ರಾಹುಲ್‍ಗೆ ಮಹಿಳೆಯರೆಂದರೆ ಅಪಾರ ಗೌರವವಿದೆ: ಪ್ರೀತಿ ಜಿಂಟಾ

ನವದೆಹಲಿ: ಕೆಎಲ್ ರಾಹುಲ್ ಮಹಿಳೆಯರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದಾರೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ, ನಟಿ ಪ್ರೀತಿ ಜಿಂಟಾ ಹೇಳಿದ್ದಾರೆ.

ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಕೆಎಲ್ ರಾಹುಲ್ ಹಾಗೂ ಪಾಂಡ್ಯ ಹಾಡಿದ ವಿವಾದಾತ್ಮಾಕ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಉತ್ತಮ ವ್ಯಕ್ತಿತ್ವವನ್ನು ಹೊಂದಿರುವ ಆಟಗಾರ. ಆದರೆ ಟಿವಿ ಶೋ ವಿವಾದ ಎಂಬುವುದು ಮುಗಿದ ಭಾಗವಾಗಿದೆ. ಆದರೆ ಇಂತಹ ಘಟನೆಗಳು ಜೀವನದಲ್ಲಿ ಸಾಕಷ್ಟು ಸಂಗತಿಗಳನ್ನು ಕಲಿಸುತ್ತವೆ ಎಂದಿದ್ದಾರೆ.

ಇದೇ ವೇಳೆ ತಂಡದ ಒಡತಿಯಾಗಿ ಆರ್ಥಿಕತೆ ಕುರಿತು ಉತ್ತರಿಸಿದ ಜಿಂಟಾ, ಈಗಾಗಲೇ ನಾವು ಹೂಡಿಕೆ ಮಾಡಿರುವ ಹಣ ವಾಪಸ್ ಆಗಿದ್ದು, ಟೈಟಲ್ ಗೆಲುವು ಪಡೆಯುವುದು ಮಾತ್ರ ನಮ್ಮ ಗುರಿಯಾಗಿದೆ. ಟೂರ್ನಿಯಲ್ಲಿ ರಾಹುಲ್ ಫಾರ್ಮ್ ಗೆ ಮರಳಿರುವುದು ನಮಗೆ ಮತ್ತಷ್ಟು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

ಟೂರ್ನಿಯಲ್ಲಿ ಆರ್ ಅಶ್ವಿನ್ ನಾಯಕತ್ವದಲ್ಲಿ ಕಣಕ್ಕೆ ಇಳಿದಿರುವ ಪಂಜಾಬ್ ಕ್ರಿಕೆಟ್ ತಂಡ ಇದುವರೆಗೂ ಆಡಿರುವ 4 ಪಂದ್ಯಗಳಲ್ಲಿ 3 ರಲ್ಲಿ ಗೆಲುವು ಪಡೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ. ಇಷ್ಟೇ ಪಂದ್ಯಗಳಲ್ಲಿ ಗೆಲುವು ಪಡೆದಿರುವ ಹೈದರಾಬಾದ್ ಹಾಗೂ ಕೆಕೆಆರ್ ತಂಡದ ಮೊದಲ ಎರಡು ಸ್ಥಾನಗಳಲ್ಲಿವೆ.

Comments

Leave a Reply

Your email address will not be published. Required fields are marked *