ಮಂತ್ರಿಗಳು ತಮ್ಮ ಮಕ್ಕಳನ್ನು ಅಗ್ನಿಪಥ್ ಯೋಜನೆಗೆ ಕಳಿಸಲಿ ನೋಡೋಣ: ಡಿಕೆಶಿ ಚಾಲೆಂಜ್

ಬೆಂಗಳೂರು: ಮಂತ್ರಿಗಳು ತಮ್ಮ ಮಕ್ಕಳನ್ನು ಅಗ್ನಿಪಥ್ ಯೋಜನೆಗೆ ಕಳುಹಿಸಲಿ ನೋಡೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸವಾಲೆಸೆದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಯೋಜನೆ ತಂದಿದ್ದೀರಾ ಆ ಮಕ್ಕಳು ಡಿಗ್ರಿ ಪಾಸ್ ಮಾಡಬಾರದಾ….? ಇಷ್ಟು ವರ್ಷ ದೇಶವನ್ನು ಎಂಥೆಂತ ಸಂದರ್ಭಗಳಲ್ಲಿ ರಕ್ಷಣೆ ಮಾಡಿದ್ದಾರಲ್ಲ. ಮಂತ್ರಿಗಳು ಅವರ ಮಕ್ಕಳನ್ನು ಅಗ್ನಿಪಥ್ ಯೋಜನೆಗೆ ಕಳಿಸಲಿ ನೋಡೋಣ. ಮಂತ್ರಿಗಳ ಮಕ್ಕಳು ಇಂಜಿನಿಯರ್ ಆಗಬೇಕು ಡಾಕ್ಟರ್ ಆಗಬೇಕು. ಆದರೆ ಬಡವರ ಮಕ್ಕಳು ಮಾತ್ರ ಸೆಕ್ಯುರಿಟಿ ಗಾಡ್ರ್ಸ್ ಗಳಾಗಬೇಕಾ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದರು.

ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಬೆಂಗಳೂರು ರಸ್ತೆಗಳಿಗೆ ಡಾಂಬರ್ ಹಾಕಿರವುದು. ಜನರಿಗೆ ಅನುಕೂಲ ಅಲ್ಲ, ಅವರ ನಾಯಕರಿಗೆ ಅನುಕೂಲ. ರಾಮಲಿಂಗರೆಡ್ಡಿ ಕೇಳಿದ್ದಾರೆ ಪ್ರಧಾನಿಗಳು 40% ಕಮಿಷನ್ ಆರೋಪಕ್ಕೆ ಉತ್ತರ ಕೊಡಬೇಕು. ರಾಮಲಿಂಗರೆಡ್ಡಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸುರಂಗ ಮಾರ್ಗದಲ್ಲಿ ಬಿದ್ದಿದ್ದ ಕಸವನ್ನು ಬರಿಗೈಯಲ್ಲೇ ತೆಗೆದ ಮೋದಿ

ಮೋದಿ ಪ್ರಯಾಣಿಸುವ ರಸ್ತೆಗಳಲ್ಲಿ ಕಾಲೇಜುಗಳಿಗೆ ರಜೆ ನೀಡಿದ್ದಕ್ಕೆ ಅಸಮಧಾನ ವ್ಯಕ್ತಪಡಿಸಿದ ಡಿಕೆಶಿ, ಕಾಲೇಜುಗಳಿಗೆ ಯಾಕೆ ರಜೆ ಕೊಡಬೇಕು..?, ವಿದ್ಯಾರ್ಥಿಗಳು ಗಲಾಟೆ ಮಾಡ್ತಾರಾ..?. ರೋಡಲ್ಲಿ ಏನು ಸೆಕ್ಯುರಿಟಿ ಕೊಡಬೇಕೋ ಕೊಡಿ. ರೋಡ್ ಶೋ ಮಾಡಿ ರಾಜಕೀಯ ಮಾಡಿ. ಆದರೆ ವಿದ್ಯಾರ್ಥಿ ಗಳನ್ನು ಯಾಕೆ ಅನುಮಾನದಿಂದ ನೋಡ್ತಿದ್ದೀರಾ…?, ನಮ್ಮ ವಿದ್ಯಾರ್ಥಿಗಳೇನು ಟೆರರಿಸ್ಟ್ ಗಳಾ ಎಂದು ಪ್ರಶ್ನಿಸಿದರು.

