ಡೆಲ್ಲಿ ಮನೆಗೆ ಕೋಲ್ಕತ್ತಾ ಫೈನಲ್‍ಗೆ

ದುಬೈ: ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಡೆಲ್ಲಿ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಕೋಲ್ಕತ್ತಾ ತಂಡ ಜಯದೊಂದಿಗೆ 14ನೇ ಅವೃತ್ತಿ ಐಪಿಎಲ್‍ನ ಫೈನಲ್ ತಲುಪಿದೆ. ಈ ಮೂಲಕ ಕೋಲ್ಕತ್ತಾ ತಂಡ ಮೂರನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದಂತಾಗಿದೆ.

ಗೆಲ್ಲಲು 136 ರನ್ ಟಾರ್ಗೆಟ್ ಪಡೆದ ಕೋಲ್ಕತ್ತಾ ತಂಡಕ್ಕೆ ಆರಂಭಿಕ ಜೋಡಿ 96 ರನ್ (74 ಎಸೆತ) ಜೊತೆಯಾಟದ ಮೂಲಕ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾದರು. ಅಂತಿಮವಾಗಿ ಕೋಲ್ಕತ್ತಾ ತಂಡ 19. 5 ಓವರ್‍ ಗಳಲ್ಲಿ 136 ರನ್ ಸಿಡಿಸಿ ಜಯ ಗಳಿಸಿತು. ಇದನ್ನೂ ಓದಿ: T20 ವಿಶ್ವಕಪ್‍ಗೆ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ

ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 55 ರನ್ (41 ಎಸೆತ, 4 ಬೌಂಡರಿ, 3 ಸಿಕ್ಸ್) ಸಿಡಿಸಿ ಕಗಿಸೋ ರಬಾಡಗೆ ವಿಕೆಟ್ ಒಪ್ಪಿಸಿದರು. ಆದರೆ ಶುಭಮನ್ ಗಿಲ್ ಕಡೆಯವರೆಗೆ ಹೋರಾಡಿ 46 ರನ್ (46 ಎಸೆತ, 1 ಬೌಂಡರಿ 1 ಸಿಕ್ಸ್) ಸಿಡಿಸಿ ಅವೇಶ್ ಖಾನ್‍ಗೆ ವಿಕೆಟ್ ಒಪ್ಪಿಸಿದರು. ಅಂತಿಮ ಓವರ್‍ ನಲ್ಲಿ 6 ಬಾಲ್‍ಗೆ 7 ರನ್ ಬೇಕಾಗಿತ್ತು. ಅಶ್ವಿನ್ ಎಸೆದ ಓವರ್‍ ನ ಮೊದಲ ಎಸೆತ ತ್ರಿಪಾಠಿ ಒಂದು ರನ್ ತೆಗೆದರೆ, 2 ಬಾಲ್ ಡಾಟ್, 3ನೇ ಬಾಲ್ ಶಕೀಬ್ ಔಟ್ ಆದರೆ, 4 ನೇ ಎಸೆತದಲ್ಲಿ ನರೈನ್ ಔಟ್. ಕಡೆಯ 2 ಎಸೆತದಲ್ಲಿ 6 ರನ್ ಬೇಕಾಗಿತ್ತು. ಈ ವೇಳೆ ರಾಹುಲ್ ತ್ರಿಪಾಠಿ 5ನೇ ಎಸತವನ್ನು ಸಿಕ್ಸರ್ ಸಿಡಿಸಿ ರೋಚಕ ಜಯ ತಂದು ಕೊಟ್ಟರು.

ಈ ಮೊದಲು ಟಾಸ್ ಗೆದ್ದ ಕೋಲ್ಕತ್ತಾ ತಂಡ ಡೆಲ್ಲಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ 18 ರನ್ (12 ಎಸೆತ, 2 ಬೌಂಡರಿ, 1 ಸಿಕ್ಸ್ ಮತ್ತು ಶಿಖರ್ ಧವನ್ 36 ರನ್ (39 ಎಸೆತ, 1 ಬೌಂಡರಿ, 2 ಸಿಕ್ಸ್) ಸಡಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಜೊತೆಯಾದ ಮಾರ್ಕಸ್ ಸ್ಟೋಯ್ನಿಸ್ ಮತ್ತು ಶ್ರೇಯಸ್ ಅಯ್ಯರ್ ಸ್ಪಲ್ಪ ಮಟ್ಟಿನ ಚೇತರಿಕೆ ನೀಡಿದರು ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಲು ಕೋಲ್ಕತ್ತಾ ಬೌಲರ್‍ ಗಳು ಬಿಡಲಿಲ್ಲ. ಸ್ಟೋಯ್ನಿಸ್ 18 ರನ್ (23 ಎಸೆತ, 1 ಬೌಂಡರಿ) ಸಿಡಿಸಿ ಔಟ್ ಆದರು. ಇದನ್ನೂ ಓದಿ: ಟಿ20 ವಿಶ್ವಕಪ್‍ಗಾಗಿ ಟೀಂ ಇಂಡಿಯಾ ಸೇರ್ಪಡೆಗೊಂಡ ಐಪಿಎಲ್ ಸ್ಟಾರ್ಸ್

ಅಲ್ಪ ಮೊತ್ತ ಕಲೆ ಹಾಕಿದ ಡೆಲ್ಲಿ:
ಶ್ರೇಯಸ್ ಅಯ್ಯರ್ ಅಜೇಯ 30 ರನ್ 27 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಶಿಮ್ರಾನ್ ಹೆಟ್ಮಾಯೆರ್ 17 ರನ್ (10 ಎಸೆತ, 2 ಸಿಕ್ಸ್) ನೆರವಿನಿಂದ ತಂಡದ ಮೊತ್ತ 130 ಗಡಿದಾಟಿತು ಅಂತಿಮವಾಗಿ 20 ಓವರ್ ಅಂತ್ಯಕ್ಕೆ ಡೆಲ್ಲಿ ತಂಡ 135 ರನ್ ಕಲೆ ಹಾಕಿತು.

ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 2 ವಿಕೆಟ್ ಕಿತ್ತು ಮಿಂಚಿದರು. ಲೂಕಿ ಫಗ್ರ್ಯೂಸನ್ ಮತ್ತು ಶಿವಂ ಮಾವಿ ತಲಾ 1 ವಿಕೆಟ್ ಪಡೆದರು.

Comments

Leave a Reply

Your email address will not be published. Required fields are marked *