ಯಾದಗಿರಿ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಕೊಡಿಹಳ್ಳಿ ಮಠದ ಶ್ರೀ ಶಿವಾನಂದ ರಾಜೇಂದ್ರ ಸ್ವಾಮೀಜಿಗಳು ಲೋಕಸಭಾ ಚುನಾವಣೆ ಕುರಿತು ಭವಿಷ್ಯ ನುಡಿದಿದ್ದು, ಮತ್ತೆ ಪ್ರಧಾನಿ ಮೋದಿ ಅವರೇ ಪ್ರಧಾನಿ ಅಗುತ್ತಾರೆಂದು ಭವಿಷ್ಯ ಹೇಳಿದ್ದಾರೆ.
ಯಾದಗಿರಿಯ ಅಬ್ಬೆ ತುಮಕೂರುನ ವಿಶ್ವರಾಧ್ಯ ಮಠದಲ್ಲಿ ರಾಜಕೀಯ ಭವಿಷ್ಯ ನುಡಿದ ಶ್ರೀಗಳು, ಕುರುವಂಶ ದೊರೆಗಳು ಬಡಿದಾಡ್ಯಾರು. ಪಾಂಡವರು ಕೌರವರು ಬಡಿದಾಡ್ಯಾರು. ರತ್ನ ಖಚಿತ ಸುವರ್ಣ ಕಿರೀಟ ಸ್ಥಿರವಾದಿತು. ಬೇವು ಬೆಲ್ಲವಾದಿತು ಎಂದು ರಾಜಕೀಯ ಭವಿಷ್ಯ ನುಡಿದ್ದಾರೆ.

ಕೇಂದ್ರದಲ್ಲಿ ಅಧಿಕಾರ ರಚನೆ ಮಾಡಲು ಶತ್ರುಗಳಂತೆಯಿದ್ದ ಪಕ್ಷಗಳು ಅಂದರೆ ಸಮಾಜವಾದಿ ಬಿಎಸ್‍ಪಿ ಒಂದಾಗಿವೆ. ಘಟಬಂಧನ ರಚನೆ ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಹವಣಿಸುತ್ತಿವೆ. ಅದರೆ ಮೋದಿಗೆ ಈಗ ಸ್ಥಿರವಾದ ರತ್ನ ಖಚಿತ ಕೀರಿಟ ಈಗಿನ ಚುನಾವಣೆ ನಂತರವೂ ಖಚಿತವಾಗಲಿದೆ. ಬೇವು ಬೆಲ್ಲವಾದಿತು ಅಂದರೆ ಸೈನಿಕರ ಮೇಲಿನ ದಾಳಿ ಪ್ರಧಾನಿ ಮೋದಿ ಪಾಲಿಗೆ ಕಹಿಯ ಬದಲು ಸಿಹಿಯಾಗಲಿದೆ ಎಂದು ಮಠದವರು ವಿಶ್ಲೇಷಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply