ಬಾಲಕನ ಕೆನ್ನೆಯ ಮೇಲೆ ಮೂಡಿದೆ ಕರ್ನಾಟಕ ಭೂಪಟದ ಮಚ್ಚೆ

ಕೊಡಗು: ಬಾಲಕನ ಕೆನ್ನೆಯ ಮೇಲೆ ಕರ್ನಾಟಕ ಭೂಪಟದ ಮಚ್ಚೆ ಮೂಡಿದೆ. ಬಾಲಕನ ಕೆನ್ನೆಯ ಮೇಲೆ ಕರ್ನಾಟಕದ ಆಕೃತಿ ಕಂಡ ಜಿಲ್ಲೆಯ ಜನ ಹಾಗೂ ಸ್ನೇಹಿತರು ಆಶ್ಚರ್ಯಚಕಿತರಾಗಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಗುಮ್ಮನ ಕೊಲ್ಲಿಯ ನಿವಾಸಿ ದೇವರಾಜು ಹಾಗೂ ಪವಿತ್ರ ದಂಪತಿಯ ಪುತ್ರನ ಕೆನ್ನೆಯ ಮೇಲೆ ನಕ್ಷೆ ಮೂಡಿದೆ. ನಾಲ್ಕನೇ ತರಗತಿಯಲ್ಲಿರುವ ಓದುತ್ತಿರುವ ಶಶಾಂಕನಿಗೆ ಹುಟ್ಟಿದಾಗಿನಿಂದಲೇ ತನ್ನ ಎಡಬದಿಯ ಕೆನ್ನೆಯ ಮೇಲೆ ಕರ್ನಾಟಕದ ಆಕೃತಿಯ ವಿಸ್ಮಯಕಾರಿ ಮಚ್ಚೆ ಮೂಡಿ ಬರುತ್ತಿದೆ.

ದೇವರಾಜು ಪವಿತ್ರ ದಂಪತಿಯ ಪುತ್ರ ಶಶಾಂಕನಿಗೆ ಹುಟ್ಟಿದಾಗನಿಂದಲೂ ಮುಖದ ಮೇಲೆ ಮಚ್ಚೆ ಇತ್ತು. ಅದು ನಂತರ ಬಾಲಕ ಬೆಳೆಯುತ್ತಾ ಕರ್ನಾಟಕದ ಭೂಪಟವು ಹೋಲುವಂತೆ ಕಾಣಿಸುತ್ತಿದೆ. ಪ್ರತಿನಿತ್ಯ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿ ಆ ಮುಖದಲ್ಲಿ ಕರ್ನಾಟಕದ ಭೂಪಟ ವನ್ನು ಕಂಡು ಖುಷಿ ಪಡುವ ಶಶಾಂಕನಿಗೆ ಶಾಲೆಯ ಗೆಳೆಯರು ಹಾಗೂ ಶಿಕ್ಷಕರು ಸಂತೋಷ ವ್ಯಕ್ತಪಡಿಸುತ್ತಾರೆ.

Comments

Leave a Reply

Your email address will not be published. Required fields are marked *