ಕೊನೆಗೂ ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ಶ್ರೀದೇವಿ ಪುತ್ರಿ ಜಾನ್ವಿ

ಬಾಲಿವುಡ್ ನಟಿ ಜಾನ್ವಿ ಕಪೂರ್ ಸಿನಿಮಾಗಿಂತ ಹೆಚ್ಚೆಚ್ಚು ತಮ್ಮ ಖಾಸಗಿ ವಿಚಾರವಾಗಿಯೇ ಚಾಲ್ತಿಯಲ್ಲಿರುತ್ತಾರೆ. ಇದೀಗ ‘ಕಾಫಿ ವಿತ್ ಕರಣ್’ ಸೀಸನ್ 8ರಲ್ಲಿ (Koffe With Karan 8) ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನಿರ್ಮಾಪಕನ ಜೊತೆ ಮದುವೆಗೆ ಸಜ್ಜಾದ ಕನ್ನಡದ ‘ಗಿಲ್ಲಿ’ ನಟಿ ರಾಕುಲ್

ಸೆನ್ಸೇಷನಲ್ ಶೋ ಅಂದರೆ ಅದು ಕಾಫಿ ವಿತ್ ಕರಣ್ ಕಾರ್ಯಕ್ರಮ. ಏನಾದರೂ ವಿವಾದಗಳ ಅಥವಾ ಸ್ಟಾರ್‌ಗಳ ಸೀಕ್ರೆಟ್ ರಿವೀಲ್ ಆಗುವ ಮೂಲಕ ಶೋ ಅಭಿಮಾನಿಗಳ ಗಮನ ಸೆಳೆದಿದೆ. ಹೀಗಿರುವಾಗ ಕರಣ್ ಶೋಗೆ ಶ್ರೀದೇವಿ ಪುತ್ರಿಯರು ಜಾನ್ವಿ-ಖುಷಿ ಕಪೂರ್ ಎಂಟ್ರಿ ಕೊಟ್ಟಿದ್ದಾರೆ. ಇದೀಗ ತಮ್ಮ ರಿಯಲ್ ಲೈಫ್ ಲವ್ ಬಗ್ಗೆ ಜಾನ್ವಿ (Janhvi Kapoor) ರಿವೀಲ್ ಮಾಡಿದ್ದಾರೆ.

ಜಾನ್ವಿ ಕಪೂರ್-ಶಿಖರ್ ಪಹಾಡಿಯಾ ಡೇಟಿಂಗ್ ದೃಢವಾಗಿದೆ. ಕಾರ್ಯಕ್ರಮದಲ್ಲಿ ನೀವು ಹೆಚ್ಚಾಗಿ ಫೋನಿನಲ್ಲಿ ಮಾತನಾಡೋದು ಯಾರ ಜೊತೆ, ನಿಮಗೆ ಯಾರು ತುಂಬಾ ಕ್ಲೋಸ್ ಎಂದು ಕರಣ್ ಜೋಹರ್ (Karan Johar) ಪ್ರಶ್ನೆ ಕೇಳಿದ್ದಾರೆ.

ಅದಕ್ಕೆ ಜಾನ್ವಿ, ಮೊದಲಿಗೆ ಅಪ್ಪ, ತಂಗಿ ಖುಷಿ, ಶಿಖು ಎಂದು ಹೇಳಿದ್ದರು. ಶಿಖು ಎಂದು ಶಿಖರ್ ನಿಕ್ ನೇಮ್ ಅನ್ನು ಮಿಸ್ ಆಗಿ ಹೇಳಿದ್ದಕ್ಕೆ ಸ್ವತಃ ಜಾನ್ವಿಯೇ ಶಾಕ್ ಆದರು.

ನಾನು ಶಿಖರ್ ಹೆಸರನ್ನು ತಪ್ಪಾಗಿ ತೆಗೆದುಕೊಂಡೆ ಎಂದು ಜಾನ್ವಿ ನಕ್ಕರು. ಶಿಖರ್ ಹೆಸರನ್ನು ಹೇಳುತ್ತಿದ್ದಂತೆ ಖುಷಿ ಮತ್ತು ಕರಣ್ ಜೋಹರ್ ಜೋರಾಗಿ ನಕ್ಕರು. ಆಗ ಜಾನ್ವಿ ಕೂಡ ನಾಚಿಕೆಯಿಂದ ತಲೆತಗ್ಗಿಸಿದ್ದಾರೆ. ಈ ಮೂಲಕ ಶಿಖರ್ ಜೊತೆಗಿನ ಡೇಟಿಂಗ್ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ.