ಧನುಷ್ ತಮ್ಮ ಮಗ ಅಂತ ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ: ನಟನಿಗೆ ಮದ್ರಾಸ್ ಕೋರ್ಟ್ ಸಮನ್ಸ್

ಕಾಲಿವುಡ್ ಸ್ಟಾರ್ ನಟ ಧನುಷ್ ಮತ್ತೆ ಸುದ್ದಿಯಲ್ಲಿದ್ದಾರೆ. ನಟನ ತಂದೆ ತಾಯಿ ಯಾರು ಎಂಬ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಧನುಷ್ ನಮ್ಮ ಮಗ ಎಂದು ವೃದ್ಧ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ವಿಚಾರವಾಗಿ, ಮದ್ರಾಸ್ ಹೈಕೋರ್ಟ್ ಧನುಷ್‌ಗೆ ಸಮನ್ಸ್ ನೀಡಿದೆ. ಧನುಷ್ ನಮ್ಮ ಮಗ ಎಂದು ಕತೀರೇಸನ್ ಮತ್ತು ಮೀನಾಕ್ಷಿ ದಂಪತಿ ಹೇಳಿದ್ದಾರೆ. ಕಳೆದ ಆರು ವರ್ಷಗಳ ಹಿಂದೆ ಮದುರೈ ಜಿಲ್ಲೆಯ ಮೆಲೂರ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಜೀವನ ನಿರ್ವಹಣೆಗೆ ಮಗ ಧನುಷ್ ಪ್ರತಿ ತಿಂಗಳು 65 ಸಾವಿರ ಕೊಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಈ ಪ್ರಕರಣ ಕಳೆದ 6 ವರ್ಷಗಳಿಂದ ಸಾಗುತ್ತಿದೆ.

ಕತಿರೇಸನ್ ಮತ್ತು ಮೀನಾಕ್ಷಿ ದಂಪತಿಗೆ ಧನುಷ್ ಮೂರನೇ ಮಗನಾಗಿದ್ದು, ನಟನಾಗುವ ಇಚ್ಛೆಯಿಂದ ಮನೆಯಿಂದ ಪರಾರಿಯಾಗಿದ್ದಾನೆ. ನಾವೇ ಅವನ ನಿಜವಾದ ತಂದೆ ತಾಯಿ. ಇದಕ್ಕೆ ಜನನ ಪ್ರಮಾಣ ಪತ್ರ ಮತ್ತು ಎಸ್‌ಎಸ್‌ಎಲ್‌ಸಿ ಮೆಮೋಗಳನ್ನು ಸಾಕ್ಷಿಯಾಗಿ ನೀಡಿದ್ದಾರೆ. ಇನ್ನು ಈ ಬಗ್ಗೆ ಪಿತೃತ್ವ ಪರೀಕ್ಷೆ ಮಾಡಬೇಕು ಎಂದು ಡಿಮ್ಯಾಂಡ್ ಮಾಡಲಾಗಿತ್ತು. ಆದರೆ ಕೋರ್ಟ್ ಆದೇಶದ ಬಳಿಕ ಇದರಲ್ಲಿ ಸತ್ಯಾಂಶವಿಲ್ಲ ಎಂಬುದು ದೃಢಪಟ್ಟಿತ್ತು. 2020ರಲ್ಲಿ ಈ ಕೇಸ್ ಅನ್ನು ರದ್ದು ಮಾಡಲಾಗಿತ್ತು. ಇದೀಗ ಈ ಆದೇಶವನ್ನು ರದ್ದು ಮಾಡಬೇಕೆಂದು ವೃದ್ಧ ದಂಪತಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಗೋವಾ ಸಿಎಂ ಭೇಟಿಯಾದ ಯಶ್, ರಾಧಿಕಾ ಪಂಡಿತ್

 

View this post on Instagram

 

A post shared by Dhanush (@dhanushkraja)

ಸದ್ಯ ಕೋರ್ಟ್ ಧನುಷ್‌ಗೆ ಸಮನ್ಸ್ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಪೊಲೀಸಲು ಧನುಷ್ ಸಲ್ಲಿಸಿರುವ ಸಾಕ್ಷ್ಯಗಳ ಸೂಕ್ತ ತನಿಖೆ ನಡೆಸಬೇಕೆಂದು ನ್ಯಾಯಾಲಯ ತಿಳಿಸಿದೆ. ಈಗ ಚೆರ್ಚೆಯಾಗುತ್ತಿರುವ ವಿಚಾರ ನಿಜನಾ ಅಥವಾ ಸುಳ್ಳಾ ಎಂಬುದು ತಿಳಿದು ಬಂದಿಲ್ಲ. ಮುಂದಿನ ದಿನಗಳಲ್ಲಿ ಸತ್ಯಾಂಶ ಬೆಳಕಿಗೆ ಬರುತ್ತಾ ಎಂದು ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *