ಟಿಟಿಡಿಗೆ 43 ಲಕ್ಷ ರೂ. ಮೌಲ್ಯದ ವಾಹನ ಕೊಡುಗೆ ನೀಡಿದ ಮಾಜಿ ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ತಿರುಮಲ ತಿರುಪತಿ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದ ಅನ್ನದಾಸೋಹಕ್ಕಾಗಿ ಹಣ್ಣು ತರಕಾರಿಗಳನ್ನು ಸಾಗಿಸುವ ಟ್ರಕ್ ಒಂದನ್ನು ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕೊಡುಗೆ ನೀಡಿದ್ದಾರೆ.


ಸುಮಾರು 43 ಲಕ್ಷ ರೂ. ಮೌಲ್ಯದ ಟ್ರಕ್ ವಾಹನವನ್ನು ಖುದ್ದು ಕೂತ್ತೂರು ಮಂಜುನಾಥ್ ತಿರುಪತಿ ತಿರುಮಲಕ್ಕೆ ತೆರಳಿ ಟಿಟಿಡಿ ಆಡಳಿತ ಮಂಡಳಿಗೆ ವಾಹನವನ್ನು ಹಸ್ತಾಂತರ ಮಾಡಿದರು. ಕಳೆದ ಒಂದು ವಾರದ ಹಿಂದೆಯಷ್ಟೇ 10 ಕೋಟಿ ರೂ. ತಾಲೂಕಿನ ದೇವಾಲಯಗಳ ಜೀರ್ಣೋದ್ದಾರ ಹಾಗೂ ಅಭಿವೃದ್ದಿಗಾಗಿ ನೀಡಿದ್ದರು. ಇದನ್ನೂ ಓದಿ: ಜಪಾನ್‌ ಯುವಕರು ಒಮ್ಮೆಯಾದರೂ ಭಾರತಕ್ಕೆ ಭೇಟಿ ನೀಡಬೇಕು: ಮೋದಿ ಆಹ್ವಾನ

ಮುಳಬಾಗಲು ಕ್ಷೇತ್ರದಲ್ಲಿ ಪಕ್ಷತೀತವಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಅಪಾರ ಪ್ರಮಾಣದ ಅಭಿಮಾನಿಗಳ ಬಳಗ ಹೊಂದಿರುವ ಮಂಜುನಾಥ್ ಪಕ್ಷಭೇದ ಮೀರಿ ಅಭಿಮಾನಿ ಬಳಗ ಹೊಂದಿದ್ದಾರೆ. ಈ ಹಿಂದೆ ಬಳ್ಳಾರಿಯ ಜನಾರ್ಧನ ರೆಡ್ಡಿ ಚಿನ್ನದ ಕಿರೀಟ ನೀಡಿದ್ರು, ರಾಜ್ಯದ ಸಾಕಷ್ಟು ಜನ ನಾಯಕರು ತಿರುಪತಿ ತಿರುಮಲಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಸುದ್ದಿಯಾಗಿದ್ರು. ಇದನ್ನೂ ಓದಿ: ರಾಷ್ಟ್ರೀಯತೆ ಪರಿಕಲ್ಪನೆ ಸಂವಿಧಾನದಿಂದ ಬಂದಿಲ್ಲ, ಅದು ಪ್ರಾಚೀನ ಬೇರುಗಳನ್ನು ಹೊಂದಿದೆ: JNU ಕುಲಪತಿ

Comments

Leave a Reply

Your email address will not be published. Required fields are marked *