ಕೋಮಲ್ ನಟನೆಯ ‘ನಮೋ ಭೂತಾತ್ಮ 2’ ಚಿತ್ರದ ಟೀಸರ್ ರಿಲೀಸ್

ಹಜ ಅಭಿನಯದ ಮೂಲಕ ಜನರ ಮನ ಗೆದ್ದಿರುವ ನಟ ಕೋಮಲ್ (Komal) ಕುಮಾರ್ ನಾಯಕರಾಗಿ ನಟಿಸಿರುವ ‘ನಮೋ ಭೂತಾತ್ಮ 2’ (Namo Bhutatma 2)  ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ನೃತ್ಯ ನಿರ್ದೇಶಕ ಮುರಳಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಟ ಧ್ರುವ ಸರ್ಜಾ ಟೀಸರ್ (Teaser) ಬಿಡುಗಡೆ ಮಾಡಿದರು.

ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಧ್ರುವ ಸರ್ಜಾ (Dhruva Sarja), ನಾನು ಮೊದಲಿನಿಂದಲೂ ಕೋಮಲ್ ಅವರ ಅಭಿಮಾನಿ. ಅವರ ಅಭಿನಯದ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ. ಈ ಚಿತ್ರದ ಬಿಡುಗಡೆಗೂ ಕಾಯುತ್ತಿದ್ದೇನೆ. ಮುರಳಿ (Muruli) ಮಾಸ್ಟರ್ ಸಹ ನನ್ನ ಚಿತ್ರಗಳ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ನಮೋ ಭೂತಾತ್ಮ 2 ಸೂಪರ್ ಹಿಟ್ ಆಗಲಿ ಎಂದು ಹಾರೈಸಿದರು. ಇದನ್ನೂ ಓದಿ:ಕರಾವಳಿ ಬೆಡಗಿ ಕೃತಿ ಶೆಟ್ಟಿಗೆ ಸ್ಟಾರ್ ನಟನ ಪುತ್ರನಿಂದ ಟಾರ್ಚರ್

ನಾನು ನಿರ್ಮಿಸಿ, ನಟಿಸಿದ್ದ, ಮುರಳಿ ಮಾಸ್ಟರ್ ನಿರ್ದೇಶಿಸಿದ್ದ ನಮೋ ಭೂತಾತ್ಮ ಚಿತ್ರದ ಮೊದಲ ಭಾಗ ಬಿಡುಗಡೆಯಾಗಿ ಹತ್ತು ವರ್ಷಗಳಾಗಿದೆ. ಆ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಮುರಳಿ ಮಾಸ್ಟರ್ ಹಾಗೂ ನಾನು ಇನ್ನೆರಡು ಚಿತ್ರಗಳ ಬಗ್ಗೆ ಚರ್ಚೆ ಮಾಡಿದ್ದೆವು. ಆದರೆ ಎಷ್ಟೋ ವರ್ಷಗಳ ಬಳಿಕ ಈ ನಮೋ  ಭೂತಾತ್ಮ 2 ಚಿತ್ರ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಬರುತ್ತಿದೆ‌. ಮೊದಲಭಾಗಕ್ಕೆ ಭಯ ಹುಟ್ಟಿಸುವ ಸನ್ನಿವೇಶಗಳು ಹೆಚ್ಚಾಗಿದ್ದವು. ಆದರೆ ಈ ಚಿತ್ರದಲ್ಲಿ ಕಾಮಿಡಿ ಕೂಡ ಅರ್ಧ ಭಾಗದಷ್ಟಿರುತ್ತದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ಧನ್ಯವಾದ ಎಂದು ನಾಯಕ ಕೋಮಲ್ ಕುಮಾರ್ ತಿಳಿಸಿದರು.

2014ರಲ್ಲಿ ನನಗೆ ಕೋಮಲ್ ಅವರು ನಮೋ ಭೂತಾತ್ಮ ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ್ದರು. ಆನಂತರ ಈಗ ನಮೋ ಭೂತಾತ್ಮ 2 ಚಿತ್ರದಲ್ಲಿ ಅವರ ಜೊತೆ ಮಾಡಿದ್ದೇನೆ. ನನ್ನ ಅಕ್ಕನ ಮಗ ಸಂತೋಷ್ ಶೇಖರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೊರೋನ ಸಮಯದಲ್ಲೇ ಈ ಚಿತ್ರದ ಕಥೆ ಸಿದ್ದ ಮಾಡಿಕೊಂಡಿದ್ದೆ. ಆನಂತರ ಕೋಮಲ್ ಅವರಿಗೆ ನಾನು ಹಾಗೂ ಸಂತೋಷ್ ಹೋಗಿ ಈ ಚಿತ್ರದ ಕಥೆ ಹೇಳಿದ್ದೆವು. ಕೋಮಲ್ ಅವರು ನಟಿಸಲು ಒಪ್ಪಿದರು. ಚಿತ್ರಕ್ಕೆ ನಮೋ ಭೂತಾತ್ಮ 2 ಎಂದು ಹೆಸರಿಟ್ಟೆವು. ನನ್ನ ತಂಡದ ಸದಸ್ಯರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಇಂದು ಟೀಸರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ವಿಶೇಷ ಧನ್ಯವಾದ ಎಂದರು ನಿರ್ದೇಶಕ ಮುರಳಿ. ನಾಯಕಿ ಲೇಖಾ ಚಂದ್ರ, ಚಿತ್ರದಲ್ಲಿ ನಟಿಸಿರುವ ಜಿ.ಜಿ, ಮೋನಿಕಾ, ವರುಣ್ ರಾಜ್ ಹಾಗೂ ಚಿತ್ರದ ನಿರ್ಮಾಪಕ ಸಂತೋಷ್ ಶೇಖರ್ ಚಿತ್ರದ ಕುರಿತು ಮಾತನಾಡಿದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]