತಮ್ಮ ಶಿಷ್ಯ ತಮ್ಮಂತೆ ಗ್ರಾಂಡ್ ಎಂಟ್ರಿ ಕೊಡಲಿ ಎಂದು ಡಿಕೆಶಿ ನಲಪಾಡ್‌ ಕಾರ್ಯಕ್ರಮಕ್ಕೆ ಸ್ಪೆಷಲ್ ಅನುಮತಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಅಪ್ಪು ಜೊತೆ ಡ್ಯಾನ್ಸ್ ಕಾರ್ಯಕ್ರಮಕ್ಕೆ ಹೋಗಿದ್ದು, ನನ್ನ ಜೀವನದ ಮರೆಯಲಾಗದ ಕ್ಷಣ: ಅಲ್ಲು ಅರ್ಜುನ್

ಒಟ್ಟಿನಲ್ಲಿ ತನ್ನಂತೆ ತನ್ನ ಶಿಷ್ಯನ ಇಮೇಜ್ ಹೆಚ್ಚಿಸಲು ಡಿಕೆಶಿ ಅವಕಾಶ ಮಾಡಿಕೊಟ್ಟಿದ್ದಾರೆ. ಇಷ್ಟೇ ಅಲ್ಲದೇ ತಮ್ಮ ಪಿಆರ್ ಮಾಡುತ್ತಿದ್ದ ಡಿಸೈನ್ ಬಾಕ್ಸ್ ಸಂಸ್ಥೆಗೆ ನಲಪಾಡ್‌ ಪರವಾಗಿ ಕೆಲಸ ಮಾಡಲು ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

Comments

Leave a Reply

Your email address will not be published. Required fields are marked *