ಬಿಎಸ್‍ವೈ ಸೈನಿಕರ ರಕ್ತದ ಮೇಲೆ ರಾಜಕೀಯ ಮಾಡ್ತಿದ್ದಾರೆ: ದಿನೇಶ್ ಗುಂಡೂರಾವ್ ಕಿಡಿ

ಹುಬ್ಬಳ್ಳಿ: ದೇಶಕ್ಕಾಗಿ ಸೈನಿಕರು ತ್ಯಾಗ, ಹೋರಾಟ ಮಾಡಿದ್ದಾರೆ. ಆದರೆ ಇದನ್ನ ರಾಜಕೀಯ ಲಾಭ ಆಗುತ್ತೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದು, ಸೈನಿಕರ ರಕ್ತದ ಮೇಲೆ ರಾಜಕೀಯ ವ್ಯಾಪಾರ ಮಾಡ್ತಾರಾ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಸೈನಿಕರ ವಿಚಾರದಲ್ಲಿ ಬಿಎಸ್‍ವೈ ಅವರ ಹೇಳಿಕೆಯಲ್ಲಿ ಅವರ ಸ್ವಾರ್ಥ ಎದ್ದು ಕಾಣುತ್ತಿದೆ. ಮೋದಿ ಅಲೆ ಇವತ್ತು ಮಾತ್ರ ಬಂದಿದೆಯಾ, ಮೊದಲು ಇರಲಿಲ್ಲವಾ? ದೇಶದಲ್ಲಿ ಧ್ವೇಷ ನಿರ್ಮಾಣ ಮಾಡುವ ಕಾರ್ಯ ನಡೆಸಲಾಗುತ್ತಿದ್ದು, ಇಡಿ ಹಾಗೂ ಐಟಿ ಇಲಾಖೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇವರು ಬಂದ ಮೇಲೆ ನ್ಯಾಯಾಧೀಶರು ಕೂಡ ಮಾಧ್ಯಮದ ಮುಂದೆ ಬರಬೇಕಾಯಿತು ಎಂದು ಕಿಡಿಕಾರಿದರು.

ದೇಶದ ಯೋಧರು ನಡೆಸುತ್ತಿರುವ ವೇಳೆ ನಾವು ಅವರ ಸರ್ಕಾರ ಹಾಗೂ ಯೋಧರ ಬೆಂಬಲಕ್ಕೆ ನಿಲ್ಲುತ್ತೇವೆ. ಆದರೆ ಇಂತಹ ವಿಚಾರಗಳನ್ನು ಬಿಜೆಪಿ ರಾಜಕೀಯಕ್ಕೆ ಬಳಕೆ ಮಾಡುತ್ತಿದೆ. ಅಮಿತ್ ಶಾ ಅವರು ಸಹ ಎಲ್ಲಿ ಚುನಾವಣಾ ಪ್ರಚಾರ ನಡೆಸಿದರೂ ಕೂಡ ಸೈನಿಕರ ಹೋರಾಟವನ್ನು ಚುನಾವಣಾ ಅಸ್ತ್ರವಾಗಿ ಬಳಸುವ ಮಾತು ಹೇಳುತ್ತಿದ್ದಾರೆ. ಈ ರೀತಿ ಹೇಳಿಕೆ ನೀಡುವುದನ್ನು ಬಿಜೆಪಿ ನಿಲ್ಲಿಸಬೇಕು. ಬಿಜೆಪಿ ಅಥವಾ ಆರ್ ಎಸ್‍ಎಸ್ ಗಡಿಯಲ್ಲಿ ಹೋರಾಟ ಮಾಡುತ್ತಿದ್ದರಾ ಎಂದು ಪ್ರಶ್ನಿಸಿದರು. ಅಲ್ಲದೇ ತಮ್ಮ ಹೇಳಿಕೆಗೆ ಬಿಎಸ್‍ವೈ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಯಾರಾದರು ಬೇರೆ ರೀತಿ ಮಾತನಾಡಿದರೆ ಪಾಕಿಸ್ತಾನಕ್ಕೆ ಹೋಗಿ ಅಂತಾರೆ. ಆದರೆ ರಾಹುಲ್ ಗಾಂಧಿ, ಮೋದಿ, ನಾವು ಸೇರಿದಂತೆ ಎಲ್ಲರೂ ದೇಶ ಭಕ್ತರೆ. ದೇಶ ಭಕ್ತಿ ನಮ್ಮ ಗುತ್ತಿಗೆಯಲ್ಲಿ ಇದೆ ಎನ್ನುವಂತೆ ಮಾತನಾಡುವುದು ಸಾರ್ವಭೌಮತ್ವಕ್ಕೆ ಧಕ್ಕೆ ತಂದಂತೆ. ಆಡಳಿತ ಪಕ್ಷ ಎಲ್ಲರನ್ನೂ ಒಟ್ಟಿಗೆ ಕರೆಸಿಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು.

ಮಾಚ್ 9ಕ್ಕೆ ರಾಹುಲ್ ಭೇಟಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸಕ್ಕೆ ಆಗಮಿಸುತ್ತಿದ್ದು, ಸಮಾವೇಶ ನಡೆಸಲು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಅವರು ಇದೇ ವೇಳೆ ಮಾಹಿತಿ ನೀಡಿದರು. ರಾಹುಲ್ ಗಾಂಧಿ ಆಗಮಿಸುತ್ತಿರುವ ಕಾರಣ ಕಾಂಗ್ರೆಸ್ ಸಮಾವೇಶಕ್ಕೆ ಸ್ಥಳ ವಿಕ್ಷಣೆ ಮಾಡುತ್ತಿದ್ದೇವೆ. ಹಾವೇರಿ, ಗದಗ ಹಾಗೂ ಧಾರವಾಡ ನಡುವೆ ಸ್ಥಳ ನಿಗದಿ ಮಾಡಲಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *