ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಮಠಾಧೀಶರಿಗೆ ವಿದ್ಯಾರ್ಥಿನಿ ಸವಾಲು

ಕೊಪ್ಪಳ: ಶಾಲೆಯಲ್ಲಿ ಮೊಟ್ಟೆ ನೀಡಲು ಮಠಾಧೀಶರು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕೊಪ್ಪಳದ ವಿದ್ಯಾರ್ಥಿನಿ ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ ಎಂದು ಸವಾಲು ಹಾಕಿದ್ದಾಳೆ.

ಶಾಲೆಯಲ್ಲಿ ಮೊಟ್ಟೆ ನೀಡಲು ಮಠಾಧೀಶರು ವಿರೋಧಿಸಿದ್ದಕ್ಕೆ ಕೊಪ್ಪಳದ ಗಂಗಾವತಿಯ ವಿದ್ಯಾರ್ಥಿನಿ ತಿರುಗಿ ಬಿದ್ದಿದ್ದಾಳೆ. ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ ಎಂದು ಮಠಾಧೀಶರಿಗೆ ಸವಾಲು ಹಾಕಿದ್ದಾಳೆ. ನಾವು ಮೊಟ್ಟೆ ತಿಂದರೆ ಬದುಕುತ್ತೇವೆ. ಇಲ್ಲವಾದರೆ ನಾವು ಸಾಯುತ್ತೇವೆ. ನಾವು ಬದುಕುವುದು ಬೇಕಾ? ನಿಮಗೆ ಮೊಟ್ಟೆ ಕೊಡದಿರುವುದು ಬೇಕಾ? ಎಂದು ಮಠಾಧೀಶರನ್ನು ಪ್ರಶ್ನಿಸಿದ್ದಾಳೆ. ಇದನ್ನೂ ಓದಿ: ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ – ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

ಮಕ್ಕಳು ದೇವರು ಸಮಾನ ಅಂತಾರೆ ಹಾಗಾದರೆ ದೇವರ ಆಸೆ ಏಕೆ ಈಡೇರಿಸಲ್ಲ. ಮಠಕ್ಕೆ ಬಂದು ದಕ್ಷಿಣೆ ಹಾಕಿಲ್ವಾ? ಒಂದಲ್ಲ ಎರಡೆರಡು ಮೊಟ್ಟೆ ತಿಂತೀವಿ. ಮೊಟ್ಟೆಗಾಗಿ ರೋಡಿಗೆ ಬೇಕಾದರೂ ಇಳಿಯುತ್ತೇವೆ. ನಮಗೆ ಯಾರು ಎಲ್ಲ ಎಂದು ತಿಳಿದುಕೊಳ್ಳಬೇಡಿ. ನಮಗೆ ಎಸ್‍ಎಫ್‍ಆರ್ ಸಂಸ್ಥೆ ಇದೆ. ನಮಗೆ ಮೊಟ್ಟೆ ಮತ್ತೆ ಬಾಳೆಹಣ್ಣು ಬೇಕು. ಒಂದಲ್ಲ ಎರಡು ತಿನ್ನುತ್ತೇವೆ. ಅದನ್ನು ಕೇಳಲು ನೀವು ಯಾರು? ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾಳೆ. ಇದನ್ನೂ ಓದಿ: ಮೊಟ್ಟೆ ವಿತರಣೆ ಕೈಬಿಡಿ, ಇಲ್ಲದಿದ್ದರೆ ಸಸ್ಯಾಹಾರಿಗಳಿಗೆ ಪ್ರತ್ಯೇಕ ಶಾಲೆ ತೆರೆಯಿರಿ: ದಯಾನಂದ ಸ್ವಾಮೀಜಿ

ನಾವು ಮೊಟ್ಟೆ ತಿಂದು, ಸ್ನಾನ ಮಾಡಿ ನಿಮ್ಮ ಮಠಕ್ಕೆ ಬಂದಿಲ್ಲವಾ? ಮತ್ತೆ ದಕ್ಷಿಣೆಯನ್ನು ಹಾಕಿಲ್ಲವಾ? ಮತ್ತೆ ಏಕೆ ನೀವು ನಮ್ಮ ದುಡ್ಡಿನಲ್ಲಿ ತಿನ್ನುತ್ತೀರಾ? ಬಿಸಾಕಿ ಆ ದುಡ್ಡು ಅಥವಾ ನಮಗೆ ತಂದು ಕೊಡಿ ಎಂದು ಕಿಡಿಕಾರಿದ್ದಾಳೆ.

ನಿಮಗೆ ಬಡವರ ಕಷ್ಟ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಬಡತನವಿರುವುದರಿಂದ ನಾವು ಸರ್ಕಾರಿ ಶಾಲೆಯಲ್ಲಿ ಓದುತ್ತೇವೆ. ನಿಮ್ಮ ಮಠಕ್ಕೆ ಜಿಲ್ಲೆಯ ಎಲ್ಲ ಮಕ್ಕಳು ಬಂದ್ರೆ ನಿಮ್ಮ ಮಠ ಉಳಿಯುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾಳೆ. ಪ್ರಸ್ತುತ ಈ ವಿದ್ಯಾರ್ಥಿನಿಯ ಹೇಳಿಕೆ ಫುಲ್ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *