ಕಿಕ್ಕೇರಿಸಿದಳು ಕಿಸ್ ಸುಶೀಲ!

ಬೆಂಗಳೂರು: ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ರ‍್ಯಾಪರ್ ಚಂದನ್ ಶೆಟ್ಟಿ ಹಾಡಿರೋ ಶೀಲ ಸುಶೀಲ ಡೋಂಟುವರಿ ಎಂಬ ಈ ಸಾಂಗ್ ಬಿಡುಗಡೆಯಾದ ದಿನದೊಪ್ಪತ್ತಿನಲ್ಲಿಯೇ ಸಂಚಲನವನ್ನೇ ಸೃಷ್ಟಿಸಿ ಬಿಟ್ಟಿದೆ. ಇದು ಕಿಸ್ ನ ಮೊದಲ ಹಾಡು. ಈ ಮೂಲಕ ಮೊದಲ ಚುಂಬನದಲ್ಲಿಯೇ ಮಧುರಾನುಭೂತಿ ಪಡೆದ ಖುಷಿಯೊಂದು ಚಿತ್ರತಂಡದ ಕೈ ಹಿಡಿದಿದೆ!

ರಾಷ್ಟ್ರಕೂಟ ಲಾಂಛನದಡಿಯಲ್ಲಿ ವಿ.ರವಿಕುಮಾರ್ ಕಿಸ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಯಾವುದಕ್ಕೂ ಕಡಿಮೆಯಾಗದಂತೆ ಎಲ್ಲವೂ ರಿಚ್ ಆಗಿಯೇ ಮೂಡಿ ಬರಬೇಕೆಂಬುದು ರವಿಕುಮಾರ್ ಅವರ ಆಸೆ. ಅದಕ್ಕೆ ನಿರ್ದೇಶಕ ಎ.ಪಿ. ಅರ್ಜುನ್ ಸರಿಯಾಗಿಯೇ ಸಾಥ್ ನೀಡಿದ್ದಾರೆ. ಈಗ ಬಿಡುಗಡೆಯಾಗಿರೋ ಶೀಲ ಸುಶೀಲ ಹಾಡಿನ ಮಾಧುರ್ಯ, ಮೇಕಿಂಗ್ ಎಲ್ಲವೂ ಕಿಸ್ ನ ಗಮ್ಮತ್ತು ಎಂಥಾದ್ದೆಂಬುದರ ಸುಳಿವನ್ನೂ ರವಾನಿಸಿದೆ.

ಯುವ ಉನ್ಮಾದವನ್ನೇ ಅರೆದು ತಯಾರಿಸಿದಂತಿರೋ ಈ ಹಾಡು ಯೂಟ್ಯೂಬಿನಲ್ಲಿ ಈಗಾಗಲೇ ನಾಲ್ಕೂ ಮುಕ್ಕಾಲು ಲಕ್ಷ ವೀವ್ಸ್ ಪಡೆದುಕೊಂಡಿದೆ. ಆ ಸಂಖ್ಯೆ ಗಂಟೆಯಿಂದ ಗಂಟೆಗೆ ಏರಿಕೊಳ್ಳುತ್ತಲೇ ಇದೆ. ಇಂಥಾ ಕಮಾಲ್ ಮಾಡಿರೋ ಈ ಹಾಡನ್ನು ನಿರ್ದೇಶಕ ಎ ಪಿ ಅರ್ಜುನ್ ಬರೆದಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ರ್ಯಾಪರ್ ಚಂದನ್ ಶೆಟ್ಟಿ ಎಲ್ಲರೂ ಹುಚ್ಚೇಳುವಂತೆ ಹಾಡಿದ್ದಾರೆ. ಕರ್ನಾಟಕದೊಳಗಿನ ಸುಂದರ ಪ್ರದೇಶಗಳಲ್ಲಿಯೇ ಚಿತ್ರೀಕರಣಗೊಂಡಿರೋ ಈ ಹಾಡಿನ ದೃಶ್ಯ ವೈಭವಕ್ಕೆ ಸಾಟಿಯಿಲ್ಲ.

ಎಲ್ಲಾ ಥರದಿಂದಲೂ ಕ್ರೇಜ್ ಸೃಷ್ಟಿಸಿರೋ ಈ ಹಾಡಿನ ಮೂಲಕವೇ ಕಿಸ್ ಸಿನಿಮಾ ನಿರೀಕ್ಷೆಯ ಮುಂಚೂಣಿಗೆ ಬಂದು ನಿಂತಿದೆ. ಇನ್ನು ಮುಂದೆ ಪ್ರತೀ ವಾರವೂ ಒಂದೊಂದು ಹಾಡುಗಳನ್ನು ಬಿಡುಗಡೆಗೊಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *