‘ಟೋಬಿ’ ನಟಿಗೆ ಸಿಕ್ತು ಬಿಗ್‌ ಚಾನ್ಸ್‌- ತಮಿಳು ನಟ ಸಿದ್ಧಾರ್ಥ್‌ಗೆ ಚೈತ್ರಾ ಆಚಾರ್‌ ನಾಯಕಿ

ನ್ನಡದ ‘ಟೋಬಿ’ ನಟಿ ಚೈತ್ರಾ ಆಚಾರ್ (Chaithra Achar) ಕಾಲಿವುಡ್‌ಗೆ (Kollywood) ಹಾರಿದ್ದಾರೆ. ತಮಿಳಿನಲ್ಲಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ನಟ ಸಿದ್ಧಾರ್ಥ್‌ಗೆ ನಾಯಕಿಯಾಗಿ ಚೈತ್ರಾ ನಟಿಸುತ್ತಿದ್ದಾರೆ. ಇದನ್ನೂ ಓದಿ:ಕೊರಗಜ್ಜನ ಕೋಲದಲ್ಲಿ ಕತ್ರಿನಾ ಕೈಫ್‌, ಕೆಎಲ್‌ ರಾಹುಲ್‌ ಭಾಗಿ

ಪ್ರತಿಭಾನ್ವಿತ ನಟಿ ಚೈತ್ರಾಗೆ ತಮಿಳಿನಿಂದ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ. ಈಗಾಗಲೇ ಶಶಿಕುಮಾರ್‌ಗೆ ನಾಯಕಿಯಾಗಿ ರಾಜು ಮುರುಗನ್ ನಿರ್ದೇಶನದಲ್ಲಿ ಚೈತ್ರಾ ನಟಿಸುತ್ತಿದ್ದಾರೆ. ಈ ಬೆನ್ನಲ್ಲೇ ಟೋಬಿ ಬೆಡಗಿಗೆ ಬಂಪರ್ ಚಾನ್ಸ್ ಸಿಕ್ಕಿದೆ.

ಶಾಂತಿ ಟಾಕೀಸ್ ನಿರ್ಮಾಣದ, ಶ್ರೀ ಗಣೇಶ್ ನಿರ್ದೇಶದ ಹೊಸ ಸಿನಿಮಾದಲ್ಲಿ ಸಿದ್ಧಾರ್ಥ್‌ಗೆ ಚೈತ್ರಾ ಹೀರೋಯಿನ್ ಆಗಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕನ್ನಡದ ನಟಿ ಕಾಣಿಸಿಕೊಳ್ತಿದ್ದಾರೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಕೂಡ ಶುರುವಾಗಲಿದೆ.

ಸದ್ಯ ಸಿನಿಮಾಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಈ ಚಿತ್ರದಲ್ಲಿ ಸಿದ್ಧಾರ್ಥ್, ಚೈತ್ರಾ ಜೊತೆ ಹಿರಿಯ ನಟ ಶರತ್‌ಕುಮಾರ್ (Sarathkumar), ದೇವಯಾನಿ, ಮಿತಾ ರಘುನಾಥ್ ಸೇರಿದಂತೆ ಅನೇಕರು ನಟಿಸಲಿದ್ದಾರೆ. ಇದನ್ನೂ ಓದಿ:ನಟ ರಕ್ಷಿತ್ ಶೆಟ್ಟಿ ವಿರುದ್ಧ ಎಫ್‌ಐಆರ್

ಇನ್ನೂ ಇದರ ಜೊತೆ ಶಿವಣ್ಣ, ಡಾಲಿ ನಟನೆಯ ‘ಉತ್ತರಾಕಾಂಡ’ ಸಿನಿಮಾದಲ್ಲಿ ಚೈತ್ರಾ ನಟಿಸಿದ್ದಾರೆ. ಈ ಸಿನಿಮಾದಲ್ಲಿಯೂ ನಟಿಗೆ ಉತ್ತಮ ಪಾತ್ರ ಸಿಕ್ಕಿದೆ. ಒಟ್ನಲ್ಲಿ ಪರಭಾಷೆಯಲ್ಲಿ ನಟಿಗೆ ಗೋಲ್ಡನ್‌ ಚಾನ್ಸ್‌ ಸಿಕ್ಕಿರೋದಕ್ಕೆ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.