ಈಗ ನಾನು ಇದ್ದಿದ್ರೆ ಕೆ.ಎಲ್‌.ರಾಹುಲ್‌ನ ಆರ್‌ಸಿಬಿಗೆ ಖರೀದಿ ಮಾಡ್ತಿದ್ದೆ: ವಿಜಯ್‌ ಮಲ್ಯ

ಮುಂಬೈ: ಈಗ ನಾನು ಏನಾದರೂ ಆರ್‌ಸಿಬಿ (RCB) ಫ್ರಾಂಚೈಸಿನಲ್ಲಿ ಇದ್ದಿದ್ದರೆ ಕನ್ನಡಿಗ ಕೆ.ಎಲ್‌.ರಾಹುಲ್‌ನನ್ನು (K.L.Rahul) ಬಿಡ್‌ ಮಾಡುತ್ತಿದ್ದೆ ಎಂದು ವಿಜಯ್‌ ಮಲ್ಯ (Vijay Mallya) ತಿಳಿಸಿದ್ದಾರೆ.

18 ವರ್ಷಗಳ ಸುದೀರ್ಘ ಕಾಯುವಿಕೆ ನಂತರ ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆದ್ದಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಮಾಜಿ ಮಾಲೀಕ ವಿಜಯ್‌ ಮಲ್ಯ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. 2008ರಲ್ಲಿ ಆರ್‌ಸಿಬಿ ತಂಡವನ್ನು ಸ್ಥಾಪಿಸಿದ ಕುರಿತು ಕುರಿತು ಹಲವು ಸ್ವಾರಸ್ಯಕರ ವಿಚಾರಗಳನ್ನು ಮಲ್ಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ಎಣ್ಣೆ’ ಪ್ರಚಾರಕ್ಕಾಗಿ ಆರ್‌ಸಿಬಿ ಖರೀದಿಸಿದೆ: RCB ಬಗ್ಗೆ ವಿಜಯ್‌ ಮಲ್ಯ ಹೇಳಿದ್ದೇನು?

ಆರ್‌ಸಿಬಿ ಫ್ರಾಂಚೈಸಿಯಲ್ಲಿ ಈಗ ಇದ್ದಿದ್ದರೆ ಹರಾಜಿನಲ್ಲಿ ಯಾವ ಆಟಗಾರರನ್ನು ಖರೀದಿಸುತ್ತಿದ್ದಿರಿ ಎಂಬ ಪ್ರಶ್ನೆಗೂ ಮಲ್ಯ ಉತ್ತರ ನೀಡಿದ್ದಾರೆ. ನಾಲ್ವರು ಆಟಗಾರರನ್ನು ಹೆಸರಿಸಿದ್ದಾರೆ. ಅವರು ದೇಶದ ಅತ್ಯುತ್ತಮ ಕ್ರಿಕೆಟಿಗರು ಎಂದು ಹೇಳಿಕೊಂಡಿದ್ದಾರೆ.

ಕೆ.ಎಲ್‌.ರಾಹುಲ್‌, ಜಸ್ಪ್ರಿತ್‌ ಬುಮ್ರಾ, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌ ಈ ನಾಲ್ವರನ್ನು ನಾನು ಆಯ್ಕೆ ಆರ್‌ಸಿಬಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಈ ನಾಲ್ವರು ನನ್ನಲ್ಲಿದ್ದರೆ ನನಗೆ ಬೇರೆ ಯಾರೂ ಬೇಕಾಗಿಲ್ಲ. ಆಗ ಖಂಡಿತವಾಗಿಯೂ ಟ್ರೋಫಿ ಗೆಲ್ಲುತ್ತಿದ್ದೆ ಎಂದು ಮಲ್ಯ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಕಾಲ್ತುಳಿತ ಕೇಸ್‌ – ಕೊಹ್ಲಿ ವಿರುದ್ಧ ದೂರು ದಾಖಲು

ಆರ್‌ಸಿಬಿ ಒಂದು ಕಾಲದಲ್ಲಿ ಸ್ಥಳೀಯ ಹುಡುಗ ಕೆಎಲ್ ರಾಹುಲ್ ಅವರನ್ನು ತಮ್ಮ ಆಟಗಾರ ಎಂದು ಕರೆದರೆ, ಉಳಿದ ಮೂವರು ಆಟಗಾರರನ್ನು ತಮ್ಮ ಆಟಗಾರ ಎಂದು ಕರೆಯಲು ಅವರಿಗೆ ಎಂದಿಗೂ ಸಾಧ್ಯವಾಗಿಲ್ಲ. ಪಂತ್, ಯಾದವ್‌ ಮತ್ತು ಬುಮ್ರಾ ಎಲ್ಲರೂ 2024 ರಲ್ಲಿ ಭಾರತದ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಮುಂಬರುವ ವರ್ಷಗಳಲ್ಲಿ ರಾಷ್ಟ್ರೀಯ ತಂಡದ ಬೆನ್ನೆಲುಬಾಗಿ ಕಾಣುತ್ತಾರೆ.