ಡಿಕೆಶಿ ಹಿಂದು ವಿರೋಧಿ ಎಂದಿ ಬಿಜೆಪಿ ಟ್ವೀಟ್ ವಿಚಾರದ ಕುರಿತು ಪ್ರತಿಕ್ರಿಯಿಸಿ, ನನ್ನ ಕ್ಷೇತ್ರದಲ್ಲಿ 300-400 ದೇವಸ್ಥಾನಗಳನ್ನ ಜೀರ್ಣೋದ್ಧಾರ ಮಾಡಿಸಿದ್ದೇನೆ. ಬೇಕಾದ್ರೆ ಬಂದು ನೋಡಲಿ. ನಾನೊಬ್ಬ ಹಿಂದೂ, ಎಲ್ಲ ಧರ್ಮಕ್ಕೂ ಗೌರವ ಕೊಡಬೇಕು. ನಾವು ಯಾರಿಗೆ ಬೇಕಾದರೂ ಅಧಿಕಾರ ಕೊಡ್ತೇವೆ ಇವರಿಗೆ ಏನಾಗಬೇಕು. ಇವರ ಪಾರ್ಟಿಗೆ ಏನಾಗಬೇಕು, ಅವರಿಗೆ ನಮ್ಮ ಯುವಕರ ಬಗ್ಗೆ ಭಯವಿದೆ.ಸಂಘಟನೆಗಳ ಬಗ್ಗೆ ಭಯವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜೂನ್ 20 ರಂದು ಪ್ರಧಾನಿ ಕಾರ್ಯಕ್ರಮ- ಆಯ್ದ ಮಾರ್ಗಗಳ ಕಾಲೇಜುಗಳಿಗೆ ರಜೆ

ಬಾಲಗಂಗಾಧರನಾಥ ಸ್ವಾಮೀಜಿ ಇತಿಹಾಸ, ಶಿವಕುಮಾರ ಸ್ವಾಮೀಜಿ ಇತಿಹಾಸ, ಶಂಕರಾಚಾರ್ಯರು ಎಲ್ಲರ ಬಗ್ಗೆಯೂ ಪಠ್ಯದಲ್ಲಿ ಅವಮಾನ ಆಗಿದೆ. ಕೆಲವು ಸ್ವಾಮೀಜಿಗಳು ಟ್ವೀಟ್ ಮಾಡಿ ದೂರು ಕೊಡುವ ಕೆಲಸ ಮಾಡಿದ್ದಾರೆ. ಆದರೆ ಇನ್ನಷ್ಟು ಸ್ವಾಮೀಜಿಗಳು ಧ್ವನಿ ಎತ್ತಬೇಕು. ಸ್ವಾಮೀಜಿಗಳು ರಾಜಕಾರಣಕ್ಕೆ ಬೆಂಬಲ ಕೊಡುವುದು ಬೇಡ. ಅವರು ಇರುವುದು ಸಂಸ್ಕೃತಿ ನ್ಯಾಯ ಉಳಿಸಲು ಸ್ವಾಮೀಜಿಗಳು ಇರುವುದು ಪ್ರಯತ್ನ ಮಾಡ್ತಿರುವುದು. ಸರ್ಕಾರಕ್ಕೆ ಹೆದರಿಕೊಂಡು ಸ್ವಾಮೀಜಿಗಳು ಸುಮ್ಮನಿರಿವುದು ಬೇಡ. ಅವರೇ ಧ್ವನಿ ಎತ್ತದಿದ್ದರೆ ಯಾರು ಎತ್ತಬೇಕು ಎಂದು ಮರು ಪ್ರಶ್ನೆ ಹಾಕಿದರು. ಇದನ್ನೂ ಓದಿ: ಗುರುದ್ವಾರದ ಮೇಲೆ ದಾಳಿ: 100ಕ್ಕೂ ಹೆಚ್ಚು ಸಿಖ್ಖರು, ಹಿಂದೂಗಳಿಗೆ E-Visa

ಒಂದು ಜಾತಿ ಧರ್ಮದ ವಿಚಾರ ಅಲ್ಲ. ಎಲ್ಲರೂ ಕೂಡ ಒಗ್ಗಟ್ಟು ಇರಬೇಕು. ಶಾಂತಿ ಭಂಗ ಮಾಡುವ ಕೆಲಸ ಸರ್ಕಾರ ಮಾಡ್ತಿದೆ. ಅವಮಾನ ಆದಾಗ ಒಕ್ಕಲಿಗರ ಸಂಘ ಯಾಕೆ ಮಾತಾಡ್ತಿಲ್ಲ?. ಬೇರೆ ಸಂಘಟನೆಗಳು ಯಾಕೆ ಮಾತಾಡ್ತಿಲ್ಲ. ರಾಜಕಾರಣಿಗಳು ಕೆಲವರು ಅಡ್ಸಜ್ಟ್ ಮಾಡ್ಕೊಂಡು ರಾಜಕಾರಣ ಮಾಡ್ತಿರಬಹುದು. ಆದರೆ ಇದರಲ್ಲಿ ಹಾಗೆ ಇರಬಾರದು ಎಂದರು.

Live Tv

Comments

Leave a Reply

Your email address will not be published. Required fields are marked *