ಮತ್ತೆ ಕೋವಿಡ್ ಕಾಟ ಕೊಡಲಿದೆ, ಕೊರೊನಾ ಹೋಗುವಾಗ ಹೆಚ್ಚು ತೊಂದರೆ ಕೊಡುತ್ತೆ: ಕೋಡಿ ಶ್ರೀ ಭವಿಷ್ಯ

ಬಳ್ಳಾರಿ: ಮತ್ತೆ ಕೊರೊನಾ ಕಾಟ ಕೊಡಲಿದೆ. ಕೊರೊನಾ ಹೋಗುವಾಗ ಹೆಚ್ಚು ಕಾಟ ಕೊಡಲಿದೆ ಎಂದು ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಗಣಿನಾಡು ಬಳ್ಳಾರಿಗೆ ಇಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಆಗಮಿಸಿದ್ದರು. ಬಳ್ಳಾರಿಯ ಕಾಂಗ್ರೆಸ್ ಮುಖಂಡ ಸುನೀಲ್ ರಾವೂರ್ ಅವರ ಮನೆಗೆ ಆಗಮಿಸಿ, ಭಕ್ತಾದಿಗಳಿಗೆ ಆಶೀರ್ವಾದ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಕೊರೊನಾ ಕುರಿತು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ರಾಯಚೂರಿನ ನೀರಿನ ಟ್ಯಾಂಕ್ 25 ವರ್ಷಗಳಿಂದ ಸ್ವಚ್ಛತೆಯನ್ನೇ ಕಂಡಿಲ್ಲ!

ಕೊರೊನಾ ಒಂದೂವರೆ ವರ್ಷದಲ್ಲಿ ಹೋಗುತ್ತೆ. ಆದರೆ ಹೋಗುವಾಗ ತುಂಬಾ ಕಷ್ಟ ಕೊಟ್ಟು ಹೋಗುತ್ತೆ. ಜಗತ್ತಿನಾದ್ಯಂತ ಕುಡಿಯೋಕೆ ನೀರಿಲ್ಲದ ಹಾಗೆ ಆಗುತ್ತೆ. ಅಷ್ಟೊಂದು ನೋವನ್ನು ಕೊಡುತ್ತೆ ಎಂದು ಶ್ರೀಗಳು ತಿಳಿಸಿದ್ದಾರೆ.

ಮೂರು ತಿಂಗಳ ಹಿಂದೆ ಹೇಳಿದ್ದೆ, ಮತ್ತೆ ಕೋವಿಡ್ ಬರುತ್ತೆ ಅಂತಾ. ಈಗ ಮತ್ತೆ ಕೋವಿಡ್ ಸೋಂಕು ಬಂದಿದೆ‌. ಕೋವಿಡ್‌ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ. ಒಂದೂವರೆ ವರ್ಷದಲ್ಲಿ ಸಂಪೂರ್ಣವಾಗಿ ಜಗತ್ತಿನಾದ್ಯಂತ ಕೋವಿಡ್ ಬಿಡುಗಡೆಯಾಗುತ್ತೆ. ಕೋವಿಡ್ ವಿಶೇಷವೇನೆಂದರೆ, ಮನುಷ್ಯ ಕಷ್ಟ ಬಂದಾಗ ದೇವರು, ಧರ್ಮ ಅಂತಾನೆ ಮತ್ತು ಪ್ರಾರ್ಥನೆ‌ ಮಾಡ್ತಾನೆ. ಕೋವಿಡ್ ನೇರವಾಗಿ ಬಂದು ದೇವರನ್ನೇ ಹಿಡಿದುಕೊಂಡು, ದೇವಸ್ಥಾನಗಳ ಬಾಗಿಲು ಹಾಕಿಸಿತು. ಆಮೇಲೆ ಜನರ ಮೇಲೆ ಬಂತು, ನೀರಿನ ಮೇಲೆ, ಭೂಮಿ ಮೇಲೆ ಬಂತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್ಲ ಶಾಸಕರಿಗೆ 50 ಲಕ್ಷ, ಅಡ್ಡ ಮತಕ್ಕೆ ಕಾರಣವೇನು? – ಹಳೇ ಕಥೆ ಬಿಚ್ಚಿಟ್ಟ ಶ್ರೀನಿವಾಸ್ ಗೌಡ

Comments

Leave a Reply

Your email address will not be published. Required fields are marked *