ಪುನೀತ್‌ಗಾಗಿ ಬರೆದ ಕಥೆಯಲ್ಲಿ ನಟ ವಿರಾಟ ನಟಿಸುತ್ತಾರಾ: ದಿನಕರ್ ತೂಗುದೀಪ್ ಸ್ಪಷ್ಟನೆ

ನ್ನಡ ಚಿತ್ರರಂಗದಲ್ಲಿ ಜೊತೆ ಜೊತೆಯಲಿ, ಸಾರಥಿ, ನವಗ್ರಹ ಸಿನಿಮಾಗಳ ಮೂಲಕ ಸಂಚಲನ ಸೃಷ್ಟಿಸಿದ ನಿರ್ದೇಶಕ ದಿನಕರ್ ತೂಗುದೀಪ ಇದೀಗ `ಕಿಸ್’ ಚಿತ್ರದ ನಟ ವಿರಾಟ್‌ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇನ್ನು ಈ ಹಿಂದೆ ಪುನೀತ್ ರಾಜ್‌ಕುಮಾರ್‌ಗಾಗಿ ಹೆಣೆದಿದ್ದ ಕಥೆಯನ್ನೇ ವಿರಾಟ್‌ಗೆ ನಿರ್ದೇಶನ ಮಾಡ್ತಾರಾ ಎಂಬ ಸುದ್ದಿಗೆ ಇದೀಗ ಸ್ಪಷ್ಟನೆ ಸಿಕ್ಕಿದೆ.

ದಿನಕರ್ ತೂಗುದೀಪ ಮಾಡಿದ್ದು ಕೆಲವೇ ಚಿತ್ರವಾಗಿದ್ರು, ಪವರ್‌ಫುಲ್ ಕಥೆಯೊಂದಿಗೆ ಬೆಳ್ಳಿತೆರೆಯಲ್ಲಿ ನಿರ್ದೇಶನದ ಮೂಲಕ ಕಮಾಲ್ ಮಾಡಿದ್ದಾರೆ. ಈ ಹಿಂದೆ ಪುನೀತ್ ರಾಜ್‌ಕುಮಾರ್‌ಗಾಗಿ ಒಂದೊಳ್ಳೆ ಕಥೆಯನ್ನ ದಿನಕರ್ ಮಾಡಿದ್ರು. ಆದರೆ ಪುನೀತ್ ಅಗಲಿಕೆಯ ಆ ಸಿನಿಮಾ ಕನಸು ಕನಸಾಗೇ ಉಳಿದಿದೆ. ಇದೀಗ ದಿನಕರ್ ನಿರ್ದೇಶನದಲ್ಲಿ `ಕಿಸ್’ ಚಿತ್ರದ ನಟ ವಿರಾಟ್ ಕಾಣಿಸಿಕೊಳ್ತಿದ್ದಾರೆ. ಅಪ್ಪುಗಾಗಿ ಹೆಣೆದಿದ್ದ ಕಥೆನಾ ಇದು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ನಟಿಸಿದ ಮೊದಲ ಚಿತ್ರ `ಕಿಸ್’ ಸಿನಿಮಾದಲ್ಲೇ ತಾನೆಂತಹ ಕಲಾವಿದ ಅಂತಾ ಪ್ರೂವ್ ಮಾಡಿದ್ದ ವಿರಾಟ್ ಈಗ ಅದ್ದೂರಿ ಲವರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜತೆಗೆ ದಿನಕರ್ ನಿರ್ದೇಶನದಲ್ಲಿ ನಟಿಸುವ ಅವಕಾಶ ಕೂಡ ಗಿಟ್ಟಿಸಿಕೊಂಡಿದ್ದಾರೆ. ರಘು ನಿಡುವಳ್ಳಿ ಬರೆದ ಕತೆಗೆ ದಿನಕರ್ ನಿರ್ದೇಶನ ಮಾಡ್ತಿದ್ದಾರೆ. ಪುನೀತ್‌ಗಾಗಿ ದಿನಕರ್ ಕಥೆ ಬರೆದಿದ್ರು ಆ ಕಥೆ ಹಾಗೇಯೇ ಇದೆ. ಮಾಸ್ ಕಮರ್ಷಿಯಲ್ ಕಥೆಗೆ ವಿರಾಟ್‌ನನ್ನು ನಾಯಕನಾಗಿ ಲಾಂಚ್ ಮಾಡ್ತಿದ್ದಾರೆ. ಪುನೀತ್‌ಗೆ ಬರೆದ ಕಥೆಗೂ ಈ ಹೊಸ ಪ್ರಾಜೆಕ್ಟ್ಗೂ ಯಾವುದೇ ಸಂಬಂಧವಿಲ್ಲ ಎಂಬ ಸ್ಪಷ್ಣನೆ ಸಿಕ್ಕಿದೆ. ಇದನ್ನೂ ಓದಿ: ರಕ್ತಸಿಕ್ತ ಅಧ್ಯಾಯಕ್ಕೆ ನಾಯಕನಾಗಲಿದ್ದಾರಾ ನೀನಾಸಂ ಸತೀಶ್?: 20 ಕೋಟಿ ಬಜೆಟ್, ಪ್ಯಾನ್ ಇಂಡಿಯಾ ಸಿನಿಮಾ

 

View this post on Instagram

 

A post shared by Viraat (@viraat_official)

ʻಕಿಸ್ʼ ಚಿತ್ರದಲ್ಲಿ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದ ನಟ ವಿರಾಟ್, ದಿನಕರ್ ನಿರ್ದೇಶನದ ಚಿತ್ರದಲ್ಲಿ ಫುಲ್ ಮಾಸ್ ಮತ್ತು ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಗಟ್ಟಿ ಕಥೆ ಜತೆ ಕಮರ್ಷಿಯಲ್ ಕಂಟೆಂಟ್ ಹೊತ್ತು ದಿನಕರ್ ಮತ್ತು ವಿರಾಟ್ ಮಿಂಚಲು ರೆಡಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *