ಕೊಪ್ಪಳ | 6 ತಿಂಗಳಿಂದ ಪಡಿತರ ಪಡೆಯದ 5,779 ಬಿಪಿಎಲ್ ಕಾರ್ಡ್‌ ರದ್ದು

ಕೊಪ್ಪಳ: ಪ್ರತಿ ತಿಂಗಳೂ ಪಡಿತರ ಪಡೆಯಿರಿ. ಇಲ್ಲದಿದ್ದರೆ, ರೇಷನ್ ಕಾರ್ಡ್ ರದ್ದಾಗಲಿವೆ ಎಂದು ಪಡಿತರ ಪಡೆಯದ ಕಾರ್ಡ್‌ಗಳನ್ನು ಸರ್ಕಾರ ರದ್ದುಪಡಿಸುತ್ತಿದೆ. ಈಗಾಗಲೇ ಕೊಪ್ಪಳ (Koppal) ಜಿಲ್ಲೆಯಲ್ಲಿ 5,779 ಕಾರ್ಡ್‌ಗಳು ರದ್ದಾಗಿವೆ.

ಆಹಾರ ಮತ್ತು ಸರಬರಾಜು ಇಲಾಖೆ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಎಂದು ಮೂರು ವರ್ಗಗಳಲ್ಲಿ ರೇಷನ್ ಕಾರ್ಡ್ ವಿತರಣೆ ಮಾಡಿದೆ. ಈ ಕಾರ್ಡ್‌ಗಳನ್ನು ಹೊಂದಿದವರು ಪಡಿತರ ಅಂಗಡಿಗೆ ತೆರಳಿ ಪಡಿತರ ಪಡೆಯಬೇಕು. ಆದರೆ ಕೆಲವು ಕಾರ್ಡ್‌ದಾರರು ಪಡಿತರ ಪಡೆಯುತ್ತಿಲ್ಲ. ಇದನ್ನು ಗಮನಿಸಿದ ಸರ್ಕಾರವು ಇಂತಹ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ.ಇದನ್ನೂ ಓದಿ: ಬಿಜೆಪಿ ಮೇಲೆ ಆಪರೇಷನ್ ಕಮಲದ ಆರೋಪ ಮಾಡ್ತಿರೋ ರವಿ ಗಣಿಗ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ರೇಣುಕಾಚಾರ್ಯ ಸವಾಲ್

ಜಿಲ್ಲೆಯಲ್ಲಿಯೂ ಬಿಪಿಎಲ್ ಕಾರ್ಡ್‌ಗಳು (BPL Card) ಎಪಿಎಲ್ ಆಗಿ ಪರಿವರ್ತಿಸಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 923 ಕಾರ್ಡ್‌ಗಳು ಬಿಪಿಎಲ್‌ನಿಂದ ಎಪಿಎಲ್ ಆಗಿವೆ. ಸಾರ್ವಜನಿಕರು ಪಡಿತರ ಅಂಗಡಿಗಳಿಗೆ ಹೋದಾಗಲೇ ಈ ವಿಚಾರ ಗೊತ್ತಾಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕೊಪ್ಪಳ ಜಿಲ್ಲೆಯೊಂದರಲ್ಲಿಯೇ 5,779 ಕಾರ್ಡ್ ರದ್ದಾಗಿದ್ದು, ರಾಜ್ಯಾದ್ಯಂತ ಎಷ್ಟು ಕಾರ್ಡ್‌ಗಳು ರದ್ದಾಗಿರಬಹುದು ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.

ಜಿಲ್ಲೆಯಲ್ಲಿರುವ 9,209 ಅನರ್ಹ ಕಾರ್ಡ್‌ಗಳನ್ನು ರದ್ದು ಮಾಡಲು ಸರ್ಕಾರ ಜಿಲ್ಲಾಡಳಿತಕ್ಕೆ ತಿಳಿಸಿದೆ. ಈ ಕಾರ್ಡ್‌ದಾರರು 1.20 ಲಕ್ಷ ರೂ. ವಾರ್ಷಿಕ ಆದಾಯ ಹೊಂದಿರುವವರು, ಆದಾಯ ತೆರಿಗೆ ಪಾವತಿದಾರರು ಹಾಗೂ ಸರ್ಕಾರಿ ನೌಕರರು ಆಗಿದ್ದಾರೆ. ಈ ಕಾರ್ಡ್‌ಗಳನ್ನು ಪರಿಶೀಲಿಸಲಾಗುತ್ತಿದ್ದು, ಹಂತ-ಹಂತವಾಗಿ ರದ್ದು ಮಾಡುವ ಪ್ರಕ್ರಿಯೆಯಲ್ಲಿ ಇಲಾಖೆ ನಿರತವಾಗಿದೆ.ಇದನ್ನೂ ಓದಿ: ಪ್ರಧಾನಿ ಮೋದಿಗೆ ಗಯಾನಾದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