ಮುಂಬೈ: ಟೀಂ ಇಂಡಿಯಾದ (Team India) ಆರಂಭಿಕ ಅಟಗಾರ ಕನ್ನಡಿಗ ಕೆ.ಎಲ್ ರಾಹುಲ್ (K.L Rahul) ನಿನ್ನೆ ನಡೆದ ಆಫ್ರಿಕಾ (South Africa) ವಿರುದ್ಧದ ಮೊದಲ ಟಿ20 (T20) ಪಂದ್ಯದಲ್ಲಿ ಅರ್ಧಶತಕ (Fifty) ಸಿಡಿಸಿ ನೂತನ ದಾಖಲೆ ಬರೆದಿದ್ದಾರೆ.

ತಿರುವನಂತಪುರಂನಲ್ಲಿ ನಡೆದ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಫ್ರಿಕಾ ನೀಡಿದ ಸಣ್ಣಮೊತ್ತವನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಕೆ.ಎಲ್ ರಾಹುಲ್ ಅಜೇಯ ಅರ್ಧಶತಕ 51 ರನ್ (56 ಎಸೆತ, 2 ಬೌಂಡರಿ, 4 ಸಿಕ್ಸ್) ಸಿಡಿಸಿ ತಂಡದ ಜಯಕ್ಕೆ ನೆರವಾದರು. ಈ ಅರ್ಧಶತಕದೊಂದಿಗೆ ರಾಹುಲ್ ಟಿ20 ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಆಫ್ರಿಕಾಗೆ ಆಘಾತ ನೀಡಿದ ಅರ್ಶ್‌ದೀಪ್, ಚಹಾರ್, ಶೈನ್ ಆದ ಸೂರ್ಯ, ರಾಹುಲ್- ಭಾರತಕ್ಕೆ 8 ವಿಕೆಟ್‌ಗಳ ಜಯ

ಟಿ20 ಕ್ರಿಕೆಟ್‍ನಲ್ಲಿ 11 ದೇಶಗಳ ವಿರುದ್ಧ ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಯನ್ನು ರಾಹುಲ್ ಬರೆದರು. ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಇಂಗ್ಲೆಂಡ್, ಅಫ್ಘಾನಿಸ್ತಾನ, ಬಾಂಗ್ಲದೇಶ, ಐರ್ಲೆಂಡ್, ದಕ್ಷಿಣ ಆಫ್ರಿಕಾ, ನಮೀಬಿಯಾ, ಸ್ಕಾಟ್‍ಲೆಂಡ್ ವಿರುದ್ಧ ರಾಹುಲ್ ಟಿ20 ಕ್ರಿಕೆಟ್‍ನಲ್ಲಿ ಅರ್ಧಶತಕ ಚಚ್ಚಿದ್ದಾರೆ. ಇದನ್ನೂ ಓದಿ: ತನ್ನದೇ ದೇಶದ ಧ್ವಜವನ್ನು ಕಾಲಿನಿಂದ ಎತ್ತಿದ ಪಾಕ್ ಕ್ರಿಕೆಟಿಗ – ಅಭಿಮಾನಿಗಳಿಂದಲೂ ಆಕ್ರೋಶ
#KLRahul𓃵 Is The First Indian Batsman to Score a Fifty against 11 different opponents in T20is.(🇳🇿,🇱🇰 ,🏝,🇦🇺,🏴,🇮🇪,🇦🇫,🇧🇩,🏴,🇳🇦)#KLRahul | #BelieveKLR | #KLassyKLR | #INDvsSA | pic.twitter.com/5kqWiQX4zA
— 𝐀𝐀𝐒𝐇⚡ (@Oyye_Aash) September 29, 2022
ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್‍ಗಳ ನಷ್ಟಕ್ಕೆ 108 ಅಲ್ಪಮೊತ್ತ ಗಳಿಸಿತು. ಈ ಗುರಿ ಬೆನ್ನತ್ತಿದ ಟೀಂ ಇಂಡಿಯಾ 16.4 ಓವರ್‌ಗಳಲ್ಲಿ 8 ವಿಕೆಟ್‍ಗಳ ನಷ್ಟಕ್ಕೆ 110 ರನ್ ಸಿಡಿಸುವ ಮೂಲಕ ಗೆದ್ದು ಬೀಗಿತು. ಬೌಲಿಂಗ್‌ನಲ್ಲಿ ಅಶ್‌ದೀಪ್ ಸಿಂಗ್ ಮತ್ತು ಚಹರ್ ಮಿಂಚಿದರೆ, ಬ್ಯಾಟಿಂಗ್‌ನಲ್ಲಿ ಕೆ.ಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅಬ್ಬರಿಸಿದರು. ಪರಿಣಾಮ 3 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ.

Leave a Reply