70 ಮನೆಗಳನ್ನು ದೋಚಿದ್ದ ಮನೆಗಳ್ಳ ಎಸ್ಕೇಪ್ ಕಾರ್ತಿಕ್ ಅಂದರ್

ಬೆಂಗಳೂರು: ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಎಸ್ಕೇಪ್ ಕಾರ್ತಿಕ್ ಎಂಬ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಆಸೆಯನ್ನು ಇಟ್ಟುಕೊಂಡಿದ್ದ ಕಾರ್ತಿಕ್ ನ್ಯಾಯವಾಗಿ ದುಡಿಯೋದಕ್ಕೆ ಆಗ್ತಾ ಇರ್ಲಿಲ್ಲ. ವಿದ್ಯಾಭ್ಯಾಸವು ಕಾರ್ತಿಕ್ ತಲೆಗೆ ಹತ್ತಿರಲಿಲ್ಲ. ಇನ್ನೂ ತನ್ನ ಆಸೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಮನೆಗಳ್ಳತನವನ್ನು ಮಾಡಲು ಆರಂಭಿಸಿದನು. ಕಾರ್ತಿಕ್ ಮೊದಲ ಪ್ರಯತ್ನದಲ್ಲಿಯೇ 10 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ್ದನು. ಕಷ್ಟ ಪಟ್ಟರೂ ದುಡಿದು ಹಣ ಮಾಡಲು ಆಗೋದಿಲ್ಲ ಅಂತ ಈ ಮಾರ್ಗವನ್ನು ಹಿಡಿದಿದ್ದ ಅಂತಾ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ಹೇಳಿದ್ದಾರೆ.

ಹೆಸರಿನ ಮುಂದೆ ಎಸ್ಕೇಪ್ ಬಂದಿದ್ದು ಹೇಗೆ?: ಹಣವನ್ನು ಸುಲಭವಾಗಿ ಕಿಸೆ ಒಳಗೆ ಹಾಕೊಳ್ಳಬಹುದು ಅಂತ ಅಂದುಕೊಂಡ ಕಾರ್ತಿಕ್ ಇದೇ ರೀತಿ ಬರೋಬ್ಬರಿ 70 ಮನೆಗಳಲ್ಲಿ ಕಳ್ಳತನ ಮಾಡಿದ್ದಾನೆ. 70 ಮನೆಯಲ್ಲಿ ಕಳ್ಳತನ ಮಾಡಿದವ ಜೈಲಿಗೆ ಹೋಗಿಲ್ಲ ಅಂತ ಅಲ್ಲ. ಸಾಕಷ್ಟು ಬಾರಿ ಜೈಲಿಗೆ ಹೋಗಿದ್ದಾನೆ. ಜೈಲಿನಿಂದ ಟೆಂಪೋ ಚಾರ್ಸಿ ಹಿಡಿದು ತಪ್ಪಿಸಿಕೊಂಡಿದ್ದಾನೆ. ಆ ಬಳಿಕವಷ್ಟೇ ಈತನನ್ನ ಎಸ್ಕೇಫ್ ಕಾರ್ತಿಕ್ ಅಂತ ಕರೆಯೋದಕ್ಕೆ ಶುರು ಮಾಡಲಾಯಿತು.

ಸದ್ಯ ಕೊತ್ತನೂರು ಪೊಲೀಸರು ಕಾರ್ತಿಕ್‍ನನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *