ಕಮ್ ಬ್ಯಾಕ್ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ ಕೆಎಲ್ ರಾಹುಲ್

ವಿಶಾಖಪಟ್ಟಣ: ಕಾಫಿ ವಿತ್ ಕರಣ್ ಶೋ ವಿವಾದ ಬಳಿಕ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ್ದ ಕೆಎಲ್ ರಾಹುಲ್ ಆಸೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಕಮ್ ಬ್ಯಾಕ್ ಮಾಡಿದ್ದಾರೆ.

24 ವರ್ಷದ ಕೆಎಲ್ ರಾಹುಲ್ ಕಾಫಿ ವಿತ್ ಕರಣ್ ಶೋ ವಿವಾದ ಪರಿಣಾಮ ಆಸೀಸ್ ಟೂರ್ನಿಯಿಂದ ಹೊರ ನಡೆದಿದ್ದರು. ಆ ಬಳಿಕ ಅವರ ಮೇಲೆ ಬಿಸಿಸಿಐ ವಿಧಿಸಿದ್ದ ಬ್ಯಾನ್ ತೆರವು ಪಡೆದಿದ್ದರೂ ಕಳಪೆ ಫಾರ್ಮ್ ಕಾರಣ ನ್ಯೂಜಿಲೆಂಡ್ ಪ್ರವಾಸದಲ್ಲಿ ಅವಕಾಶ ಪಡೆದಿರಲಿಲ್ಲ.

ಈ ನಡುವೆ ಕನ್ನಡಿಗ ಟೀಂ ಇಂಡಿಯಾ ಎ ತಂಡದ ಕೋಚ್ ರಾಹುಲ್ ಅವರ ಗರಡಿಗೆ ಸೇರಿದ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಇದನ್ನು ಪರಿಗಣಿಸಿದ ಬಿಸಿಸಿಐ ಆಯ್ಕೆ ಸಮಿತಿ ಕೆಎಲ್ ರಾಹುಲ್ ಅವರಿಗೆ ಆಸೀಸ್ ಟೂರ್ನಿಗೆ ಅವಕಾಶ ನೀಡಿತ್ತು.

ವಿಶ್ವಕಪ್ ದೃಷ್ಠಿಯಿಂದ ಟೀಂ ಇಂಡಿಯಾಗೆ 3ನೇ ಓಪನರ್ ಆಟಗಾರರ ಅಗತ್ಯವಿದ್ದ ಕಾರಣ ರಾಹುಲ್ ಅವರಿಗೆ ಅವಕಾಶ ನೀಡಲಿದೆ ಎಂದು ಕೂಡ ಬಿಸಿಸಿಐ ಸಮರ್ಥನೆ ನೀಡಿತ್ತು. ಸದ್ಯ ಆಯ್ಕೆ ಸಮಿತಿಯ ತೀರ್ಮಾನವನ್ನು ಗಟ್ಟಿಗೊಳಿಸುವಂತೆ ಬ್ಯಾಟ್ ಬೀಸಿದ ರಾಹುಲ್ ಕೇವಲ 36 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಿಡಿಸಿ 50 ರನ್ ಗಳಿಸಿ ನಿರ್ಗಮಿಸಿದ್ದಾರೆ.

ಸದ್ಯ ರಾಹುಲ್ ಆಸೀಸ್ ವಿರುದ್ಧದ ಟಿ20 ಮತ್ತು ಏಕದಿನ ಕ್ರಿಕೆಟ್ ಪಂದ್ಯಗಳಿಗೆ ಆಯ್ಕೆ ಆಗಿದ್ದು, ಉತ್ತಮ ಫಾರ್ಮ್ ಮುಂದುವರಿಸಿದರೆ ವಿಶ್ವಕಪ್ 15 ಆಟಗಾರರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುಲು ಸಾಧ್ಯವಾಗುತ್ತದೆ. ಇಂಗ್ಲೆಂಡ್‍ನಲ್ಲಿ ನಡೆಯುಲ್ಲಿರುವ ವಿಶ್ವಕಪ್ ಮುನ್ನ ಭಾರತ ಅಂತಿಮ ಟೂರ್ನಿ ಇದಾಗಿದೆ.

ರಿಷಬ್ ರನೌಟ್: ಪಂದ್ಯದಲ್ಲಿ ರಾಹುಲ್ ಹಾಗೂ ರಿಷಬ್ ಪಂತ್ ನಡುವೆ ಉಂಟಾದ ಗೊಂದಲದಿಂದಾಗಿ ರಿಷಬ್ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಘಟನೆ ನಡೆಯಿತು. 10ನೇ ಅಂತಿಮ ಎಸೆತದಲ್ಲಿ ಘಟನೆ ನಡೆದಿದ್ದು, ಉತ್ತಮ ಫಿಲ್ಡಿಂಗ್ ಮಾಡಿದ ಮಾಡಿದ ಜೇಸನ್ ಬೆಹ್ರೆಂಡಾರ್ಫ್ ರನೌಟ್ ಮಾಡಿದರು. ಅಂತಿಮವಾಗಿ ಟೀಂ ಇಂಡಿಯಾ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿತು. ಭಾರತ ಪರ ರಾಹುಲ್ 50, ಕೊಹ್ಲಿ 24, ಧೋನಿ ಔಟಾಗದೆ 29 ರನ್ ಗಳಿಸಿದ್ದು, ಬೇರಾವುದೇ ಆಟಗಾರ ಕೂಡ ಎರಡಂಕ್ಕಿ ಮೊತ್ತವನ್ನು ದಾಟಲಿಲ್ಲ.

https://twitter.com/shaktikapoor143/status/1099677114041884678?

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *