ಸಿದ್ದುಗೆ ಕೋಲಾರ ಟಿಕೆಟ್‌ ಮಿಸ್‌ – ವರುಣಾ ಒಂದೇ ಫಿಕ್ಸ್‌

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ಕಾಂಗ್ರೆಸ್‌ (Congress) ಅಭ್ಯರ್ಥಿಗಳನ್ನು ಕಣಕ್ಕಿಳಿಸುವ 3ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸಿದ್ದರಾಮಯ್ಯಗೆ (Siddaramaiah) ಕೋಲಾರ (Kolara) ಟಿಕೆಟ್‌ ಕೈತಪ್ಪಿದೆ. ವರುಣಾ (Varuna) ಜೊತೆಗೆ ಕೋಲಾರದಿಂದಲೂ ಸ್ಪರ್ಧಾಕಾಂಕ್ಷಿಯಾಗಿದ್ದ ಸಿದ್ದು ಆಸೆಗೆ ಹೈಕಮಾಂಡ್‌ ತಣ್ಣೀರೆರಚಿದೆ.

ಕೋಲಾರದಲ್ಲಿ ಸಿದ್ದರಾಮಯ್ಯ ಬದಲಿಗೆ ಕೊತ್ತೂರ್‌ ಜಿ. ಮಂಜುನಾಥ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ವರುಣಾದಿಂದಲೇ ಸ್ಪರ್ಧಿಸಿ ಎಂದು ಹೈಕಮಾಂಡ್‌ ಸ್ಪಷ್ಟ ಸಂದೇಶ ಕೊಟ್ಟಿದೆ. ಇದನ್ನೂ ಓದಿ: ಕಾಂಗ್ರೆಸ್‌ 3ನೇ ಪಟ್ಟಿ ರಿಲೀಸ್‌ – ಸಿದ್ದರಾಮಯ್ಯ ಕೋಲಾರದಿಂದ ಔಟ್‌, ಉಮಾಶ್ರೀಗೂ ಕೊಕ್‌

ಸಿದ್ದರಾಮಯ್ಯ ವರುಣಾ ಹಾಗೂ ಕೋಲಾರದಿಂದ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ಕೋಲಾರದಲ್ಲಿ ಸಮಾವೇಶ ಕೂಡ ನಡೆಸಿ ಶಕ್ತಿ ಪ್ರದರ್ಶಿಸಿದ್ದರು. ಕೋಲಾರದಿಂದ ಸ್ಪರ್ಧಿಸಲು ಸಿದ್ಧರಿದ್ದರೂ ಹೈಕಮಾಂಡ್‌ ನಾಯಕರು ಮಾತ್ರ ರೆಡ್‌ ಸಿಗ್ನಲ್‌ ತೋರಿಸಿದ್ದರು. ನೀವು ವರುಣಾದಿಂದಲೇ ಸ್ಪರ್ಧಿಸಿ ಎಂದು ಸೂಚನೆ ಕೊಟ್ಟಿದ್ದರು.

ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಬ್ಯಾಲೆನ್ಸ್‌ ಮಾಡಲು ತುಂಬಾ ಕಷ್ಟ ಆಗುತ್ತದೆ. ವರುಣಾವನ್ನು ಮಾತ್ರ ಕೇಂದ್ರೀಕರಿಸಿದರೆ ಗೆಲುವು ಸುಲಭವಾಗಬಹುದು ಎಂದು ಹೈಕಮಾಂಡ್‌ ಸಲಹೆ ಕೊಟ್ಟಿತ್ತು. ಇದನ್ನೂ ಓದಿ: ವರುಣಾದಲ್ಲಿ ಅಪ್ಪ-ಮಗನ ದರ್ಬಾರ್‌ಗೆ ಅಂತ್ಯ ಕಾಲ ಬಂದಿದೆ: ಪ್ರತಾಪ್ ಸಿಂಹ