ಸ್ವಚ್ಛ ನಗರಿ ಎಂದು ಕರೆಸಿಕೊಂಡ ಕೋಲಾರಕ್ಕೆ ಈಗ ಕಸ ವಿಲೇವಾರಿ ಸಮಸ್ಯೆ!

ಕೋಲಾರ: ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ ಘೋಷಣೆ ಮಾಡುವುದಕ್ಕೂ ಮೊದಲೇ ಕೋಲಾರ ಸ್ವಚ್ಛ ನಗರಿ ಎಂದು ಹೆಸರು ಮಾಡಿತ್ತು.

ಮನೆ ಮನೆಯಿಂದ ಹಸಿ ಮತ್ತು ಒಣ ಕಸ ಸಂಗ್ರಹಿಸಿ ಎಲ್ಲಾ ಜಿಲ್ಲೆಗಳಿಗೂ ಬಂಗಾರದ ನಾಡು ಮಾದರಿಯಾಗಿತ್ತು. ಆದರೆ ಕೋಲಾರ ನಗರಕ್ಕೆ ಈಗ ಕಸ ವಿಲೇವಾರಿ ಸಮಸ್ಯೆಯೇ ಶಾಪವಾಗಿ ಪರಿಣಮಿಸಿದೆ. ರಾಜ್ಯದ ಶೇ.98ರಷ್ಟು ನಗರಸಭೆ ಮತ್ತು ಪುರಸಭೆಗಳು ಸರ್ಕಾರದ ಅನುದಾನದಿಂದ ಘನತ್ಯಾಜ್ಯ ಘಟಕಗಳನ್ನು ಸ್ಥಾಪಿಸಿವೆ.

ಕೋಲಾರ ಜಿಲ್ಲಾ ಕೇಂದ್ರದಲ್ಲಿರುವ ನಗರಸಭೆಗೆ ಇನ್ನೂ ಜಮೀನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೋಲಾರ ನಗರದಲ್ಲಿ ಜನಸಂಖ್ಯೆ 2 ಲಕ್ಷ ದಾಟಿದೆ. 35 ವಾರ್ಡ್‍ಗಳಲ್ಲಿ ದಿನಕ್ಕೆ 64 ಟನ್ ಕಸ ಸಂಗ್ರಹಣೆಯಾಗುತ್ತಿದೆ. ಹಬ್ಬ ಹರಿದಿನಗಳಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ಕನಿಷ್ಟ 15 ರಿಂದ 20 ಟನ್ ನಷ್ಟು ಕಸ ಬೀಳುತ್ತದೆ.

ನಗರದಲ್ಲಿ ಕಸ ವಿಲೇವಾರಿಗೆ ಜಾಗವಿಲ್ಲದೆ ರಸ್ತೆಗಳಲ್ಲಿ, ಹೊರವಲಯದ ಪಾಳು ಬಾವಿಗಳಲ್ಲಿ ಕಸ ಹಾಕುವ ಪರಿಸ್ಥಿತಿ ಎದುರಾಗಿದೆ. ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಮಾತ್ರ ಶೀಘ್ರವೇ ಕ್ರಮ ಕೈಗೊಳುತ್ತೀವಿ ಎಂದು ಸಾಗ ಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *