– ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡು
ಕೋಲಾರ: ಆನೆ ಹಿಂಡಿನಲ್ಲಿದ್ದ ಪುಟ್ಟ ಆನೆ ಮರಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರಂನಿಂದ ಬಲಮಂದೆಗೆ ತೆರಳುವ ಮಾರ್ಗ ಮಧ್ಯೆ ರಸ್ತೆ ಬದಿಯಲ್ಲಿ ಆನೆ ಮರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದೆ.

ಕಳೆದ ರಾತ್ರಿ ತಮಿಳುನಾಡಿನ ಕೃಷ್ಣಗಿರಿಯಿಂದ ಜಿಲ್ಲೆಯ ಗಡಿಗೆ ಆಗಮಿಸಿರುವ 20 ಆನೆಗಳ ಹಿಂಡಿನಲ್ಲಿದ್ದ ಮರಿ ಇದಾಗಿದ್ದು, ರಸ್ತೆ ದಾಟುವ ವೇಳೆ ಕಾಲ್ತುಳಿತದಿಂದ ಮೃತಪಟ್ಟಿದೆಯಾ ಅಥವಾ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿರಬಹುದಾ ಎಂಬ ಅನುಮಾನ ಎದ್ದಿದೆ. ಅಲ್ಲದೆ ಪುಟ್ಟ ಮರಿಯಾದ್ದರಿಂದ ಪ್ರಸವದ ವೇಳೆ ಸಾವನ್ನಪ್ಪಿರುವ ಶಂಕೆಯೂ ಎದುರಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಕಾಮಸಮುದ್ರ ಅರಣ್ಯ ಪ್ರದೇಶದಲ್ಲಿ 20ಕ್ಕೂ ಹೆಚ್ಚು ಆನೆಗಳ ಹಿಂಡು ಬೀಡುಬಿಟ್ಟಿದೆ.

Leave a Reply